Saturday, 11th January 2025

Just Married Movie: ಜ.14ಕ್ಕೆ ಬಿಡುಗಡೆಯಾಗಲಿದೆ ʼಜಸ್ಟ್ ಮ್ಯಾರೀಡ್ʼ ಚಿತ್ರದ ʼಕೇಳೋ ಮಚ್ಚಾʼ ಹಾಡು

Just Married Movie

ಬೆಂಗಳೂರು: ʼಜಸ್ಟ್‌ ಮ್ಯಾರೀಡ್ʼ (Just Married Movie) ಚಿತ್ರ ತಂಡ ʼಕೇಳೋ ಮಚ್ಚಾʼ ಎಂಬ ಎರಡನೇ ಗೀತೆಯನ್ನು ಇಂದು ಘೋಷಿಸಿದೆ. ʼಅಭಿಮಾನಿಯಾಗಿ ಹೋದೆʼ ಎಂಬ ಮಾಧುರ್ಯ ಪ್ರಧಾನ ಗೀತೆಯ ನಂತರ ಇದೀಗ ಒಂದು ಪಾರ್ಟಿ ಗೀತೆಯನ್ನು ಘೋಷಿಸುವ ಮೂಲಕ ಮತ್ತೊಮ್ಮೆ ಸಿನಿ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ.

ʼಜಸ್ಟ್ ಮ್ಯಾರೀಡ್ʼ‌ ಹಾಡುಗಳು ವಿವಿಧ ಭಾವನೆಗಳನ್ನು ಬಿಂಬಿಸುವ ವಿವಿಧ ಪ್ರಕಾರಗಳಲ್ಲಿ ಇರಬಹುದು ಎಂಬುದು ಸಿನಿಪ್ರಿಯರ ಊಹೆ. ʼಕೇಳೋ ಮಚ್ಚಾʼ ಎಂಬ ಪಾರ್ಟಿ ಹಾಡನ್ನು ಇದೇ ಜನವರಿ 14ರಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅವರು ಡಿಜಿಟಲ್‌ ಬಿಡುಗಡೆ ಮಾಡುವುದಾಗಿ ಚಿತ್ರ ತಂಡ ಇಂದು ಘೋಷಿಸಿದೆ. ಈ‌ ಹಾಡಿಗೆ ನಾಗಾರ್ಜುನ ಶರ್ಮಾ ಸಾಹಿತ್ಯ ರಚನೆ ಮಾಡಿದ್ದು,‌ ನಕಾಶ್ ಅಜೀಜ್‌ ಹಾಡಿರುತ್ತಾರೆ.

ಸಿ.ಆರ್‌. ಬಾಬಿ ನಿರ್ದೇಶನದ “ಜಸ್ಟ್‌ ಮ್ಯಾರೀಡ್” ಕೌಟುಂಬಿಕ ಬಾಂಧವ್ಯಗಳ ಮೌಲ್ಯವನ್ನು ತಿಳಿಸುವ ರೊಮ್ಯಾಂಟಿಕ್‌ ಡ್ರಾಮಾ ಚಿತ್ರವಾಗಿದ್ದು, ಇದರಲ್ಲಿ ಶೈನ್‌ ಶೆಟ್ಟಿ, ಅಂಕಿತಾ ಅಮರ್‌, ಶೃತಿ ಹರಿಹರನ್, ದೇವರಾಜ್‌, ಶ್ರುತಿ, ಅನೂಪ್‌ ಭಂಡಾರಿ, ಅಚ್ಯುತ್‌ ಕುಮಾರ್‌ ಮುಂತಾದವರು ನಟಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Winter Fashion 2025: ಚಳಿಗಾಲದ ಟಾಪ್ ಲಿಸ್ಟ್‌ಗೆ ಸೇರಿದ ಬ್ರೈಟ್ ಬಣ್ಣದ ಫ್ಯಾಷನ್‌ವೇರ್ಸ್!

ಚಿತ್ರಕ್ಕೆ ಬಿ. ಅಜನೀಶ್‌ ಲೋಕ್‌ ನಾಥ್‌ ಸಂಗೀತ ಸಂಯೋಜನೆ ಮಾಡಿರುತ್ತಾರೆ, ಹಾಗು ಸಿ. ಆರ್‌ ಬಾಬಿ ಮತ್ತು ಬಿ. ಅಜನೀಶ್‌ ಲೋಕ್‌ ನಾಥ್‌ ಆಬ್ಸ್‌ ಸ್ಟೂಡಿಯೋಸ್‌ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ನಿರ್ಮಿಸಿರುತ್ತಾರೆ.

Leave a Reply

Your email address will not be published. Required fields are marked *