Sunday, 15th December 2024

ಸಚಿವ ಅಶ್ವಥ್ ನಾರಾಯಣ್ ಹೇಳಿಕೆ ಖಂಡನೀಯ: ಕಲ್ಲು ದೇಸಾಯಿ

ಕೊಲ್ಹಾರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಸಚಿವ ಸಿ.ಅಶ್ವಥ್ ನಾರಾಯಣ್ ಅವರ ಪ್ರಚೋ ದನಕಾರಿ ಹೇಳಿಕೆ ಖಂಡನೀಯ ಎಂದು ಮಾಜಿ ಜಿ ಪಂ ಸದಸ್ಯ ಕಲ್ಲು ದೇಸಾಯಿ ಆಕ್ರೂಶವ್ಯಕ್ತಪಡಿಸಿದರು.

ಕೊಲ್ಹಾರ ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ರಾಜ್ಯಾದ್ಯಂತ ಪಕ್ಷಾತೀತ ಹಾಗೂ ಜಾತ್ಯತೀತ ವಾಗಿ ಎಲ್ಲರ ಪ್ರೀತಿ ವಿಶ್ವಾಸ ಗಳಿಸಿರುವ ನಾಯಕ ಸಿದ್ದರಾಮಯ್ಯನವರ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡಿ ಅಶ್ವಥ್ ನಾರಾಯಣ ಬಿಜೆಪಿಯ ಸಂಸ್ಕೃತಿಯನ್ನು ತೋರಿಸಿದ್ದಾರೆ ರಾಜ್ಯದ ಜನತೆ ಇದನ್ನೆಲ್ಲ ಗಮನಿಸುತ್ತಿದ್ದಾರೆ, ಮುಂದಿನ ದಿನಮಾನಗಳಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಹರಿಹಾಯ್ದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಬಿ ಪಕಾಲಿ ಮಾತನಾಡುತ್ತ ರಾಜ್ಯ ಬಿಜೆಪಿ ಸರಕಾರ ಜನರ ವಿಶ್ವಾಸ ಕಳೆದು ಕೊಂಡಿದೆ. ಕೇಂದ್ರ ಬಿಜೆಪಿ ನಾಯಕರನ್ನು ರಾಜ್ಯಕ್ಕೆ ಕರೆಯಿಸಿಕೊಳ್ಳುವ ಮೂಲಕ ತನ್ನ ವೈಫಲ್ಯಗಳನ್ನು ಮರೆಮಾಚುವ ಕೆಲಸ ಮಾಡುವಲ್ಲಿ ನಿರತವಾಗಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಮುಖಂಡ ಸಿ.ಎಸ್ ಗಿಡ್ಡಪ್ಪಗೋಳ, ಶ್ರೀಶೈಲ ಗೌಡರ, ದಸ್ತಗೀರ ಕಾಖಂಡಕಿ, ಹನೀಪ ಮಕಾನದಾರ, ರಿಯಾಜ ಕಂಕರಪೀರ, ಸುರೇಶ ಗಿಡ್ಡಪ್ಪಗೋಳ, ತಿಪ್ಪಣ್ಣ ಕುದರಿ ಇತರರು ಇದ್ದರು.