Sunday, 15th December 2024

ಸಂವಿಧಾನ ಪ್ರಜಾಸತ್ತಾತ್ಮಕ ಆಡಳಿತಕ್ಕೆ ಭದ್ರ ಬುನಾದಿ: ಡಿ.ಎಸ್.ಎಸ್ ಅಧ್ಯಕ್ಷ ದಶರಥ ಈಟಿ

ಕೊಲ್ಹಾರ: ವಿಶ್ವದ ಚಾರಿತ್ರಿಕ ಇತಿಹಾಸದಲ್ಲಿ ಅಮೂಲ್ಯವಾದ ಸಂವಿಧಾನ ರಚನೆಯ ಮೂಲಕ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಪ್ರಜಾಸತ್ತಾತ್ಮಕ ಆಡಳಿತಕ್ಕೆ ಭದ್ರ ಬುನಾದಿ ಹಾಕಿದ್ದಾರೆ ಎಂದು ಡಿ.ಎಸ್.ಎಸ್ ತಾಲೂಕ ಅಧ್ಯಕ್ಷ ದಶರಥ ಈಟಿ ಹೇಳಿದರು.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ದಲಿತ ಸಂಘರ್ಷ ಸಮಿತಿ(ಸಾಗರ ಬಣ) ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಜಯಂತ್ಯುತ್ಸವ ಕಾರ್ಯಕ್ರಮದ ನೇತೃತ್ವ ವಹಿಸಿಕೊಂಡು ಅವರು ಮಾತನಾಡಿದರು ಭಾರತ ದೇಶದ ಸಂವಿಧಾನ ಹಾಗೂ ಬಾಬಾಸಾಹೇಬ ಅಂಬೇಡ್ಕರ್ ಅವರ ಜೀವನ ನಮಗೆಲ್ಲ ದಾರಿದೀಪವಾಗಿದೆ ಎಂದರು.

ಅಂಜುಮನ್ ಕಮಿಟಿ ಅಧ್ಯಕ್ಷ ಅಲ್ಲಾಭಕ್ಷ ಬಿಜಾಪುರ ಮಾತನಾಡಿ ಶೋಷಿತ ಸಮುದಾಯದಲ್ಲಿ ಜ್ಯೋತಿಯಂತೆ ಉದಯಿಸಿ ಜಗಕೆಲ್ಲ ಬೆಳಕು ನೀಡಿದ ಮಹಾನ್ ದೃವತಾರೆ ಡಾ.ಅಂಬೇಡ್ಕರ್ ಅವರು ಹಾಕಿಕೊಟ್ಟ ಮಾರ್ಗ ನಮಗೆಲ್ಲ ಪ್ರೇರಣಾದಾಯಕ ಎಂದು ಹೇಳಿದರು. ಪ.ಪಂ ಸದಸ್ಯ ಬಾಬು ಬಜಂತ್ರಿ ಹಾಗೂ ಇನ್ನಿತರು ಮಾತನಾಡಿದರು.

ಈ ಸಂದರ್ಭದಲ್ಲಿ ಪ.ಪಂ ಸದಸ್ಯ ಶ್ರೀಶೈಲ ಮುಳವಾಡ, ದಲಿತ ಮುಖಂಡರಾದ ರಾಜು ಇವಣಗಿ, ತಿಪ್ಪಣ್ಣ ಕುದರಿ, ಸಿಡ್ಲಪ್ಪ ತಳಗೇರಿ, ಅನ್ವರ ಕಂಕರಪೀರ, ಸಚೀನ ಈಟಿ, ಉಮೇಶ ಬ್ಯಾಲ್ಯಾಳ ಹಾಗೂ ಇತರರು ಇದ್ದರು.