ಕೊಪ್ಪಳ: ದಕ್ಷಿಣ ಭಾರತದ ಕುಂಭ ಮೇಳ ಎಂದೇ ಖ್ಯಾತಿ ಪಡೆದಿರುವ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವವು (Koppala Shri Gavisiddeshwara Jatre) ಇದೇ ಜನವರಿ 15,16,17 ರಂದು ನಡೆಯಲಿದ್ದು, ಗುರುವಾರ ಐತಿಹಾಸಿಕ ಜಾತ್ರೆಯ ವಿಡಿಯೋ ಆಮಂತ್ರಣ ಬಿಡುಗಡೆ ಮಾಡಲಾಯಿತು.
ಜನವರಿ 15 ರಿಂದ ಮೂರು ದಿನಗಳ ಕಾಲ ನಡೆಯಲಿರುವ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ವಿವರವನ್ನು ಈ ವಿಡಿಯೋ ಆಮಂತ್ರಣ ಒಳಗೊಂಡಿದೆ. ಕೊಪ್ಪಳದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ವಿಡಿಯೋ ಆಮಂತ್ರಣವನ್ನು ಶ್ರೀ ಮಠದ ಪೌರ ಕಾರ್ಮಿಕರು ಬಿಡುಗಡೆ ಮಾಡಿದರು.
ಕೊಪ್ಪಳದ ಗವಿಸಿದ್ದೇಶ್ವರ ಮಹಾರಥೋತ್ಸವದ ದೃಶ್ಯ, ತೇರು ಎಳೆಯುವ ದೃಶ್ಯ, ಬಳಗಾನೂರ ಶ್ರೀ ಶಿವಶಾಂತವೀರ ಶರಣರ ದೀರ್ಘದಂಡ ನಮಸ್ಕಾರ, ಭಕ್ತಿ ಸಂಗೀತ, ಜಾತ್ರೆಗೆ ಆಗಮಿಸುವ ಭಕ್ತರ ಪಾದಯಾತ್ರೆ, ದಾಸೋಹ ಹಾಗೂ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ವಿವರಗಳನ್ನು ಈ ವಿಡಿಯೋ ಆಮಂತ್ರಣ ಒಳಗೊಂಡಿದೆ.
ಈ ಸುದ್ದಿಯನ್ನೂ ಓದಿ | Fellowship: ಪಿಎಚ್.ಡಿ ವಿದ್ಯಾರ್ಥಿಗಳಿಗೆ ಫೆಲೋಶಿಪ್‌ಗೆ ಅರ್ಜಿ ಆಹ್ವಾನ
ಜಾತ್ರಾ ಮಹೋತ್ಸವಕ್ಕೆ ಅಮಿತಾಬ್ ಬಚ್ಚನ್ ಆಗಮನ?
ಕೊಪ್ಪಳದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ವಿಶೇಷ ಅತಿಥಿಯಾಗಿ ಆಗಮಿಸುವ ನಿರೀಕ್ಷೆ ಇದೆ.