Saturday, 14th December 2024

ಅಧಿಕಾರಿಗಳಿಂದ ಮನವೊಲಿಕೆ, ಮತದಾನ ಬಹಿಷ್ಕಾರ ಹಿಂಪಡೆದ ಗ್ರಾಮಸ್ಥರು

ಕೊಲ್ಹಾರ: ಕುಡಿಯುವ ನೀರು, ಸಾರ್ವಜನಿಕ ಶೌಚಾಲಯ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಹಿನ್ನೆಲೆಯಲ್ಲಿ ಮತದಾನ ಬಹಿಷ್ಕಾರಿಸಿದ್ದ ಹಳ್ಳದಗೆಣ್ಣೂರ ಜನತಾ ಪ್ಲಾಟ್ ನಿವಾಸಿಗಳ ಮತದಾನ ಮಾಡಲು ಅಧಿಕಾರಿಗಳು ಮನವೊಲಿಸಿದರು.
ತಾಲ್ಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ರವಿ ಹುಕ್ಕೇರಿ ನೇತೃತ್ವದ ಅಧಿಕಾರಗಳ ತಂಡ ಸೋಮವಾರ ಗ್ರಾಮಕ್ಕೆ ಆಗಮಿಸಿ ಶೀಘ್ರದಲ್ಲಿಯೇ ಮೂಲಭೂತ ಸೌಲಭ್ಯ ಕಲ್ಪಿಸುವ ಭರವಸೆ ನೀಡುವ ಮೂಲಕ ಮತದಾನ ಬಹಿಷ್ಕಾರ ಹಿಂಪಡೆಯಲು ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಅಧಿಕಾರಿಗಳ ಭರವಸೆಯ ಪ್ರಯುಕ್ತ ಗ್ರಾಮಸ್ಥರು ಮತದಾನ ಬಹಿಷ್ಕಾರ ಹಿಂಪಡೆದರು.