ಸಿಂಧನೂರು: ಮರಾಠಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡಿರುವುದನ್ನು ಖಂಡಿಸಿ (ಪ್ರವೀಣ್ ಕುಮಾರ್ ಶೆಟ್ಟಿ) ಬಣದ ಕರವೇ ಕಾರ್ಯಕರ್ತರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.
ಈ ವೇಳೆ ಸಂಘದ ತಾಲೂಕು ಅಧ್ಯಕ್ಷ ವೀರೇಶ್ ಭಾವಿಮನಿ ಮಾತನಾಡಿ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯವನ್ನು ಹಾಳು ಮಾಡಲು ಮುಂದಾಗಿದೆ ಮರಾಠ ಅಭಿವೃದ್ಧಿ ಪ್ರಾಧಿಕಾರ ಆದೇಶ ಹೊರಡಿಸಿ ಅಭಿವೃದ್ಧಿ ಪ್ರಾಧಿಕಾರವನ್ನು ಸೃಷ್ಟಿಸಿ ಸರ್ಕಾರ ದಿಂದ 50 ಕೋಟಿ ರೂಪಾಯಿ ಹಣವನ್ನು ಮೀಸಲು ಇಟ್ಟಿದ್ದು ಖಂಡಿಸುತ್ತೇವೆ.
ಕನ್ನಡ ಪ್ರಾಧಿಕಾರಕ್ಕೆ ಸರ್ಕಾರ ಕೇವಲ 5 ಕೋಟಿ ಹಣವನ್ನು ಮೀಸಲು ಇಟ್ಟಿರುವುದು ಸಂಪೂರ್ಣ ಧಿಕ್ಕರಿಸಬೇಕು ಕನ್ನಡಕ್ಕಿಂತ ಮರಾಠಿಗರು ಹೆಚ್ಚು ಸರಕಾರಕ್ಕೆ ಕಾಣುತ್ತಿದ್ದಾರೆ ಇದು ಸರಿಯಲ್ಲ ಪ್ರತಿಯೊಬ್ಬ ಕನ್ನಡಿಗನು ಖಂಡಿಸಬೇಕು ಎಂದರು.
ರಾಜ್ಯದಲ್ಲಿ ಮಳೆ ಹಾನಿ ಯಿಂದ ರೈತರು ಬಹಳ ಸಂಕಷ್ಟದಲ್ಲಿದ್ದಾರೆ ಹಾಗೂ ಬಡವರ ಮನೆಗಳು ಬಿದ್ದು ಹೋಗಿದ್ದಾವೆ ಅಂಥ ವರ ಬಗ್ಗೆ ಸರ್ಕಾರ ಚಿಂತಿಸುವ ಕೆಲಸ ಮಾಡಬೇಕು ವಿನಾಕಾರಣ ಪ್ರಾಧಿಕಾರ ಸೃಷ್ಟಿಸಿ ರಾಜಕೀಯ ಮಾಡುವುದು ಒಳ್ಳೆಯದಲ್ಲ ಎಂದರು.
ಕೂಡಲೇ ಸರ್ಕಾರ ಕೈಗೊಂಡಿರುವ ನಿರ್ಣಯವನ್ನು ಕೈಬಿಡಬೇಕು ಇಲ್ಲವಾದರೆ ಮುಂದಿನ ದಿನಮಾನದಲ್ಲಿ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುತ್ತಿದೆ ಎಂದು ಎಚ್ಚರಿಸಿದರು ಪ್ರತಿಭಟನೆಯಲ್ಲಿ ಸೈಯದ್ ಸಲೀಂ ರಾಜ ಹುಸೇನ್ ಎಂ ಡಿ ಫಾರೂಕ್ ಅಜ್ಮೀರ್ ಹುಸೇನ್ ಭಾಷಾ ದಿನಕರ್ ಶೆಟ್ಟಿ ಶಿವು ಸೇರಿದಂತೆ ಇತರರು ಇದ್ದರು.