ಹರಪನಹಳ್ಳಿ: ನಿವೃತ್ತ ಸೈನಿಕರು ಹಾಗೂ ಯುವಕರುಸೇರಿ 22ನೇ ಕಾರ್ಗಿಲ್ ವಿಜಯೋತ್ಸವ ವನ್ನು ಆಚರಿಸಿದರು.
ಪಟ್ಟಣದ ಪ್ರವಾಸಿ ಮಂದಿರ ವೃತ್ತದಿಂದ ಭಾರತಾಂಭೆಯ ಭಾವಚಿತ್ರದ ಮೆರವಣಿಗೆ ಮೂಲಕ ಇಜಾರಿ ಶಿರಸಪ್ಪ ವೃತ್ತದಲ್ಲಿ ಕೊನೆಗೊಂಡಿತು. ಇಜಾರಿ ಶಿರಸಪ್ಪ ವೃತ್ತದಲ್ಲಿ ಭಾರತಮಾತೆಗೆ ಹಾರ ಹಾಕಿ ಕ್ಯಾಂಡಲ್ ಬೆಳಗಿ ಜಯಗೋಷ ಮೊಳಗಿಸಿದರು.ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಪೋಲೀಸ್ ವೃತ್ತ ನಿರೀಕ್ಷಕ ನಾಗರಾಜ ಎಂ.ಕಮ್ಮಾರ ಅವರು ಕಾರ್ಗಿಲ್ ಯುದ್ದದಲ್ಲಿ ನಮ್ಮ ಯೋಧರು ಪ್ರಾಣದ ಹಂಗು ತೊರೆದು ಹೋರಾಡಿ ಅವರ ತ್ಯಾಗ ಬಲಿದಾನದ ಮೂಲಕ ಗೆಲುವು ತಂದುಕೊಟ್ಟರು.
ಅನೇಕರು ದೇಶಕ್ಕಾಗಿ ಬಲಿದಾನ ಮಾಡಿದರು. ಅಂತಹ ಹುತಾತ್ಮ ವೀರಯೋಧರನ್ನುಇಂದು ನಾವು ಸ್ಮರಿಸಬೇಕಾಗಿದೆ ಎಂದರು. ಕಾರ್ಗಿಲ್ ಯೋಧ ಪಿ.ರೇಖಪ್ಪ, ಮುಖಂಡರಾದ ದೇವೇಂದ್ರಪ್ಪ, ಮಲ್ಲಿಕಾರ್ಜುನ, ಮಂಜುನಾಥ, ಬಸವಚಾರಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.