Wednesday, 25th December 2024

Jobs Alert: ಸದ್ಯದಲ್ಲೇ ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ನಿಂದ ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರಿಗೆ ನೇಮಕಾತಿ

ssc exam

ಬೆಂಗಳೂರು: ಸರ್ಕಾರಿ ನೌಕರಿಯ (Government jobs) ಕನಸು ಕಾಣುತ್ತಿರುವವರಿಗೆ ಭರ್ಜರಿ ಸಿಹಿ ಸುದ್ದಿಯೊಂದು (Jobs alert) ಸಿಕ್ಕಿದೆ. ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ) 2025-26ರ ಸಾಲಿನ ತನ್ನ ಪರೀಕ್ಷಾ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿದೆ. 2025ರಲ್ಲಿ ಪೋಲಿಸ್‌ ಇಲಾಖೆ ಸೇರಿದಂತೆ CGL, CHSL, MTS, JE ಸೇರಿ ಹಲವು ಹುದ್ದೆಗಳ ನೇಮಕಾತಿಯನ್ನು SSC ಮಾಡಲಿದೆ.

ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವ ಯುವಕರು ಸ್ಟಾಫ್ ಸೆಲೆಕ್ಷನ್ ಕಮಿಷನ್‌ನ ಅಧಿಕೃತ ವೆಬ್‌ಸೈಟ್‌ಗೆ ssc.gov.in ಲಾಗ್ ಇನ್ ಮಾಡುವ ಮೂಲಕ SSC ಪರೀಕ್ಷೆಯ ಕ್ಯಾಲೆಂಡರ್ 2025 ಅನ್ನು ಡೌನ್‌ಲೋಡ್ ಮಾಡಬಹುದು. ಮುಂದಿನ ವರ್ಷಕ್ಕೆ ವೇಳಾಪಟ್ಟಿಯನ್ನು ತಯಾರು ಮಾಡಿಕೊಂಡು ಪರೀಕ್ಷೆಗೆ ತಯಾರಿ ಆರಂಭಿಸಬಹುದು. ಪರೀಕ್ಷೆಗಳು ಯಾವಾಗ ನಡೆಯಲಿದೆ ಎಂದು ಇಲ್ಲಿ ತಿಳಿದುಕೊಳ್ಳಿ.

ಮಾಧ್ಯಮ ವರದಿಗಳ ಪ್ರಕಾರ, ಪೊಲೀಸ್ ಇಲಾಖೆಯಲ್ಲಿ ಕಾನ್ಸ್‌ಟೇಬಲ್ ನೇಮಕಾತಿಗಾಗಿ ಅಧಿಸೂಚನೆಯನ್ನು 2 ಸೆಪ್ಟೆಂಬರ್ 2025 ರಂದು ಬಿಡುಗಡೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 1, 2025 ಆಗಿರುತ್ತದೆ. ಸಂಯೋಜಿತ ಗ್ರಾಜುಯೇಟ್ ಲೆವೆಲ್ ಪರೀಕ್ಷೆ 2025 ಜೂನ್-ಜುಲೈ 2025 ರಲ್ಲಿ ನಡೆಯಲಿದೆ. ನೋಂದಣಿಯು ಏಪ್ರಿಲ್ 22ರಿಂದ ಪ್ರಾರಂಭವಾಗಲಿದ್ದು, ಮೇ 21 ರವರೆಗೆ ಮುಂದುವರಿಯುತ್ತದೆ. ಕಂಬೈನ್ಡ್ ಹೈಯರ್ ಸೆಕೆಂಡರಿ ಲೆವೆಲ್ (CHSL) ಪರೀಕ್ಷೆಯು ಜುಲೈ-ಆಗಸ್ಟ್ 2025 ರಲ್ಲಿ ನಡೆಯಲಿದೆ.

ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ (CJL) ಪರೀಕ್ಷೆಯು ಜೂನ್-ಜುಲೈ 2025 ರಲ್ಲಿ ನಡೆಯಲಿದೆ. ಜೂನಿಯರ್ ಇಂಜಿನಿಯರ್ (ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್) ಪರೀಕ್ಷೆಯು ಅಕ್ಟೋಬರ್-ನವೆಂಬರ್ 2025 ರಲ್ಲಿ ನಡೆಯಲಿದೆ. ಸ್ಟೆನೋಗ್ರಾಫರ್, ಸಬ್ ಇನ್ಸ್‌ಪೆಕ್ಟರ್, ಜೂನಿಯರ್ ಹಿಂದಿ ಭಾಷಾಂತರಕಾರ ಹುದ್ದೆಗಳನ್ನು ಸಹ 2025 ರಲ್ಲಿ ಭರ್ತಿ ಮಾಡಲಾಗುತ್ತದೆ. ಇದೀಗ ಸಂಭವನೀಯ ದಿನಾಂಕಗಳನ್ನು ಕ್ಯಾಲೆಂಡರ್‌ನಲ್ಲಿ ಉಲ್ಲೇಖಿಸಲಾಗಿದೆ. ಪರೀಕ್ಷೆಯ ದಿನಾಂಕಗಳು ಮತ್ತು ಅಧಿಸೂಚನೆಗಳಲ್ಲಿನ ಬದಲಾವಣೆಗಳಿಗಾಗಿ ಅಭ್ಯರ್ಥಿಗಳು ನಿಯಮಿತವಾಗಿ ವೆಬ್‌ಸೈಟ್‌ಗೆ ಭೇಟಿ ನೀಡುತ್ತಿರಬೇಕು.

SSC ಪರೀಕ್ಷೆಯ ಕ್ಯಾಲೆಂಡರ್ 2025

JSA/LDC ಗ್ರೇಡ್ ಲಿಮಿಟೆಡ್ ವಿಭಾಗೀಯ ಸ್ಪರ್ಧಾತ್ಮಕ ಪರೀಕ್ಷೆ (DoPT) 28/2/2025 20/3/2025 ಏಪ್ರಿಲ್-ಮೇ 2025

SSA/UDC ಗ್ರೇಡ್ ಲಿಮಿಟೆಡ್ ವಿಭಾಗೀಯ ಸ್ಪರ್ಧಾತ್ಮಕ ಪರೀಕ್ಷೆ 2024 (DoPT) 6/3/2025 26/3/2025 ಏಪ್ರಿಲ್-ಮೇ 2025

ASO ಗ್ರೇಡ್ ಲಿಮಿಟೆಡ್ (ASO) ವಿಭಾಗದ ಸ್ಪರ್ಧಾತ್ಮಕ ಪರೀಕ್ಷೆ 2022-2024 20/3/2025 9/4/2025 ಏಪ್ರಿಲ್-ಮೇ 2025

SSC ಆಯ್ಕೆಯ ಪೋಸ್ಟ್ ಪರೀಕ್ಷೆ ಹಂತ-XIII, 2025 16/04/2025 15/05/2025 ಜೂನ್-ಜುಲೈ 2025

SSC CGL CGL 2025 22/04/2025 21/05/2025 ಜುಲೈ-ಆಗಸ್ಟ್ 2025

SSC ದೆಹಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್/CAPF, SSC (CAPF) SI 2025 16/05/2025 14/06/2025 ಜುಲೈ-ಆಗಸ್ಟ್ 2025

SSC CHSL 2025 (SSC CHSL) 27/05/2025 25/06/2025 ಜುಲೈ-ಆಗಸ್ಟ್ 2025

SSC MTS, ಹವಾಲ್ದಾರ್ ನೇಮಕಾತಿ SSC MTS2025, 26/06/2025 25/07/2025 ಸೆಪ್ಟೆಂಬರ್ – ಅಕ್ಟೋಬರ್ 2025

SSC ಸ್ಟೆನೋಗ್ರಾಫರ್ ಗ್ರೇಡ್ C, D ನೇಮಕಾತಿ 2025 29/07/2025 21/08/2025 ಅಕ್ಟೋಬರ್-ನವೆಂಬರ್ 2025

SSC JE (ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್) JE ನೇಮಕಾತಿ 2025 05/08/2025 28/08/2025 ಅಕ್ಟೋಬರ್-ನವೆಂಬರ್ 2025

SSC ಸಂಯೋಜಿತ ಹಿಂದಿ ಭಾಷಾಂತರಕಾರರ ನೇಮಕಾತಿ 2025 26/08/2025 18/09/2025 ಅಕ್ಟೋಬರ್-ನವೆಂಬರ್ 2025

SSC ದೆಹಲಿ ಪೊಲೀಸ್ (ಕಾರ್ಯನಿರ್ವಾಹಕ) ನೇಮಕಾತಿ 2025 02/09/2025 01/10/2025 ನವೆಂಬರ್-ಡಿಸೆಂಬರ್ 2025

SSC ದೆಹಲಿ ಪೊಲೀಸ್ ಕಾನ್ಸ್‌ಟೇಬಲ್ (ಚಾಲಕ) ನೇಮಕಾತಿ 2025 19/09/2025 12/10/2025 ನವೆಂಬರ್-ಡಿಸೆಂಬರ್ 2025

SSC ದೆಹಲಿ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ (ಸಚಿವಾಲಯ) ನೇಮಕಾತಿ 2025 7/10/2025 05/11/2025 ಡಿಸೆಂಬರ್ 2025 – ಜನವರಿ 2026

SSC ದೆಹಲಿ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ (AWO, TPO) ನೇಮಕಾತಿ 2025 14/10/2025 06/11/2025 ಡಿಸೆಂಬರ್ 2025 – ಜನವರಿ 2026

SSC GD ಕಾನ್ಸ್‌ಟೇಬಲ್ ನೇಮಕಾತಿ SSC GD 2025 11/11/2025 15/12/2025 ಮಾರ್ಚ್-ಏಪ್ರಿಲ್ 2026

JSA/LDC ಗ್ರೇಡ್ ಲಿಮಿಟೆಡ್ ನೇಮಕಾತಿ 2025 16/12/2025 05/01/2026 ಜನವರಿ-ಫೆಬ್ರವರಿ 2026

SSA/UDA ಗ್ರೇಡ್ ಲಿಮಿಟೆಡ್ ಇಲಾಖಾ ಸ್ಪರ್ಧಾತ್ಮಕ ಪರೀಕ್ಷೆ 2025 23/12/2025 12/01/2026 ಜನವರಿ-ಫೆಬ್ರವರಿ 2026

ASO ಗ್ರೇಡ್ ಲಿಮಿಟೆಡ್ ಇಲಾಖಾ ಸ್ಪರ್ಧಾತ್ಮಕ ಪರೀಕ್ಷೆ 2025 15/1/2026 04/2/2026 Mar-Apr 2026

ಗ್ರೇಡ್ ಸ್ಟೆನೋಗ್ರಾಫರ್ ಲಿಮಿಟೆಡ್ ವಿಭಾಗೀಯ ಸ್ಪರ್ಧಾತ್ಮಕ ಪರೀಕ್ಷೆ 30/10/2025 19/11/2025 ಜಬ್-ಫೆಬ್ರವರಿ 2026

ಇದನ್ನು ಓದಿ: Job News: ಇಸ್ರೋದಲ್ಲಿ 103 ಕಾಯಂ ಹುದ್ದೆಗಳಿವೆ, ಇಂದೇ ಅರ್ಜಿ ಸಲ್ಲಿಸಿ!