Saturday, 23rd November 2024

ನವಜಾತ ಗಂಡು ಮಗು ಮರಣ ಕತೆ ಕಟ್ಟುತ್ತಿರುವ ವೈದ್ಯರು: ಕಂಗಾಲಾದ ಪೋಷಕರು

ಸರ್ಕಾರಿ ಆಸ್ಪತ್ರೆ ಎಂದರೆ ಸಾಕು ರೋಗಿಗಳು ಚಿಕಿತ್ಸೆ ಪಡೆಯಲು ಭಯಭೀತಿ ವಾವಾವರಣದಲ್ಲಿ ಈ ಭಾಗದ ಜನರು

ಪಾವಗಡ: ತಾಲ್ಲೂಕಿನ ತಪಗಾನ ದೊಡ್ಡಿ ಗ್ರಾಮದ ಸುರೇಶ್ ಮತ್ತು ಮಮತ ಎಂಬುವರು ಹೆರಿಗೆಗಾಗಿ ಸರ್ಕಾರಿ ಆಸ್ಪತ್ರೆಯ ಸೋಮವಾರ ಬಂದಿದ್ದು ಡಾ.ಪೂಜಾ ಎಂಬುವರು ಶಸ್ತ್ರಚಿಕಿತ್ಸೆ ಮಾಡಿದ ನಂತರ ಮಗು ಮರಣ ಹೊಂದಿದೆ ಎಂಬುದಾಗಿ ಪೋಷಕರ ಬಳ್ಳಿ ತಿಳಿಸಿದ್ದಾರೆ.

ಅದರೆ ಪೋಷಕರು ಹೇಳುವ ಪ್ರಕಾರ ಮೂರು ದಿನಗಳ ಹಿಂದೆ ಖಾಸಗಿ ಲ್ಯಾಬ್ ನಲ್ಲಿ ಸ್ಕಾನಿಂಗ್ ಮಾಡಿಸಲಾಗಿತ್ತು ಅದರೆ ವೈದ್ಯರು ಮಗು ಚನ್ನಾಗಿದೆ ಎಂಬುದಾಗಿ ತಿಳಿಸಿದ್ದರು ಅದರೆ ಇಂದು ಏಕಾಏಕಿ ಮಗು ಸತ್ತಿದೆ ಎಂದು ಮಗು ತಂದು ತೋರಿಸು ತ್ತಿದ್ದಾರೆ.

ಇದೇ ವಿಚಾರಕ್ಕೆ ಮಾತನಾಡಿದ ಗಂಗಧರ್ ನಾಯ್ಡು ಮಾತನಾಡಿ, ಸ್ಕಾನಿಂಗ್ ಮಾಡಿದ ನಂತರ ಶಸ್ತ್ರಚಿಕಿತ್ಸೆ ಮಾಡಬೇಕು ಎಂಬ ಕಾನೂನು ಇದೇ ಅದರೆ ಇಲ್ಲಿ ಯಾರು ಕೇಳುವವರು ಹೇಳುವವರು ಯಾರು ಇಲ್ಲದಾಗಿದೆ.ಇಲ್ಲಿ ವೈದ್ಯರು ಬೇಜವಾಬ್ದಾರಿಯುತ ವಾಗಿ ನಡೆದುಕೊಳ್ಳುತ್ತಿದ್ದರೆ ಎಂದು ಆರೋಪಿಸಿದರು.

ಮೃತ ಪಟ್ಟಂತಹ ಮಗುವಿನ ಸಂಬಂಧಿಕರು ಹೇಳುವ ಪ್ರಕಾರ ನಮ್ಮ ಹಣ ಪಡೆದು ಸಹ ನಮಗೆ ದ್ರೋಹ ವೆಸಗಿದ್ದಾರೆ.ಈಗಾಗಲೇ ನಾಲ್ಕು ಸಾವಿರ ನೀಡಿ ದ್ದೆವೆ ಇನ್ನೂ ಐದುಸಾವಿರ ಬೇಡಿಕೆಯನ್ನು ಇಟ್ಟಿದ್ದರು ಅದರೆ ನಮ್ಮ ಮಗು ಮರಣ ಹೊಂದಿದಾಗ ಹೇಳು ತ್ತಿದ್ದಾರೆ.

ಡಾ.ಪೂಜಾ ಹೇಳುವ ಪ್ರಕಾರ ಮಗು ಹೊಟ್ಟೆಯಲ್ಲಿ ಮರ ಹೊಂದಿದೆ ಹೃದಯ ಗಾತ್ರ ಚಿಕ್ಕದಾಗಿದಂತಹ ವೇಳೆಯಲ್ಲಿ ಮಗು ಮರಣ ಹೊಂದುವ ಸಾದ್ಯತೆ ಇರುತ್ತದೆ. ಅನುಮಾನ ಇದ್ದರೆ ಪಿಎಂ ಮಾಡಿಸಿ ನಿಕರವಾದ ವಿಷಯ ತಿಳಿಯು ತ್ತದೆ ಎಂದರು.

ರೋಗಿಗಳ ಸಂಬಂಧದಿಕರು ಇದರ ಬಗ್ಗೆ ಪೋಲಿಸ್ ಠಾಣೆಗೆ ದೂರು ಸಲ್ಲಿಸ ಲಾಗುವುದು ಎಂದು ತಿಳಿಸಿದ್ದಾರೆ. ರೋಗಿಯ ಕುಟುಂಬ ರೋಧನೆ ಆಸ್ಪತ್ರೆಗೆ ಬಂದಂತಹ ರೋಗಿಗಳ ಭಯಬೀತಿ ಗೂಳ್ಳುವಂತಾಗಿತ್ತು.