ಪಾವಗಡ: ಪ್ರತಿಯೊಬ್ಬ ವ್ಯಕ್ತಿ ತಮ್ಮ ತಮ್ಮ ಜೀವನದಲ್ಲಿ ಅವರದೇಯಾದ ಸಾಧನೆ ಮಾಡಿರುತ್ತಾರೆ. ಆದರೆ ಸಾಧನೆ ಮಾಡದ ಸಾವು ಸಾವಿಗೆ ಮಾಡುವ ಅವಮಾನ ಎಂದು ಮಹಾಬಲೇಶ್ವರ್ ಎಂ.ಡಿ. ಹಾಗೂ ಸಿಇಓ ಕರ್ಣಾಟಕ ಬ್ಯಾಂಕ್ ಲಿಮಿಟೆಡ್ ತಿಳಿಸಿದರು.
ಪಾವಗಡ ಪಟ್ಟಣದ ಶನಿ ಮಹಾತ್ಮ ಕಾರ್ಯನಿರ್ವಾಹಕ ಸಂಘ ಹಾಗೂ ಶನಿ ಮಹಾತ್ಮ ವಿದ್ಯಾ ಮತ್ತು ಔದಾರ್ಯ ದರ್ತಿ ಶಾಂತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ಬ್ಯಾಂಕ್ ಲಿಮಿಟೆಡ್ ಸಿಎಸ್ಆರ್ ನಿಧಿಯಿಂದ ನೀಡಿರುವ ಬಸ್ ಹಸ್ತಾಂತರದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಅಂತಿಮ ಕ್ಷಣ ಹೇಗಿರಬೇಕು. ಎಂದರೆ ನಾವು ನಡೆದ ಬಂದಂತ ದಾರಿ ನಾವು ಬದುಕಿದ ಬಗ್ಗೆ ಇನ್ನೊಬ್ಬರ ಬದುಕನ್ನು ಬದುಕಾಗಿಸುವ ಅಥವಾ ಹಸನಾಗಿಸುವ ಬದುಕು ನಮ್ಮದಾಗಿರಬೇಕು.
ಈಗಿನ ಜೀವನದಲ್ಲಿ ಪ್ರತಿಯೊಬ್ಬರು ಕನಸನ್ನು ನನಸು ಮಾಡಬೇಕಾದರೆ ಅದಕ್ಕೆ ಬಲವಾದ ತಳ ನಿರ್ಮಾಣ ಮಾಡಿಕೊಂಡರೆ ಮಾತ್ರ ನಿಮ್ಮ ಕನಸು ನನಸಾಗಲು ಸಾಧ್ಯ. ಇವತ್ತಿನ ಪರಿಸ್ಥಿತಿ ವಿಮರ್ಶಿಸಿ ಮುಂದೆ ಸಮಾಜದಲ್ಲಿ ಎಂತಹ ವ್ಯಕ್ತಿಯಾಗಬೇಕು ಎಂಬುದು ಯೋಚನೆ-ಯೋಜನೆ ಮನಸ್ಸಿನಲ್ಲಿ ಬಂದರೆ ಮಾತ್ರ ನಿಮ್ಮ ತಂದೆ ತಾಯಿಯ ಹೆಮ್ಮೆ ಪಡೆಯಲು ಸಾಧ್ಯವಾಗುತ್ತದೆ ಎಂದರು.
ನಂತರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆ.ವಿ.ಶ್ರೀನಿವಾಸ್ ರವರು ಶನಿಮಹಾತ್ಮ ದೇವಸ್ಥಾನದ ಸಂಘದ ಅಧ್ಯಕ್ಷ ಮಾತನಾಡಿ, ಈಗಾಗಲೇ ನಮ್ಮ ಶಾಂತಿ ಎಸ್.ಎಸ್.ಕೆ ಕಾಲೇಜಿನಲ್ಲಿ 800 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು ಈ ಶಾಲೆ ಊರ ಹೊರ ಭಾಗದಲ್ಲಿ ಇರುವ ಕಾರಣ, ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲವಾಗಲೆಂದು ಕರ್ನಾಟಕ ಬ್ಯಾಂಕ್ ರವರಿಗೆ ಬಸ್ ನೀಡಲು ಮನವಿ ಸಲ್ಲಿಸಿದ ಕಾರಣ ಕೇವಲ ಒಂದು ತಿಂಗಳಿನಲ್ಲಿ ಬಸ್ ನೀಡಿದ್ದಾರೆ ಅವರಿಗೆ ನಮ್ಮ ಎಸ್ ಎಸ್ ಕೆ ಸಂಘದಿಂದ ಅಭಿನಂದನೆಗಳು ಹಾಗೂ ಕೃತಜ್ಞತೆಗಳು. ವಿದ್ಯಾಸಂಸ್ಥೆಯ ನಡೆಸಲು ಡಾ. ನಾರಾಯಣಪ್ಪನವರ ಅವರ ಪತ್ನಿಯ ಹೆಸರಿನಲ್ಲಿ 9 ವರೆ ಎಕರೆ ಜಮೀನು ನೀಡಿದ ಕಾರಣ ಇಂದು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಲು ಅವಕಾಶವಾಗಿದೆ ಎಂದರು. ಇಂದು ಎಂಟು ವರ್ಷ ಗಳು ಪೂರೈಸಿದ ಈ ಕಾಲೇಜಿನಲ್ಲಿ ಪ್ರಥಮ ದರ್ಜೆ ಕಾಲೇಜು ಪಿಯು ಕಾಲೇಜು ಇತರೆ ಅನೇಕ ವಿಭಾಗ ಕೋರ್ಸ್ ಗಳು ಮಾಡಲು ಮುಂದಾಗಿದ್ದೇವೆ ಎಂದರು.
ಈ ವೇಳೆ ಸುಜುಕಿ ಸಂಘದ ಕಾರ್ಯದರ್ಶಿಗಳು ಟಿವಿ ಸುಬ್ಬು ನರಸಿಂಹಳು ಕರ್ನಾಟಕ ಬ್ಯಾಂಕ್ ಎಟಿಎಂ ಸುಬ್ಬರಾಮ ಸಂಘದ ಉಪಾಧ್ಯಕ್ಷರು ಆನಂದರಾವ್ ಹಾಗೂ ಸಂಘದ ಸದಸ್ಯರಾದ ಅನಿಲ್ ಕುಮಾರ್. ಸುರೇಶ್.ಸುದೇಶ್ ಬಾಬು. ಶ್ರೀರಾಮ್ ಗುಪ್ತ. ಪ್ರಾಂಶುಪಾಲ ಮನೋಜ್ ಕುಮಾರ್ ಹಾಗೂ ಇತರೆ ಸಿಬ್ಬಂದಿ ಇದ್ದರು