ಬೆಳಗಾವಿ : ಸಾರಿಗೆ ನೌಕರರು, ರೈತ ಮುಖಂಡರೊಂದಿಗೆ ಸಭೆ ನಡೆಸಲು ಮುಂದಾಗಿದ್ದ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಹಾಗೂ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಜ್ಯಾದ್ಯಂತ ಪ್ರತಿಭಟನೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಸಾರಿಗೆ ನೌಕರರ ಹೋರಾಟ ಕುರಿತಂತೆ ಬೆಳಗಾವಿಯ ಖಾಸಗಿ ಹೋಟೆಲ್ ನಲ್ಲಿ ಸಾರಿಗೆ ನೌಕರರು ಹಾಗೂ ರೈತ ಮುಂಖಡರ ಸಭೆಯನ್ನು ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಕರೆದಿದ್ದರು. ಈ ಸಭೆಗೂ ಮುನ್ನವೇ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮತ್ತೊಂದೆಡೆ ಬೆಳಗಾವಿಯಲ್ಲಿ ಮಾತನಾಡಿದ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ, ನಾಲ್ಕು ನಿಗಮದಿಂದ 1.3 ಸಾರಿಗೆ ನೌಕರರಿದ್ದಾರೆ. ನೌಕರರು ನಾಲ್ಕು ದಿನಗಳಿಂದ ಮುಷ್ಕರದಿಂದಾಗಿ ಸಾರಿಗೆ ನಿಗಮಕ್ಕೆ ಆದಾಯವೇ ಇಲ್ಲದಂತೆ ಆಗಿದೆ. ಆದಾಯ ಇಲ್ಲದೇ ಮಾರ್ಚ್ ತಿಂಗಳ ವೇತನ ನೀಡೋದಕ್ಕೆ ಸರ್ಕಾರದ ಮುಂದೆ ಸಾರಿಗೆ ನಿಗಮಗಳು ಕೈವೊಡ್ಡಿ ಬೇಡುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಹೀಗಾಗಿ ಮಾರ್ಚ್ ತಿಂಗಳ ವೇತನ ತಡವಾಗಲಿದೆ.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್ ಬುಕ್ ಪೇಜ್ ಲೈಕ್ ಮಾಡಿ