Saturday, 14th December 2024

ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಹಣಮಂತ ಕುಂಬಾರ ಆಯ್ಕೆ

ಇಂಡಿ: ತಾಲೂಕಿನ ಇಂಗಳಗಿ ಗ್ರಾಮ ಪಂಚಾಯತ್‌ನ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಹಣಮಂತ ಕುಂಬಾರ ಅವರು ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.

ಈ ಹಿಂದೆ ಅಧ್ಯಕ್ಷರಾಗಿದ್ದ ಹಣಮಂತ ಗುಡ್ಲ ಅವರ ಆಡಳಿತ ವೈಫಲ್ಯದಿಂದ ಬೇಸತ್ತ ಗ್ರಾ ಪಂನ ೧೪ ಸದಸ್ಯರು ಸೇರಿ ಇತ್ತೀಚೆಗೆ ಅವಿಶ್ವಾಸ ಗೊತ್ತುಗೊಳಿಸಿ ದ್ದರು. ೧೫ ಜನರ ಸದಸ್ಯ ಬಲ ಹೊಂದಿದ ಗ್ರಾ ಪಂ ನ ಅಧ್ಯಕ್ಷ ಸ್ಥಾನ ೨ಅ ವರ್ಗಕ್ಕೆ ಮೀಸಲಾಗಿತ್ತು. ಮಲ್ಲಿಕಾರ್ಜುನ ಕುಂಬಾರ ಓರ್ವರೇ ನಾಮಪತ್ರ ಸಲ್ಲಿಸಿದ್ದರಿಂದ ಅಭ್ಯರ್ಥಿ ಅವಿರೋಧ ಆಯ್ಕೆಯಾದರೆಂದು ಚುನಾವಣಾ ಧಿಕಾರಿ, ತಾಲೂಕಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುನೀಲ್ ಮದ್ದಿನ್ ಘೋಷಿಸಿದರು.

ಅಧ್ಯಕ್ಷರ ಅವಿರೋಧ ಆಯ್ಕೆ ನಂತರ ಗ್ರಾಮದ ಹಿರಿಯರು, ಮುಖಂಡರು ಪರಸ್ಪರ ಗುಲಾಲು ಎರಚಿ ಸಿಹಿಹಂಚಿ ಸಂಭ್ರಮಿಸಿ ದರು.

ಸುಭಾಸ ಥೋರಾತ, ಉಮೇಶ ಬಳಬಟ್ಟಿ, ಅಣ್ಣಪ್ಪ ಅಹಿರಸಂಗ, ಗುರು ಕುಂಬಾರ, ಸತೀಶ ಕುಂಬಾರ, ಜಗು ಕುಂಬಾರ, ಕಲ್ಲಪ್ಪ ಬಾರಾಣಿ, ಚಿಮ್ಮಾಜಿ ಥೋರಾತ, ಸುನೀಲ ದಶವಂತ, ದೋಂಡಿಬಾ ಮಾನೆ, ಅಜಿತ್ ಕದಮ್, ಯಾಸಿನ್ ಅಹಿರಸಂಗ, ಖಾಜು ಹೊನಕೋರೆ, ಶಿವು ಶಿವಗದ್ದಗಿ, ಸುರೇಖಾ ಬಾರಾಣೆ, ಜಯಶ್ರೀ ಹೊನ್ನಕೋರೆ, ಬೇಬಿ ರಾಠೋಡ, ಶ್ಯಾಯಿದಾ ಅಹಿರಸಂಗ, ಆರತಿ ಶಿವಗದ್ದಗಿ ಸೇರಿದಂತೆ ಮತ್ತಿತರರು ಇದ್ದರು.