Sunday, 15th December 2024

ಜಾತ್ರಾ ಮಹೋತ್ಸವ, ಶ್ರೀ ತ್ರಿಶಕ್ತಿ ಮಾತಾ ಮಂದಿರ ಉದ್ಘಾಟನಾ ಕಾರ್ಯಕ್ರಮ

ಕೊಲ್ಹಾರ: ಪಟ್ಟಣದ ರಾಜಗುರು ಪಟ್ಟದ ಶೀಲವಂತ ಹಿರೇಮಠದಲ್ಲಿ ಶನಿವಾರ ಜಾತ್ರಾ ಮಹೋತ್ಸವ ಕಾರ್ಯಕ್ರಮ ಪೀಠಾಧಿಪತಿಗಳಾದ ಕೈಲಾಸನಾಥ ಮಹಾಸ್ವಾಮಿಜಿಗಳ ನೇತೃತ್ವದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು.

ಜಾತ್ರೆ ಹಾಗೂ ಮಹಾಶಿವರಾತ್ರಿಯ ಪ್ರಯುಕ್ತ ರಥೋತ್ಸವ, ೧೦೦೮ ಶಿವಲಿಂಗಳ ದರ್ಶನ, ಸಹಸ್ರ ಮುತ್ತೈದೆಯರ ಉಡಿ ತುಂಬುವದು ಅನ್ನದಾತ ರೈತರಗೆ ಸನ್ಮಾನ, ಜನಜಾಗೃತಿ ಧರ್ಮಸಭೆಯ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಹಿರೇಮಠದ ಶಿವಪ್ರಕಾಶ ಶಿವಾಚಾರ್ಯರು, ಚಿಮ್ಮಲಗಿಯ ಸಿದ್ದರೇಣುಕಾ ಶಿವಾಚಾರ್ಯರು, ಮುಳವಾಡ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯರು, ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ, ಬಿಜೆಪಿ ಮುಖಂಡ ಸೋಮನಗೌಡ ಪಾಟೀಲ್, ಉಸ್ಮಾನ್ ಪಟೇಲ್ ಖಾನ್, ಚಿನ್ನಪ್ಪ ಗಿಡ್ಡಪ್ಪಗೋಳ, ಬಿ.ಎಸ್ ಹಂಗರಗಿ, ರಾಜಶೇಖರ ಶೀಲವಂತ, ಬನಪ್ಪ ಬಾಲಗೊಂಡ, ಪ.ಪಂ ಸದಸ್ಯರಾದ ದಸ್ತಗೀರ ಕಲಾದಗಿ, ಬಾಬು ಬಜಂತ್ರಿ ಇತರರು ಇದ್ದರು.