Saturday, 11th January 2025

Karnataka Police: 11 ಡಿವೈಎಸ್‌ಪಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ

Karnataka Police

ಬೆಂಗಳೂರು: 11 ಡಿವೈಎಸ್‌ಪಿ (ಸಿವಿಲ್‌) ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪೊಲೀಸ್‌ ಸಿಬ್ಬಂದಿ ಮಂಡಳಿ ಸಭೆಯ ನಿರ್ಣಯದಂತೆ ತಕ್ಷಣದಿಂದ ಜಾರಿಗೆ ಬರುವಂತೆ ಡಿವೈಎಸ್‌ಪಿಗಳಾದ ಜ್ಯೋತಿಭಾ ನಿಕ್ಕಂ, ಮಂಜುನಾಥ್‌. ಜಿ, ಸುರಜ್‌ ಪಿ.ಎ., ಡಿ.ಎನ್‌.ಸನಾದಿ ಸೇರಿ 11 ಡಿವೈಎಸ್‌ಪಿಗಳ (Karnataka Police) ವರ್ಗಾವಣೆ ಮಾಡಲಾಗಿದೆ.

ವರ್ಗಾವಣೆಯಾದ ಅಧಿಕಾರಿಗಳು

  • ಜ್ಯೋತಿಭಾ ನಿಕ್ಕಂ (ಬೆಳಗಾವಿಯ ಡಿಸಿಆರ್‌ಇ)- ಬೆಳಗಾವಿ ನಗರ ಸಂಚಾರ ಉಪ ವಿಭಾಗ
  • ಮಂಜುನಾಥ. ಜಿ (ಸ್ಥಳ ನಿರೀಕ್ಷೆ)-ಮಧುಗಿರಿ ಉಪವಿಭಾಗ, ತುಮಕೂರು
  • ಸುರಜ್ ಪಿ.ಎ‌ (ರಾಜ್ಯ ಗುಪ್ತವಾರ್ತೆ)- ಮಡಿಕೇರಿ ಉಪ ವಿಭಾಗ, ಕೊಡಗು
  • ಡಿ.ಎನ್‌.ಸನಾದಿ (ರಾಜ್ಯ ಗುಪ್ತ ವಾರ್ತೆ)- ಸಿ.ಇ.ಎನ್, ಬೀದರ್ ಜಿಲ್ಲೆ
  • ಕುಮಾರಸ್ವಾಮಿ( ರಾಜ್ಯ ಗುಪ್ತವಾರ್ತೆ) – ಡಿಸಿಆರ್‌ಇ
  • ಗಜಾನನ ವಾಮನ ಸುತಾರ (ತೀರ್ಥಹಳ್ಳಿ ಉಪ ವಿಭಾಗ) – ಬಾಗಲಕೋಟೆ ಉಪ ವಿಭಾಗ
  • ಸಂಜೀವ ಕುಮಾರ್ ತಿರ್ಲುಕ (ರಾಜ್ಯ ಗುಪ್ತ ವಾರ್ತೆ)- ಶಿವಮೊಗ್ಗ ಬಿ ಉಪ ವಿಭಾಗ
  • ಶರಣ ಬಸವೇಶ್ವರ ಭೀಮರಾವ್ ಬಿ (ಪಿ.ಟಿ.ಸಿ. ನಾಗೇನಹಳ್ಳಿ, ಕಲಬುರಗಿ)- ದಾವಣಗೆರೆ ಉಪ ವಿಭಾಗ
  • ಆನಂದ್‌ ಸಿ.ಎಸ್‌ (ಆಂತರಿಕ ಭದ್ರತಾ ವಿಭಾಗ)- ಜೆ.ಸಿ.ನಗರ ಉಪ ವಿಭಾಗ
  • ದೀಪಕ್‌ ಸಿ.ವಿ. (ರಾಜ್ಯ ಗುಪ್ತವಾರ್ತೆ) – ಬ್ಯಾಟರಾಯನಪುರ ಉಪ ವಿಭಾಗ
  • ಎಚ್‌.ಡಿ.ಕುಲಕರ್ಣಿ (ಸಿಐಡಿ) -ಕುಂದಾಪುರ ಉಪ ವಿಭಾಗ

ಸಂಬಂಧಪಟ್ಟ ಘಟಕಾಧಿಕಾರಿಗಳು ಮೇಲ್ಕಂಡ ಅಧಿಕಾರಿಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ, ಯಾವುದೇ ಸೇರುವಿಕೆ ಕಾಲವನ್ನು ಉಪಯೋಗಿಸಿಕೊಳ್ಳದೆ ವರ್ಗಾಯಿಸಲಾದ ಸ್ಥಳದಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಸೂಚಿಸಬೇಕು ಹಾಗೂ ಅಧಿಕಾರಿಗಳು ಬಿಡುಗಡೆಗೊಂಡ ಮತ್ತು ವರದಿ ಮಾಡಿದ ಬಗ್ಗೆ ಈ ಕಚೇರಿಗೆ ಪಾಲನಾ ವರದಿ ಸಲ್ಲಿಸಬೇಕು ಎಂದು ಎಡಿಜಿಪಿ ಸೌಮೇಂದು ಮುಖರ್ಜಿ ಅವರು ವರ್ಗಾವಣೆ ಆದೇಶದಲ್ಲಿ ಸೂಚಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | SSLC, 2nd PUC Exam Timetable: ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ

ಅಧಿಕಾರಿ, ಶಿಕ್ಷಕರ ವೇತನಕ್ಕಾಗಿ 628.65 ಕೋಟಿ ಅನುದಾನ ಬಿಡುಗಡೆ

ಬೆಂಗಳೂರು: 2024-25ನೇ ಸಾಲಿಗೆ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ಅಡಿಯಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ಶಿಕ್ಷಕರ ವೇತನ ವೆಚ್ಚದ ಬಾಬ್ತುಗಳಿಗಾಗಿ ಜನವರಿಯಿಂದ ಮಾರ್ಚ್‌ರವರೆಗಿನ ಮೂರು ತಿಂಗಳ ಅನುದಾನವನ್ನು (Fund Release) ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.

ಈ ಬಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವೈ.ಸಿ.ರವಿಕುಮಾರ್‌ ಆದೇಶ ಹೊರಡಿಸಿದ್ದಾರೆ. ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ಅಡಿಯಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ಶಿಕ್ಷಕರ ವೇತನ ವೆಚ್ಚಕ್ಕಾಗಿ ಏಪ್ರಿಲ್-2024 ರಿಂದ ಡಿಸೆಂಬರ್-2024ರ ಅವಧಿಯ ಅನುದಾನವಾಗಿ 1505.28 ಕೋಟಿ ಬಿಡುಗಡೆ ಮಾಡಲಾಗಿದೆ.

ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕರು, 2024-25ನೇ ಸಾಲಿನ ವೇತನ ವೆಚ್ಚಕ್ಕಾಗಿ ಅನುದಾನ ಕೊರತೆ ಉಂಟಾಗಿದ್ದು, ನಾಲ್ಕನೇ ತ್ರೈಮಾಸಿಕ ಕಂತಿನ ಅನುದಾನವನ್ನು ಬಿಡುಗಡೆಗೊಳಿಸುವಂತೆ ಕೋರಿದ್ದಾರೆ. ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಲಾಗಿದ್ದು, 2024-25ನೇ ಸಾಲಿನ ಆಯವ್ಯಯದಲ್ಲಿ ನಿಗದಿಪಡಿಸಿರುವ ಅನುದಾನದಲ್ಲಿ ಜನವರಿಯಿಂದ ಮಾರ್ಚ ಅವಧಿಯ 3 ತಿಂಗಳ ಅನುದಾನ 628.65 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮೊತ್ತವನ್ನು ಜಿಲ್ಲಾವಾರು, ತಾಲೂಕುವಾರು ಹಂಚಿಕೆ ಮಾಡಿ ಮರು ಬಿಡುಗಡೆ ಮಾಡಲು ಮತ್ತು ಖಜಾನೆಯಲ್ಲಿ ಅಪ್ಲೋಡ್ ಮಾಡಲು ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು. ಇವರಿಗೆ ಅನುಮತಿ ನೀಡಿದೆ. ಬಿಡುಗಡೆ ಮಾಡಲಾಗಿರುವ ಅನುದಾನದ ಪೈಕಿ ಯಾವುದೇ ಕಾರಣಕ್ಕೂ ಹಿಂದಿನ ಸಾಲಿನ ವೇತನ ವೆಚ್ಚಗಳನ್ನು ಭರಿಸತಕ್ಕದ್ದಲ್ಲ. ಹಿಂದಿನ ಸಾಲಿನ ವೇತನ ವೆಚ್ಚಗಳನ್ನು ಭರಿಸಲು ಅಗತ್ಯವಿರುವ ಅನುದಾನದ ವಿವರದೊಂದಿಗೆ ಪ್ರತ್ಯೇಕವಾದ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.

Leave a Reply

Your email address will not be published. Required fields are marked *