Friday, 29th November 2024

ಕರವೇ ವತಿಯಿಂದ ಸದಸ್ಯರ ನೋಂದಣಿ ಅಭಿಯಾನ

ಪಾವಗಡ:  ತಾಲ್ಲೂಕು ಕ ರ ವೇ ವತಿಯಿಂದ ಇಂದು ರಸ್ತೆಬದಿ ನೆಟ್ಟಿರುವ ಗಿಡ ಮರಗಳಿಗೆ ನೀರು ಹಾಕುವ ಕಾರ್ಯಕ್ರಮ ಮತ್ತು ಸದಸ್ಯರ ನೋಂದಣಿ ಅಭಿಯಾನಕ್ಕೆ ಕ ರ ವೇ ರಾಜ್ಯ ಉಪಾಧ್ಯಕ್ಷ ಉಮೇಶ್ ಗೌಡ ಚಾಲನೆ ನೀಡಿದರು.

ಜನಪ್ರತಿನಿಧಿಗಳು ಸದನದಲ್ಲಿ ರಾಜ್ಯದ ಸಮಸ್ಯೆ ಮತ್ತು ರೈತರ ಕೂಲಿ ಕಾರ್ಮಿಕರ ಪರ ದ್ವನಿ ಎತ್ತುವುದು ಮರೆತು ಕೆಲಸಕ್ಕೆ ಬಾರದ ವಿಚಾರ ಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಬರಗಾಲ ಮತ್ತು ಕರೋನ ಮಹಾಮಾರಿಗೆ ತತ್ತತಿಸಿದೆ. ಕುಡಿಯಲು ನೀರಿಲ್ಲದೆ ಅನ್ನ ಇಲ್ಲದೆ ಪಾರದಾಡುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಆದರೆ ಜನಪ್ರತಿನಿಧಿಗಳು ಮಾತ್ರ ಐಷಾರಾಮಿ ಜೀವನ ನೆಡೆಸುತ್ತಿದ್ದಾರೆ
ರಾಜ್ಯದಲ್ಲಿ ಕನ್ನಡಪರ ಸಂಘಟನೆಗಳು ಇಲ್ಲದೆ ಒಗಿದ್ದರೆ ಇಷ್ಟೋತಿಗೆ ಕನ್ನಡ ಮಾಯವಾಗಿ ಪರಿಭಾಷಿಕರು ತನ್ನ ಅಸ್ತಿತ್ವದಲ್ಲಿ ರಾಜ್ಯ ಇಟ್ಟುಕೊಳ್ಳುತ್ತಿದ್ದರು.

ಸರ್ಕಾರಗಳನ್ನು ಎಚ್ಚರಿಸುವ ಕೆಲಸ ನಮ್ಮ ಸಂಘಟನೆಗಳು ಮಾಡುತ್ತಿವೆ. ಸಾರ್ವಜನಿಕ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ ತಮ್ಮ ಕೈಲಾದಷ್ಟು ಸಂಘಟನೆಗಳು ಸಮಾಜಮುಖಿ ಕಾರ್ಯ ಮಾಡುತ್ತಿವೆ ಎಂದರು.

ಪ್ರಧಾನ ಕಾರ್ಯದರ್ಶಿ ಓಂಕಾರನಾಯಕ ಮಾತನಾಡಿ, ಪಾವಗಡ ತಾಲ್ಲೂಕು ನಾಗಲಮಡಿಕೆ ಹೋಬಳಿಯ ಬಹು ದೊಡ್ಡ ಸೋಲಾರ್ ಪಾರ್ಕ್ ನಿರ್ಮಾಣ ಮಾಡಿದ್ದು ಸ್ವಾಗತಾರ್ಹ ಆದರೆ ಸ್ಥಳೀಯರಿಗೆ ಮತ್ತು ಕನ್ನಡಿಗರಿಗೆ ಉದ್ಯೋಗ ನೀಡದಿರುವುದು ದುರಂತ ಎಂದು ತಿಳಿಸಿದರು.

ಪಾವಗಡ ತಾಲ್ಲೂಕಿಗೆ ಶುದ್ಧ ಕುಡಿಯುವ ನೀರಿಗೆ ಹೋರಾಟ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಗಡಿ ತಾಲ್ಲೂಕು ಎಂದು ಸರ್ಕಾರಗಳ ನಿರ್ಲಕ್ಷ್ಯ ಧೋರಣೆ ನಿಲ್ಲಿಸಬೇಕು ಎಂದರು ಸರ್ಕಾರ ಖಾಸಗಿ ಕಂಪನಿಗಳನ್ನು ತೆರೆದು ಗುಳೆ ಹೋಗುವುದನ್ನು ತಪ್ಪಿಸಬೇಕು. ತಾಲ್ಲೂಕಿಗೆ ಕನ್ನಡ ಭವನ ನಿರ್ಮಾಣ ಮಾಡಬೇಕು.

ತಾಲ್ಲೂಕಿನ ಪ್ರತಿ ಹಳ್ಳಿಯಲ್ಲೂ ನಮ್ಮ ಕ ರ ವೇ ಸಂಘಟನೆ ಮಾಡುತ್ತೇವೆ ರಾಜ್ಯದ ಜ್ವಾಲಾನಂತ ಸಮಸ್ಯಗಳಿಗೆ ಇಲ್ಲಿನ ನೆಲ ಜಲ ಗಾಳಿ ಭಾಷೆ ವಿಚಾರದಲ್ಲಿ ಹೋರಾಟಕ್ಕೆ ನಮ್ಮ ಸಂಘಟನೆ ಸದಾ ನಿಲ್ಲುತ್ತದೆ ಎಂದರು.