Monday, 25th November 2024

Leopard Captured: ನೆಲಮಂಗಲದಲ್ಲಿ ಮಹಿಳೆಯನ್ನು ಕೊಂದಿದ್ದ ಚಿರತೆ ಸೆರೆ, ನಿಟ್ಟುಸಿರು ಬಿಟ್ಟ ಜನ!

Leopard Captured

ಬೆಂಗಳೂರು: ನೆಲಮಂಗಲ ತಾಲೂಕಿನ ಗೊಲ್ಲರಹಟ್ಟಿ ಗ್ರಾಮದಲ್ಲಿ ಮಹಿಳೆಯನ್ನು ಕೊಂದು, ರುಂಡ ಹೊತ್ತೊಯ್ದಿದ್ದ ಚಿರತೆಯನ್ನು (Leopard Captured) ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದು, ಇದರಿಂದ ಆತಂಕದಲ್ಲಿದ್ದ ಜನ ನಿಟ್ಟುಸಿರು ಬಿಡುವಂತಾಗಿದೆ.

ನೆಲಮಂಗಲ ತಾಲೂಕಿನ ಗೊಲ್ಲರಹಟ್ಟಿ ಗ್ರಾಮದಲ್ಲಿ ಕಳೆದ ವಾರ ಕರಿಯಮ್ಮ (55) ಎಂಬ ಮಹಿಳೆ ಚಿರತೆ ದಾಳಿಯಿಂದ ಮೃತಪಟ್ಟಿದ್ದರು. ಹೀಗಾಗಿ ಸತತ 1 ವಾರ ನಿರಂತರ ಕಾರ್ಯಾಚರಣೆ ನಡೆಸಿದ ಅರಣ್ಯಾಧಿಕಾರಿಗಳು ಚಿರತೆಯನ್ನು ಸೆರೆ ಹಿಡಿದಿದ್ದಾರೆ. ಚಿರತೆಯನ್ನು ಬಲಿ ಪಡೆದಿದ್ದ ಚಿರತೆ ಇದೇನಾ ಅಥವಾ ಬೇರೆಯದೋ ಎಂಬುವುದರ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಡಿಎನ್‌ಎ ಪರೀಕ್ಷೆಯ ಬಳಿಕ ಈ ಬಗ್ಗೆ ಧೃಡವಾಗಲಿದೆ.

ನೆಲಮಂಗಲ ತಾಲೂಕಿನ ಗೊಲ್ಲರಹಟ್ಟಿ ಗ್ರಾಮದಲ್ಲಿ ಕರಿಯಮ್ಮ (55) ಎಂಬುವವರು ಜಾನುವಾರುಗಳಿಗೆ ಮೇವು ತರಲು ಜಮೀನಿಗೆ ಹೋಗಿದ್ದ ವೇಳೆ ಚಿರತೆ ದಾಳಿ ನಡೆಸಿ, ರುಂಡ ಹೊತ್ತೊಯ್ದಿತ್ತು. ಬಳಿಕ ಅಂತ್ಯ ಸಂಸ್ಕಾರದ ವೇಳೆಯೂ ಆಗಮಿಸಿದ್ದ ಆ ಚಿರತೆ ಮಹಿಳೆಯ ಮೃತದೇಹವನ್ನು ಎಳೆದೊಯ್ಯಲು ಪ್ರಯತ್ನಿಸಿತ್ತು. ಹೀಗಾಗಿ ಗ್ರಾಮದ ಸುತ್ತಮುತ್ತ ವನ್ಯ ಪ್ರಾಣಿಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ | Manipur Violence: ಮಣಿಪುರ ಅಪಹರಣ-ಹತ್ಯೆ ಪ್ರಕರಣ; ಮರಣೋತ್ತರ ಪರೀಕ್ಷೆ ವರದಿಯಲ್ಲಿ ಬಯಲಾಯ್ತು ಕುಕಿ ಉಗ್ರರ ಅಟ್ಟಹಾಸ

ಹಲವು ಕೇಸುಗಳಿರುವ ವಿಚಾರಣಾಧೀನ ಕೈದಿಗೆ ಜಾಮೀನು ಇಲ್ಲ: ಹೈಕೋರ್ಟ್

ಬೆಂಗಳೂರು: ವಿಚಾರಣಾಧೀನ ಕೈದಿ (undertrial prisoner) ವಿರುದ್ಧ ಹಲವು ಪ್ರಕರಣಗಳಿದ್ದರೆ ಜಾಮೀನು (Bail) ನೀಡಲಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ (Karnataka High Court) ಮಹತ್ವದ ತೀರ್ಪು ನೀಡಿದೆ.

ವಿಚಾರಣಾಧೀನ ಕೈದಿಯು ಒಟ್ಟು ಶಿಕ್ಷೆಯ ಪೈಕಿ ಮೂರನೇ ಒಂದರಷ್ಟು ಕಳೆದಿದ್ದರೆ ಜಾಮೀನಿಗೆ ಅರ್ಹ ಎನ್ನುವ ಬಿಎನ್ಎಸ್ಎಸ್ ಸೆಕ್ಷನ್ 479 ಅನ್ವಯವಾಗುವುದಿಲ್ಲ. ವಿಚಾರಣಾಧೀನ ಕೈದಿಯ ವಿರುದ್ಧದ ಅಪರಾಧ ಪ್ರಕರಣಕ್ಕೆ ನಿಗದಿಯಾಗಿರುವ ಒಟ್ಟು ಶಿಕ್ಷೆಯ ಪ್ರಮಾಣದಲ್ಲಿ ಮೂರನೇ ಒಂದು ಭಾಗದ ದಿನಗಳನ್ನು ಕೈದಿಯು ಜೈಲಿನಲ್ಲಿ ಕಳೆದರೆ ಜಾಮೀನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಪ್ರತಿಪಾದಿಸುವ ನೂತನ ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ ಸೆಕ್ಷನ್ 479 ಹಲವು ಪ್ರಕರಣಗಳು ದಾಖಲಾಗಿದ್ದ ಸಂದರ್ಭದಲ್ಲಿ ಅನ್ವಯವಾಗುವುದಿಲ್ಲವೆಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಠೇವಣಿದಾರರಿಗೆ ವಂಚಿಸಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಅರ್ಜಿದಾರರು ಜಾಮೀನು ಕೋರಿ 2ನೇ ಬಾರಿಗೆ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ನಕಲಿ ದಾಖಲೆಗಳನ್ನು ಸೃಷ್ಟಿಸಿ ಠೇವಣಿದಾರರಿಗೆ ವಂಚಿಸಿದ್ದ ಪ್ರಕರಣದಲ್ಲಿ 31 ತಿಂಗಳಿಂದ ಜೈಲಿನಲ್ಲಿರುವ ಕಾರಣಕ್ಕೆ ಈ ಸೆಕ್ಷನ್ ಆಧರಿಸಿ ಜಾಮಿನು ನೀಡುವಂತೆ ಕೋರಿ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಮತ್ತು ಶ್ರೀ ಗುರು ಸಾರ್ವಭೌಮ ಸೌಹಾರ್ದ ಕ್ರೆಡಿಟ್ ಕೋಆಪರೇಟಿವ್ ಲಿಮಿಟೆಡ್ ಅಧ್ಯಕ್ಷ ಕೆ. ರಾಮಕೃಷ್ಣ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ಅವರ ಪೀಠ ಮಹತ್ವದ ಆದೇಶ ಹೊರಡಿಸಿದೆ.

ಇದನ್ನೂ ಓದಿ: Kantara Movie: ‘ಕಾಂತಾರಾ’ ಚಿತ್ರತಂಡದ ಬಸ್ ಪಲ್ಟಿ, 6 ಮಂದಿಗೆ ಗಾಯ