ಬೆಂಗಳೂರು: ಕನ್ನಡದಲ್ಲಿ ಉತ್ತಮ ಕಂಟೆಂಟ್‌ವುಳ್ಳ ಚಿತ್ರಗಳೇ ಹೆಚ್ಚಾಗಿ ಜನರನ್ನು ತಲುಪುತ್ತಿದೆ. ಅಂತಹ ಉತ್ತಮ ಹಾಗೂ ವಿಭಿನ್ನ ಕಂಟೆಂಟ್ ಹೊತ್ತು ʼನಾಗವಲ್ಲಿ ಬಂಗಲೆʼ (Kannada New Movie) ನಿರ್ಮಾಣವಾಗಿದೆ. ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ,ಮೋಹ, ಮದ, ಮತ್ಸರ ಈ ಆರು ಗುಣಗಳನ್ನು ಪ್ರತಿನಿಧಿಸುವ ಆರು ಹುಡುಗಿಯರು (ಪಾತ್ರಗಳು) ʼನಾಗವಲ್ಲಿ ಬಂಗಲೆʼ ಯನ್ನು ಪ್ರವೇಶಿಸುತ್ತಾರೆ. ಈ ಆರು ಪಾತ್ರಗಳ ಜತೆಗೆ ಮತ್ತೊಂದು ವಿಶೇಷ ಪಾತ್ರ ಸಹ ಇದೆ. ಈ ಆರು ಪಾತ್ರಗಳ ಪ್ರವೇಶದ ನಂತರ ʼನಾಗವಲ್ಲಿ ಬಂಗಲೆʼ ಯಲ್ಲಿ ಏನೆಲ್ಲಾ ಆಗುತ್ತದೆ. ಎಂಬುದೆ ಚಿತ್ರದ ಪ್ರಮುಖ ಕಥಾಹಂದರ.
ಈಗಾಗಲೇ ಚಿತ್ರೀಕರಣ ಮುಗಿಸಿರುವ ʼನಾಗವಲ್ಲಿ ಬಂಗಲೆʼ ಯನ್ನು ಸೆನ್ಸಾರ್ ಮಂಡಳಿ ಕೂಡ ವೀಕ್ಷಿಸಿದ್ದು, ‘U/A’ ಪ್ರಮಾಣ ಪತ್ರವನ್ನು ನೀಡಿದೆ. ಬೆಂಗಳೂರು, ನೆಲಮಂಗಲದ ಆಸುಪಾಸಿನಲ್ಲಿ ಚಿತ್ರೀಕರಣವಾಗಿದೆ.
ಈ ಚಿತ್ರವು ಹಂಸ ವಿಷನ್ಸ್ ಲಾಂಛನದಲ್ಲಿ ನೆಲ ಮಹೇಶ್ ಮತ್ತು ನೇವಿ ಮಂಜು ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕವಿ ರಾಜೇಶ ಅವರ ನಿರ್ದೇಶನ, ರೋಹನ್ ದೇಸಾಯಿರವರ ಸಂಗೀತ, ಜೆ. ಎಂ. ಪ್ರಹ್ಲಾದ್ ಅವರ ಕಥೆ -ಚಿತ್ರಕಥೆ-ಸಂಭಾಷಣೆ ಈ ಚಿತ್ರಕ್ಕಿದೆ.
ಫೆಬ್ರುವರಿಯಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲು ಅಣಿಯಾಗುತ್ತಿರುವ ಈ ಚಿತ್ರದ ಪ್ರಮುಖ ತಾರಾಬಳಗದಲ್ಲಿ ನೆ.ಲ.ನರೇಂದ್ರಬಾಬು, ತೇಜಸ್ವಿನಿ, ನೇವಿ ಮಂಜು, ರೂಪಶ್ರೀ ಮುಂತಾದವರಿದ್ದಾರೆ.
ಈ ಸುದ್ದಿಯನ್ನೂ ಓದಿ | New Year Mens Partywear 2024: ಪರ್ಫೆಕ್ಟ್ ಇಮೇಜ್ ನೀಡುವ ನ್ಯೂ ಇಯರ್ ಮೆನ್ಸ್ ಪಾರ್ಟಿವೇರ್