Friday, 22nd November 2024

ವೈ.ಎನ್.ಹೊಸಕೋಟೆ ಪಿಎಸ್ಐ ವಿರುದ್ಧ ಲೋಕಾಯುಕ್ತ ಡಿವೈಎಸ್ಪಿ ರವೀಶ್ ರಿಗೆ ದೂರು

ಪಾವಗಡ: ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಕಚೇರಿ ಅವರಣದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದು ಕೊರೆತ ಸಭೆಯಲ್ಲಿ ಸಾರ್ವಜನಿಕ ರಿಂದ ದೂರುಗಳನ್ನು ಪಡೆದುಕೊಂಡರು.

ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆ ಪಿಎಸ್ ಐ ರಾಮಯ್ಯ ವಿರುದ್ಧ ಲೋಕಯುಕ್ತ ಅಧಿಕಾರಿಗಳಿಗೆ ದೂರು ನೀಡಿದ ದಲಿತ ಮುಖಂಡ ಕೃಷ್ಣ ಮೂರ್ತಿ. ಪದೇ ಪದೇ ದಲಿತರ ಮೇಲೆ ವಿನಾಕಾರಣ ಸುಳ್ಳು ಪ್ರಕರಣಗಳನ್ನು ಸೃಷ್ಟಿ ಮಾಡಿ ಕೇಸು ದಾಖಲಿಸುತ್ತಿದ್ದರೆ ಇದರ ಬಗ್ಗೆ ಲೋಕಯುಕ್ತ ಅಧಿಕಾರಿ ಗಳು ತನಿಖೆ ಮಾಡಿ ಕ್ರಮ ಕೈಗೂಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ನಂತರ ಡಿ ಗ್ರೂಪ್ ನೌಕರರಿಗೆ ನಿವೇಶನಗಳು ನೀಡಲು ಜಿಲ್ಲಾಧಿಕಾರಿಗಳು ಮತ್ತು ನ್ಯಾಯಾಲಯ ಗ್ರೀನ್ ಸಿಗ್ನಲ್ ನೀಡಿದರು ತಡ ಮಾಡುತ್ತಿರುವ ಅಧಿಕಾರಿಗಳು ವಿರುದ್ಧ ಬಾಲ ಸುಬ್ರಮಣ್ಯ ದೂರು ನೀಡಿದರು ನಂತರ ಲೋಕಯುಕ್ತ ಡಿವೈಎಸ್ಪಿ ರವೀಶ್ ಉದ್ದೇಶಿಸಿ ಮಾತನಾಡಿದ ಅವರು ಕಳೇದ ಮೂವತ್ತು ಏಳು ವರ್ಷಗಳಿಂದ ಸತತವಾಗಿ ಅಲೇದಾಡಿಸುತ್ತಿರುವುದು ಏಕೆ ಎಂಬುದು ಅಧಿಕಾರಿಗಳ ಬಳಿ ಮಾಹಿತಿ ಪಡೆದು ಈ ರೀತಿ ಮಾಡುತ್ತಿರುವುದು ಸರಿ ಅಲ್ಲ ಮೊದಲು ಅರ್ಜಿಯನ್ನು ಹಾಕಿದ ನೌಕರರ ಪಟ್ಟಿ ಯನ್ನು ಮಾಡಿ ಅವರಿಗೆ ನೀವೆಶನ ನೀಡಿ ಎಂದು ಸೂಚಿಸುವ ಮೂಲಕ ಅಧಿಕಾರಿಗಳು ಅಧಿಕಾರಿಗಳ ಕೇಲಸ ಮಾಡಿ ಕೊಟ್ಟಾಗ ತಮ್ಮನ್ನು ಹಿಡಿ ಜೀವನ ನೆನಸಿಕೊಳ್ಳುತ್ತಾರೆ ಎಂದರು.

ಲೋಕಯುಕ್ತ ಸಾರ್ವಜನಿಕರ ಕುಂದು ಕೊರೆತ ಸಭೆಗಳಿಗೆ ಸತತವಾಗಿ ಗೈರು ಆದ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಯ ಮೇಲೆ ಲೋಕಯುಕ್ತ ಡಿವೈಎಸ್ ಪಿ.ರವೀಶ್ ಕೆಂಡಮಡಲವಾದ ಘಟನೆ ಬುಧವಾರ ಪಾವಗಡ ದಲ್ಲಿ ನಡೆದಿದೆ.

ನಂತರ ನ್ಯಾಯದಗುಂಟೆ ಗ್ರಾಮದ ನಾಗಭೂಷಣ್ ನೀಡಿದ ದೂರಿನಲ್ಲಿ ಚಿಕ್ಕ ತಿಮ್ಮನಹಟ್ಟಿ ಹಾಗೂ ಕ್ಯಾತಗಾನಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆ ಪಕ್ಕದಲ್ಲಿ ನಾಗರಾಜ್ ಎಂಬುವರು ಸುಮಾರು 200 ×200 ಅಳತೆಯ ಕೃಷಿ ಹೊಂಡ ನಿರ್ಮಾಣ ಮಾಡಿದ್ದಾರೆ ಅದರೆ ಅದು ಆ ಭಾಗದ ಪ್ರಾಣಿಗಳ ಮತ್ತು ಸಾರ್ವಜನಿಕ ಸಾವಿಗೆ ಆಹ್ವಾನ ನೀಡುವಂತೆ ಇದೇ. ಏಕೆಂದರೆ ಹೊಂಡದ ಪಕ್ಕ ದಲ್ಲಿಯೇ ರಸ್ತೆ ಒಂದು ಕಡೇ ಹಾಗೂ ಚಿಕ್ಕ ಮಕ್ಕಳು ವಿದ್ಯಾಬ್ಯಾಸ ಮಾಡುತ್ತಿರುವ ಶಾಲೆ ಇದ್ದು ಮಕ್ಕಳು ಆಟವಾಡಲೇಂದು ಹೋಗುವ ಸಂದರ್ಭಗಳಿಂದ ಯಾವೂದೇ ವೇಳೆಯಲ್ಲಿ ಅನಾಹುತ ಸಂಭವಿಸಬಹುದು ಎಂಬ ಉದ್ದೇಶದಿಂದ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಕೃಷಿ ಹೊಂಡಕ್ಕೆ ಸುತ್ತಲು ತಡೆ ಗೋಡೆ ನಿರ್ಮಿಸಬೇಕಾಗಿ ದೂರಸಲ್ಲಿಸಿದ್ದೆನೆ ಎಂದು ಎನ್.ಆರ್.ನಾಗಭೋಷಣ್ ತಿಳಿಸಿದ್ದಾರೆ.

ಪಾರ್ಕ್ ನಿವೇಶನಗಳ ಬಗ್ಗೆ ಸರಯಾದ ಮಾಹಿತಿ ನೀಡದ ಕಾರಣ ಪಾವಗಡ ಪುರಸಭೆ ಮುಖ್ಯಾಧಿಕಾರಿ ನವಿನ್ ಚಂದ್ರ ರವರಿಗೆ ಲೋಕಯುಕ್ತ ಅಧಿಕಾರಿ ರವೀಶ್ ರವರು ನೋಟೀಸ್ ಜಾರಿಮಾಡಲು ಸೂಚಿಸಿದರು.

ಈ ವೇಳೆ ತಾಲ್ಲೂಕು ಅಧಿಕಾರಿಗಳು ಮತ್ತು ಪೋಲಿಸ್ ಅಧಿಕಾರಿಗಳು ಹಾಜರಾಗಿದ್ದರು.