Friday, 22nd November 2024

“ವಿರಾಟ ಸಮಾವೇಶಕ್ಕೆ”ಇಂಡಿ ತಾಲೂಕಿನಿಂದ ಹತ್ತು ಸಾವಿರ ಜನ

ಇಂಡಿ: ಡಿಸೆಂಬರ್ ೨೨ರಂದು ಬೆಳಗಾವಿಯ ಸುವರ್ಣ ಸೌಧದ ಮುಂದೆ ನಡೆಯಲಿರುವ ಲಿಂಗಾಯತ ಪಂಚಮಸಾಲಿ ಸಮಾಜದ ೨ಎ ಮೀಸಲಾತಿ ಹಕ್ಕೊತ್ತಾಯದ “ವಿರಾಟ ಸಮಾವೇಶಕ್ಕೆ” ಇಂಡಿ ತಾಲೂಕಿನಿಂದ ಹತ್ತು ಸಾವಿರ ಜನ ಹೋಗಲು ತೀರ್ಮಾನಿಸ ಲಾಗಿದೆ ಎಂದು ಪಂಚಮಸಾಲಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ಸೋಮಶೇಖರ್ ದೇವರ ಹೇಳಿದರು.

ಮಂಗಳವಾರ ಪಟ್ಟಣದ ಸಿಂದಗಿ ರಸ್ತೆಯ ಶ್ರೀ ಶಾಂತೇಶ್ವರ ಮಂಗಲ ಕಾರ್ಯದಲ್ಲಿ ಡಿ.೨೨ರಂದು ಬೆಳಗಾವಿ ಸುವರ್ಣಸೌಧದ ಮುಂಭಾಗದಲ್ಲಿ ಹಮ್ಮಿಕೊಂಡ ೨ಎ ಮೀಸ ಲಾತಿ ಹಕ್ಕೊತ್ತಾಯ ಹಾಗೂ ವಿರಾಟ್ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾ ಡಿದರು.

ಸಾಲೋಟಗಿ, ಲಚ್ಯಾಣ, ಸಾತಲಗಾವ, ಜೇವೂರ ಸೇರಿದಂತೆ ದೊಡ್ಡ ದೊಡ್ಡ ಗ್ರಾಮಗಳ ಸಮಾಜ ಬಾಂಧವರು ಸ್ವತಹ ವಾಹನ ಗಳ ವ್ಯವಸ್ಥೆಯನ್ನು ಮಾಡಿಕೊಂಡಿದ್ದು ಒಂದೊ0ದು ಗ್ರಾಮದ ಸುಮಾರು ೨೫ ರಿಂದ ೩೦ ಕ್ರೂಜರ್ ಸೇರಿದಂತೆ ಇನ್ನಿತರ ವಾಹನಗಳ ಮುಖಾಂತರ ಬೆಳಗಾವಿಗೆ ಹೋಗಲು ನಿರ್ಧರಿಸಿದ್ದಾರೆ ಎಂದರು.

೨ಎ ಮೀಸಲಾತಿ ಹಕ್ಕುತಾಯ ಹೋರಾಟ ಸಮಿತಿ ಅಧ್ಯಕ್ಷ ಶಂಕರಗೌಡ ಪಾಟೀಲ್ ಡೊಮನಾಳ ಮಾತನಾಡಿ, ನಮ್ಮ ಮಕ್ಕಳಿಗೆ ಅಥವಾ ಮುಂದಿನ ಪೀಳಿಗೆಗೆ ಮೀಸಲಾತಿ ಅತ್ಯವಶ್ಯಕವಾಗಿದೆ. ಹೀಗಾಗಿ ಬೆಳಗಾವಿಯಲ್ಲಿ ನಡೆಯಲಿರುವ ಮೀಸಲಾತಿ ಒತ್ತಾಯ ದ ವಿರಾಟ್ ಸಮಾವೇಶದಲ್ಲಿ ಸುಮಾರು ೨೫ ಲಕ್ಷ ಜನರನ್ನು ಸೇರಿಸುವ ನಿರ್ಣಯ ಮಾಡಲಾಗಿದ್ದು, ಮಕ್ಕಳ ಭವಿಷ್ಯಕ್ಕಾಗಿ ಪ್ರತಿ ಮನೆಯಿಂದ ಕನಿಷ್ಠ ಇಬ್ಬರು ಸಮಾಜ ಬಾಂಧವರು ಕಡ್ಡಾಯವಾಗಿ ಬೆಳಗಾವಿಗೆ ಸ್ವಂತ ಖರ್ಚಿನಲ್ಲಿ ಬರಬೇಕು. ಆ ನಿಟ್ಟಿನಲ್ಲಿ ಈಗಾಗಲೇ ಪ್ರತಿ ಹಳ್ಳಿಗಳ ಯುವಕರು ಕಾರ್ಯಯೋನ್ಮುಖರಾಗಿದ್ದು ವಾಹನಗಳ ವ್ಯವಸ್ಥೆಯನ್ನು ಸಹ ಮಾಡಿಕೊಂಡಿದ್ದಾರೆ. ಇಂಡಿ ತಾಲೂಕಿನಿಂದ ಕನಿಷ್ಠ ೧೦ ಸಾವಿರ ಜನ ಬೆಳಗಾವಿಗೆ ಹೋಗಲು ನಿರ್ಧರಿಸಿದ್ದು ಸಂತಸ ತಂದಿದೆ ಎಂದರು.

ಸಮಾಜದ ತಾಲೂಕು ಅಧ್ಯಕ್ಷ ವಿ.ಎಚ್. ಬಿರಾದಾರ ಮಾತನಾಡಿ, ಡಿ.೨೧ರ ರಾತ್ರಿ ಬಸ್ಸುಗಳ ಮೂಲಕ ಸಮಾಜ ಬಾಂಧವರು ಪ್ರಯಾಣ ಬೆಳೆಸಬೇಕು. ಡಿ. ೨೨ರ ನಸುಕಿನ ಜಾವ ಖಾಸಗಿ ವಾಹನಗಳಲ್ಲಿ ಮತ್ತು ತಮ್ಮ ತಮ್ಮ ಸ್ವಂತ ವಾಹನಗಳಲ್ಲಿ ಹೊರಡು ತ್ತಿದ್ದು, ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಿಕೊಂಡು ಮೀಸಲಾತಿ ಹೋರಾಟದಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.

ಧನರಾಜ ಮುಜಗೊಂಡ, ಅನೀಲಗೌಡ ಬಿರಾದಾರ, ಉಮೇಶ ಲಚ್ಯಾಣ, ಬುದ್ದುಗೌಡ ಪಾಟೀಲ, ಸುಧಾಕರಗೌಡ ಬಿರಾದಾರ, ರವಿಗೌಡ ಪಾಟೀಲ, ಶರಣಗೌಡ ಬಂಡಿ ಮಾತನಾಡಿದರು. ವೇದಿಕಯಲ್ಲಿ ಶಾಂತುಗೌಡ ಬಿರಾದಾರ ಉಪಸ್ಥಿತರಿದ್ದರು.

ಪೂರ್ವಭಾವಿ ಸಭೆಯಲ್ಲಿ ಸಮಾಜದ ಪ್ರ.ಕಾರ್ಯದರ್ಶಿ ಶಿವಾನಂದ ಚಾಳಿಕಾರ, ಸುನಿಲ್‌ಗೌಡ ಬಿರಾದಾರ, ಬಾಳು ಮುಳಜಿ, ಅಶೋಕ್ ಕರೂರ, ಸಂಗಣ್ಣ ಹೊಸೂರ, ರಮೇಶ್ ಕಲ್ಯಾಣಿ, ಶಿವಾನಂದ ಹೊಸೂರ, ಶಿವರಾಜ ಕೆಂಗನಾಳ, ಸತೀಶ ಹತ್ತಿ, ಪ್ರದೀಪ ಮುರಗುಂಡಿ, ನೀಲಕಂಠಗೌಡ ಪಾಟೀಲ, ರಾಜುಗೌಡ ಪಾಟೀಲ, ಪ್ರಭು ಹೊಸಮನಿ, ರಮೇಶ್ ಬಿರಾದಾರ, ಅನಿಲ್‌ಕುಮಾರ್ ಬಿರಾದಾರ, ಶರಣು ಜೋಗುರ, ಪ್ರವೀಣ ಸಲಗರ, ಶ್ರೀಶೈಲ ಬಿರಾದಾರ, ರಾಘು ಕುಡಿಗನೂರ, ರಾಘು ಗಡಗಲಿ, ಅಂಬಣ್ಣ ಕವಟಗಿ, ಬಸುಗೌಡ ಪಾಟೀಲ ಸೇರಿದಂತೆ ಅನೇಕರು ಇದ್ದರು.