Friday, 20th September 2024

ಹೆಣ್ಣು ಮಕ್ಕಳು ಕಲಿತರೆ ಮಾತ್ರ ದೇಶ ಸಂಪೂರ್ಣ ಅಭಿವೃದ್ಧಿ

ಇಂಡಿ: ಹೆಣ್ಣು ಮಕ್ಕಳು ಶಿಕ್ಷಣ ಕಲಿತರೆ ಮಾತ್ರ ದೇಶ ಸಂಪೂರ್ಣ ಅಭಿವೃದ್ಧಿ ಹೊಂದಲು ಸಾಧ್ಯ. ಅನಕ್ಷರತೆ ದೇಶಕ್ಕೆ ಅಂಟಿರುವ ಹುಣ್ಣು, ಅದನ್ನು ಬೇರು ಸಮೇತ ಕಿತ್ತಿ ಎಸೆಯಬೇಕಾದರೆ ಪ್ರತಿ ಹೆಣ್ಣುಮಗಳು ಸಾಕ್ಷರರಾಗಿಬೇಕೆಂದು ಮುಖ್ಯೋಪಾಧ್ಯಯ ರಾಘವೇಂದ್ರ ಕುಲಕರ್ಣಿ ಹೇಳಿದರು.

ಪಟ್ಟಣದ ಶ್ರೀ ಶಾಂತೇಶ್ವರ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಸೌ. ಎ.ಜಿ.ಗಾಂಧಿ ಬಾಲಕಿಯರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಹೆಣ್ಣುಮಕ್ಕಳ ಶಿಕ್ಷಣ ಹಾಗೂ ಬಾಲ್ಯ ವಿವಾಹ ನಿರ್ಮೂಲನಾ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತ ನಾಡಿದ ಅವರು, ಬಾಲ್ಯ ವಿವಾಹ ದೇಶಕ್ಕೆ ಅಂಟಿರುವ ದೊಡ್ಡ ಶಾಪವಾಗಿದೆ. ಆ ಶಾಪ ವಿಮೋಚನೆಗೆ ಸರ್ವರೂ ಶಪತಗೈಯಬೇಕು. ಅದು ಇಂದಿನ ಯುವಕ- ಯುವತಿಯರ ಭವಿಷ್ಯದಲ್ಲಿ ಅಡಗಿದೆ ಎಂದರು.

ಸಮಜಕ್ಕೆ ಅಂಟಿರುವ ಬಾಲ್ಯ ವಿವಾಹ, ಮೂಡನಂಬಿಕೆ, ವರದಕ್ಷಿಣೆ ಇವುಗಳಿಂದಾಗುವ ದುಷ್ಟ ಪರಿಣಾಮಗಳ ಬಗ್ಗೆ ಏಕ ಪಾತ್ರಾಭಿನಯ ಹಾಗೂ ರೂಪಕಗಳ ಮೂಲಕ ಮಕ್ಕಳಲ್ಲಿ ಆತ್ಮಸ್ಥೆöÊರ್ಯ ತುಂಬುವ0ತಹ ಕಾರ್ಯವನ್ನು ಬೊಳೆಗಾಂವ ಗ್ರಾಮದ ಹಿರಿಯ ಕಲಾವಿದರು, ನಾಟಕಕಾರರು, ರಂಗಕರ್ಮಿ ಸೋಮಶೇಖರ ಚಾಂದಕವಠೆಯವರು ಪ್ರಸ್ತುತಪಡಿಸಿದರು.

ವೇದಿಕೆಯಲ್ಲಿ ಶಾಲಾ ಶಿಕ್ಷಕರಾದ ಎಮ್.ಬಿ.ಹೂಗಾರ, ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲಾ ವಿಧ್ಯಾರ್ಥಿನಿಯರು ಸಿಬ್ಬಂದಿವರ್ಗದವರು ಭಾಗವಹಿಸಿದರು.