Saturday, 4th January 2025

KMA Awards: ವಿಶ್ವವಾಣಿ ವರದಿಗಾರ ಶಿವಕುಮಾರ್‌ ಬೆಳ್ಳಿತಟ್ಟೆಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ!

KMA Awards: Vishwavani reporter Shivakumar Bellithatte to receive special lifetime achievement award

ಬೆಂಗಳೂರು: ಪತ್ರಿಕೋದ್ಯಮದಲ್ಲಿ ಸುದೀರ್ಘ ಅವಧಿ ಸೇವೆ ಸಲ್ಲಿಸುವ ಮೂಲಕ ವಿಶೇಷ ಸಾಧನೆ ಮಾಡಿರುವ ವಿವಿಧ ಸಂಸ್ಥೆಗಳ ಪತ್ರಕರ್ತರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿಯು (KMA Awards) 2023 ಮತ್ತು 2024ರ ಸಾಲಿನ ವಿವಿಧ ದತ್ತಿ ಪ್ರಶಸ್ತಿಗಳನ್ನು ಘೋಷಿಸಿದೆ. ವಿಶ್ವವಾಣಿ ಪತ್ರಿಕೆಯ ಹಿರಿಯ ವರದಿಗಾರರಾದ ಶಿವಕುಮಾರ್‌ ಬೆಳ್ಳಿತಟ್ಟೆ 2023ರ ವರ್ಷದ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

2024ರ ಸಾಲಿನ ಜೀವಮಾನದ ಸಾಧನೆ ವಿಶೇಷ ಪ್ರಶಸ್ತಿಗೆ ಮಂಗಳೂರಿನ ವಾರ್ತಾಭಾರತಿಯ ಅಬ್ದುಸ್ಸಲಾಂ ಪುತ್ತಿಗೆ ಭಾಜನರಾಗಿದ್ದಾರೆ. 2023ರ ಸಾಲಿನ ಜೀವಮಾನದ ಸಾಧನೆ ವಿಶೇಷ ಪ್ರಶಸ್ತಿಗೆ ಹಿರಿಯ ಪತ್ರಕರ್ತರು ಆ.ಚ ಶಿವಣ್ಣ ಅವರು ಭಾಜನರಾಗಿದ್ದಾರೆ. ಇವರ ಜೊತೆಗೆ ಒಟ್ಟು 60 ಪತ್ರಕರ್ತರನ್ನು ವಾರ್ಷಿಕ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದರ ಜೊತೆಗೆ 2023 ಮತ್ತು 2024ರ ಸಾಲಿನ ಅಭಿಮಾನಿ ದತ್ತಿ ಪ್ರಶಸ್ತಿ, ಮೈಸೂರು ದಿಗಂತ ದತ್ತಿ ಪ್ರಶಸ್ತಿ, ಅಭಿಮನ್ಯು ಪ್ರಶಸ್ತಿ, ಪ್ರಜಾ ಸಂದೇಶ ದತ್ತಿ. ಡಾ ಬಿಆರ್‌ ಅಂಬೇಡ್ಕರ್‌ ಮೂಕ ನಾಯಕ ಪ್ರಶಸ್ತಿ, ಮಾಧ್ಯಮ ಮಹಾ ಸಾಧಕ ಸಿವಿ ರಾಜಗೋಪಾಲ್‌ ದತ್ತಿ ಪ್ರಶಸ್ತಿ, ಕರ್ನಾಟಕ ಕಾರ್ಯನಿರತ ಸಂಘದ ಕೆಯುಡಬ್ಲ್ಯುಜೆ ದತ್ತಿ ಪ್ರಶಸ್ತಿ, ಆಂದೋಲನ ಪ್ರಶಸ್ತಿ, ಬಸವರಾಜ ದೊಡ್ಡಮನಿ ಸ್ಥಾಪಿಸಿರುವ ಕೃಷಿಯಲ್ಲಿ ಅತ್ಯುತ್ತಮ ವರದಿ, ಲೇಖನ, ಅಂಕಣ ಬರಹಗಾರ ಪ್ರಶಸ್ತಿ ಹಾಗೂ ಅರಗಿಣಿ ಸೇರಿದಂತೆ 10 ಪ್ರಶಸ್ತಿಗಳಿಗೆ ತಲಾ 10 ಮಂದಿ ಸೇರಿದಂಯೆ 20 ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿಯು ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

2023ರ ವಾರ್ಷಿಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ವಿಜೇತರ ವಿವರ

2023ರ ಸಾಲಿನ ಜೀವಮಾನದ ಸಾಧನೆಯ ವಿಶೇಷ ಪ್ರಶಸ್ತಿಗೆ ಹಿರಿಯ ಪತ್ರಕರ್ತರು ಆ.ಚ ಶಿವಣ್ಣ ಅವರು ಭಾಜನರಾಗಿದ್ದಾರೆ.

ಗಂಗಾಧರ ಮೊದಲಿಯಾರ್, ಪ್ರೊ. ಉಷಾರಾಣಿ, ಎನ್. ಸುಶೀಲೇಂದ್ರ ನಾಯಕ್‌, ವಾಸುದೇವ ಹೊಳ್ಳ, ಆಲೈಡ್ ಟೆನ್ನಿಸನ್, ಮಾಲತಿ ಭಟ್, ಮನು ಅಯ್ಯಪ್ಪ, ಹರಿಯಬ್ಬೆ ಹಂಜಾರಪ್ಪ, ವಿಲಾಸ್ ನಾಂದೋಡ್ಕ‌, ಶಿವಕುಮಾರ್ ಬೆಳ್ಳಿತಟ್ಟೆ, ಸಿದ್ಧಯ್ಯ ಹಿರೇಮಠ, ಶಶಿಕಾಂತ್ ಶಂಬೆಳ್ಳಿ, ಮನೋಜ್‌ಗೌಡ ಪಾಟೀಲ, ಆನಂದ ಬೈದನಮನೆ, ಮಧು ಜವಳಿ, ಎಂ.ಆರ್. ದಿನೇಶ್, ತಾರಾನಾಥ್, ಕೆ. ಮಲ್ಲಿಕಾರ್ಜುನ ಸಾಣಾವೂರ, ಜಯಪುಕಾಶ್, ಪುಂಡಲೀಕ ಭೀ. ಬಾಳೋಜಿ, ಇಬ್ರಾಹಿಂ ಅಡ್ಕಸ್ಥಳ, ಅನ್ನು ಮಂಗಳೂರು (ಪುಂಡಲೀಕ ಪೈ), ನಿಹಾಲ್‌ ಕಿದ್ವಾಯಿ, ರೋಹಿಣಿ ಸ್ವಾಮಿ, ಭಾವನಾ ನಾಗಯ್ಯ, ಮುನೀರ್ ಅಹ್ಮದ್ ಆಜಾದ್, ಹನುಮಾನ್ ಸಿಂಗ್‌ ಜಮಾದಾ‌, ಜೈಮುನಿ, ಶಿವಮೂರ್ತಿ ಗುರುಮಠ, ಸಿರಾಜ್ ಬಿಸಳ್ಳಿ ಅವರು 2023ರ ವಾರ್ಷಿಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜರಾಗಿದ್ದಾರೆ.

2024ರ ಸಾಲಿನ ಜೀವಮಾನದ ಸಾಧನೆ ವಿಶೇಷ ಪ್ರಶಸ್ತಿಗೆ ಮಂಗಳೂರಿನ ವಾರ್ತಾಭಾರತಿಯ ಅಬ್ದುಸ್ಸಲಾಂ ಪುತ್ತಿಗೆ ಭಾಜನರಾಗಿದ್ದಾರೆ. ಇನ್ನು 2024ರ ವಾರ್ಷಿಕ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ 30 ಪತ್ರಕರ್ತರು ಆಯ್ಕೆಯಾಗಿದ್ದಾರೆ.

ಪ್ರೊ. ಎ.ಎಸ್. ಬಾಲಸುಬ್ರಹ್ಮಣ್ಯ, ರಿಷಿಕೇಷ್ ಬಹದ್ದೂರ್ ದೇಸಾಯಿ, ಸುಭಾಷ್ ಹೂಗಾರ, ಟಿ. ಗುರುರಾಜ್,ಕುಮಾರನಾಥ್‌ ಯು.ಕೆ., ಸಿದ್ದು, ಕಾಳೋಜಿ. ಆರ್.ಕೆ.ಜೋಷಿ, ಪುಕಾಶ್ ಶೇಡ್, ಆರುಂದಿ ಶ್ರೀನಿವಾಸ ಮೂರ್ತಿ,ರವೀಶ್ ಹೆಚ್‌.ಎಸ್‌.,ಭಾನುಪ್ರಕಾಶ್, ಮಹೇಶ ಶೆಟಗಾರ,ರಮೇಶ್ ಜಹಗೀರದಾರ, ನಿರುಪಮಾ,ದಿನೇಶ್ ಗೌಡಗೆರ, ಡಿ.ಸಿ. ಮಹೇಶ್, ಹೆಚ್‌.ಎಸ್.ಹರೀಶ್, ಶರಣಯ್ಯ ಒಡೆಯರ್, ಅಶ್ವಿನಿ ಎಂ. ಶ್ರೀಪಾದ, ರಿಜ್ವಾನ್ ಅಸದ್, ಬನ್ನಿ ಕಾಳಪ್ಪ, ಮನುಜಾ ವೀರಪ್ಪ, ಜಯಂತ್ ಜೆ, ವಿಖಾರ್ ಅಹ್ಮದ್ ಸಯೀದ್, ಡಿ.ಎನ್. ಶಾಂಭವಿ ನಾಗರಾಜ್, ರಮೇಶ್ (ಹಾಬಿ ರಮೇಶ್), ಸೋಮಶೇಖರ ಕಿಲಾರಿ, ನಾರಾಯಣಸ್ವಾಮಿ, ಅನೀಸ್ ನಿಸಾರ್ ಹಮೀದ್, ಸಂದೀಪ್ ಸಾಗರ್ ಅವರು 2024ರ ವಾರ್ಷಿಕ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜರಾಗಿದ್ದಾರೆ.

2023ರ ವಿವಿಧ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿರುವವರ ವಿವರ

  1. ಅಭಿಮಾನಿ ದತ್ತಿ ಪ್ರಶಸ್ತಿ: 1. ರವಿಕುಮಾರ ಚನ್ನಬಸಪ್ಪ ಕಗಣವರ, (ಧಾರವಾಡ ಕನ್ನಡಮ್ಮ ಪತ್ರಿಕೆ)
    ವರದಿ: ಕೆವೈಸಿ ಅಪ್ ಡೇಟ್ ಮಾಡಲು ಮುಗಿಬಿದ ಜನ, ಬೆಳ್ಳಂ ಬೆಳಿಗ್ಗೆ, ಕ್ಯೂ”
  2. ವಿಜಯ್ ಕೋಟ್ಯಾನ್ (ವಿಜಯ ಕರ್ನಾಟಕ)
    ವರದಿ: ಬಲೆಯೊಳಗೆ ಬುದ್ಧಿವಂತರು

2.ಮೈಸೂರು ದಿಗಂತ ದತ್ತಿ ಪ್ರಶಸ್ತಿ: ಶಿವಾನಂದ ಗೊಂಬಿ, ಹುಬ್ಬಳ್ಳಿ (ಕನ್ನಡ ಪುಭ ಪತ್ರಿಕೆ)
ವರದಿ: ಕರೆ ನೀರು ಹೊರಕ್ಕೆ ಹಾಕುತ್ತಿರುವ ಗ್ರಾಮಸ್ಥರು

3.ಅಭಿಮನ್ಯು ಪ್ರಶಸ್ತಿ: ಸಂಧ್ಯಾ ಹೆಗಡೆ (ಪುಜಾವಾಣಿ, ಮಂಗಳೂರು)
ವರದಿ: “ಬೀಡಿಯಿಂದ ಕಮರಿದ ಕನಸು”

4.ಪೂಜಾ ಸಂದೇಶ ದತ್ತಿ ಪ್ರಶಸ್ತಿ: ಶಿಲ್ಪ ಪಿ. (ಡೆಕ್ಕನ್ ಹೆರಾಲ್ಡ್, ಮೈಸೂರು)

Job: Manual Scavenging Stinking Truth

5. ಡಾ. ಬಿ.ಆರ್. ಅಂಬೇಡ್ಕ‌ರ್‌ ಮೂಕನಾಯಕ ಪಶಸ್ತಿ: ಕೆ. ನೀಲಾ, ಕಲಬುರಗಿ

6.ಮಾಧ್ಯಮ ಮಹಾಸಾಧಕ ಸಿ.ವಿ. ರಾಜಗೋಪಾಲ್ ದತ್ತಿ ಪ್ರಶಸ್ತಿ: ಕ.ಮ. ರವಿಶಂಕರ್, (ಕನ್ನಡ ಪುಭ ಚಿತ್ರದುರ್ಗ)

7.ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಕೆಯುಡಬ್ಲ್ಯುಜೆ ದತ್ತಿ ಪ್ರಶಸ್ತಿ ಆಂದೋಲನ ಪಶಸ್ತಿ: ವಿ. ವೆಂಕಟೇಶ್, ಹಿರಿಯ ಪತ್ರಕರ್ತರು

8.ಆಂದೋಲನ ಪ್ರಶಸ್ತಿ: ಸಂಜೆ ದರ್ಶನ

9.ಬಸವರಾಜ ದೊಡ್ಡಮನಿ ಸ್ಥಾಪಿಸಿರುವ ಕೃಷಿಯಲ್ಲಿ ಅತ್ಯುತ್ತಮ ವರದಿ, ಲೇಖನ, ಅಂಕಣ ಬರಹಗಾರರಿಗೆ ಪ್ರಶಸ್ತಿ: ಹೆಚ್.ಪಿ. ಪುಣ್ಯವತಿ

10.ಅರಗಿಣಿ ಪ್ರಶಸ್ತಿ: ತುಂಗರೇಣುಕಾ

2024ರ ವಿವಿಧ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿರುವವರ ವಿವರ

  • ಅಭಿಮಾನಿ ದತ್ತಿ ಪ್ರಶಸ್ತಿ: ಕೆ. ಓಂಕಾರಮೂರ್ತಿ ಮತ್ತು ಡಿ.ಎಂ. ಕುರ್ಕೆ ಪ್ರಶಾಂತ್ ಪುಜಾವಾಣಿ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ವರದಿ: ಕೆರೆ ಒಡಲಿಗೆ ಬೆಂಗಳೂರಿನ ಚರಂಡಿ ನೀರು- ತರಕಾರಿ ಗುಣಮಟ್ಟ ಕುಸಿತ, ಅವಳಿ ವ್ಯಾಲಿಯಲ್ಲಿ ಅಪಾಯ

  • 2.ಮೈಸೂರು ದಿಗಂತ ದತ್ತಿ ಪ್ರಶಸ್ತಿ(ಇಬ್ಬರಿಗೆ ಸಮನಾಗಿ ಹಂಚಲಾಗಿದೆ)
    ಬಿ.ಕೆ. ದೇವಯ್ಯ (ಅನು ಕಾರ್ಯಪ್ಪ) ರಿಪಬ್ಲಿಕ್ ಕನ್ನಡ
    ವರದಿ: 6 ವರ್ಷಗಳಿಂದ ಪಿಂಚಣಿ ಬರದೆ ಪರದಾಟ, 50 ವರ್ಷದ ವಿಶೇಷ ಚೇತನ ನರಿಯಂಬಾಡಿ ಕಂಗಾಲು.
    ನಂದೀಶ್ ಮಲ್ಲೇನಹಳ್ಳಿ ಸುವರ್ಣ ನ್ಯೂಸ್
    ವರದಿ: ವಿಶೇಷ ಚೇತನ ವ್ಯಕ್ತಿಗಳಿಗೆ ನಿವೇಶನ ಹಂಚಿಕೆ ಬಗ್ಗೆ ಸರಣಿ ಸುದ್ದಿ
  • 3.ಅಭಿಮನ್ಯು ಪ್ರಶಸ್ತಿ: ಪ್ರಭು ಬ. ಅಡವಿಹಾಳ (ಪ್ರಜಾವಾಣಿ, ಕಲಬುರಗಿ)
    ವರದಿ: ಕುಲುಮೆ ಕಳಚಿದ ಕಮ್ಮಾರರು
  • ಪುಜಾ ಸಂದೇಶ ದತ್ತಿ ಪ್ರಶಸ್ತಿ: ಮೊಹಮ್ಮದ್ ಅಖೀಲ್ ಉಡೇವು (ವಾರ್ತಾ ಭಾರತಿ, ಕೊಪ್ಪಳ)
    ವರದಿ: ವರದಿ: ಕೊಪ್ಪಳ ಜಿಲ್ಲೆಯಲ್ಲಿ ಆಳವಾಗಿ ಬೇರೂರಿರುವ ಅಸ್ಪೃಶ್ಯತೆ
    5.ಡಾ. ಬಿ.ಆರ್. ಅಂಬೇಡ್ಕ‌ ಮೂಕನಾಯಕ ಪಶಸ್ತಿ: ರಹಮತ್ ತರೀಕೆರೆ
  • ಮಾಧ್ಯಮ ಮಹಾಸಾಧಕ ಸಿ.ವಿ. ರಾಜಗೋಪಾಲ್ ದತ್ತಿ ಪ್ರಶಸ್ತಿ: ಮುರಿಯಲ್ ನಿರ್ಮಲ ಡಿ’ಸಿಲ್ವ ಮಂಗಳೂರು
    7.ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಕೆಯುಡಬ್ಲ್ಯುಜೆ ದತ್ತಿ ಪ್ರಶಸ್ತಿ ಆಂದೋಲನ ಪಶಸ್ತಿ: ಹೆಚ್.ಎಸ್. ಸುಧೀಂದ್ರಕುಮಾರ್
  • ಆಂದೋಲನ ಪ್ರಶಸ್ತಿ: ಹೊಸಪೇಟೆ ಟೈಮ್ಸ್‌, ಹೊಸಪೇಟೆ
  • ಬಸವರಾಜ ದೊಡ್ಡಮನಿ ಸ್ಥಾಪಿಸಿರುವ ಕೃಷಿಯಲ್ಲಿ ಅತ್ಯುತ್ತಮ ವರದಿ, ಲೇಖನ, ಅಂಕಣ ಬರಹಗಾರರಿಗೆ ಪ್ರಶಸ್ತಿ: ಕೀರ್ತನಾ ಕುಮಾರಿ ಕೆ (ಕೀರ್ತಿ ಶೇಖರ ಕಾಸರಗೋಡು) ಮತ್ತು ವೆಂಕಟೇಶ್‌ ಹಾಸನ
  • ಅರಗಿಣಿ ಪ್ರಶಸ್ತಿ: ಶ್ಯಾಮ್‌ ಪ್ರಸಾದ್‌