Saturday, 27th July 2024

ಮಂಡ್ಯ ಜನರೇ ನನ್ನ ಹೈಕಮಾಂಡ್‌: ಸಂಸದೆ ಸುಮಲತಾ ಅಂಬರೀಶ್

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ – 19

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್ ಮಾತು

ಬೆಂಗಳೂರು
ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೊ ಇಲ್ಲವೋ ಗೊತ್ತಿಲ್ಲ. ಆದರೆ ನಾನು ಅಂಬರೀಶ್ ಹಾಕಿಕೊಟ್ಟ ದಾರಿಯಲ್ಲಿ ಸಾಗಲು ಪ್ರಯತ್ನ ಮೀರಿ ಕೆಲಸ ಮಾಡುತ್ತಿರುವುದೇ ನನ್ನ ಸಾಧನೆ. ಬೇರೆಯವರ ಟೀಕೆಗಿಂತ, ಮಂಡ್ಯ ಜನರಿಟ್ಟಿರುವ ವಿಶ್ವಾಸ ಉಳಿಸಿಕೊಳ್ಳುವ ಕೆಲಸದ ಬಗ್ಗೆ ಚಿಂತಿಸುತ್ತೇನೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದರು.

‘ವಿಶ್ವವಾಣಿ ಕ್ಲಬ್‌ಹೌಸ್’ನಲ್ಲಿ ಆಯೋಜಿಸಿದ್ದ ‘ಮಂಡ್ಯ ಮಗಳೊಂದಿಗೆ ಮಾತುಕತೆ’ ಸಂವಾದದಲ್ಲಿ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆಯನ್ನು
ಪ್ರಶ್ನಿಸಿದವರನ್ನೇ ಪ್ರಶ್ನಿಸಿದರೆ ಅದರ ಅರ್ಥವೇನು? ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ಸಂಸದೆಯಾದ ಬಳಿಕ ನಾನು ಎಲ್ಲ ವಿಷಯಗಳಿಗೆ ಪ್ರತಿಕ್ರಿಯಿಸಲ್ಲ. ಅನೇಕ ಬಾರಿ ನನ್ನನ್ನು ಟೀಕಿಸಿದರೂ, ಅದಕ್ಕೆ ಪ್ರತಿಕ್ರಿಯೆ ನೀಡಲಿಲ್ಲ. ಬೆಂಬಲಿಗರಿಗೆ ಸ್ಥಳೀಯ ಮಟ್ಟದಲ್ಲಿ ಮುಜುಗರವಾಗುತ್ತದೆ. ಮುಂದಿನ ಚುನಾವಣೆಯಲ್ಲಿ ಏನಾಗುತ್ತದೆ? ಗೆಲ್ಲುತ್ತೇನೋ ಸೋಲುತ್ತೇನೋ ಗೊತ್ತಿಲ್ಲ. ಆದರೆ ಪಕ್ಷೇತರ ಸಂಸದೆಯಾಗಿದ್ದೇ ಒಂದು ಇತಿಹಾಸ. ಅದೇ ನನ್ನ ಸೌಭಾಗ್ಯ ಎಂದು ಹೇಳಿದರು.

ಕುಮಾರಸ್ವಾಮಿ ಅವರ ಹೇಳಿಕೆಯ ಬಗ್ಗೆ ಮಾತನಾಡಿದ ಅವರು, ಅವರ ಮಾತಿಗೆ ನಾನು ವಿರೋಧಿಸಿದ್ದೇ ಹೊರತು, ವಿಷಯಕ್ಕೆ ಅಲ್ಲ. ಮಾಜಿ ಮುಖ್ಯಮಂತ್ರಿ ಯಾಗಿ, ಶಾಸಕರಾಗಿ, ೬೦ ವರ್ಷ ಪೂರೈಸಿರುವ ವ್ಯಕ್ತಿ ಮಾತನಾಡುವಾಗ ಘನತೆಯಿಂದ ಇರಬೇಕು. ಆ ಮಟ್ಟಕ್ಕಿಂತ ಕೆಳಗೆ ಇಳಿಯಬಾರದು. ಅವರು ವೈಯಕ್ತಿಕ ಮಾತನಾಡಿದ್ದು ನೋಡಿ ನಾನು ಶಾಕ್ ಆದೆ. ಮಹಿಳೆಯ ಬಗ್ಗೆ ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಎಲ್ಲ ಹೇಳಿದ ಬಳಿಕ ಗ್ರಾಮೀಣ ಭಾಷೆ ಎಂದು ಹೇಳಿ ತಪ್ಪಿಸಿಕೊಳ್ಳಬಾರದು ಎಂದು ಟೀಕಾಪ್ರಹಾರ ನಡೆಸಿದರು.

ಸಂಸದೆಯಾಗಿ ಕೆಲಸ ಮಾಡಿದ್ದೇನೆ: ಮಂಡ್ಯದಿಂದ ಗೆದ್ದ ಬಳಿಕ ಸಂಸದೆಯಾಗಿ ನನ್ನ ಕೈಲಾದ ಕೆಲಸವನ್ನು ಮಾಡಿದ್ದೇನೆ. ಹಾಗೇ ನೋಡಿದರೆ ಸಂಸತ್‌ನಲ್ಲಿ ನನ್ನ ಹಾಜರಾತಿ ಹೆಚ್ಚಿದೆ. ಒಂದು ವರ್ಷದಲ್ಲಿ ನಾಲ್ಕು ದಿಶಾ ಸಭೆಗಳನ್ನು ಪೂರ್ಣಗೊಳಿಸಿದ್ದೇನೆ. ಸಂಸದರ ನಿಧಿ ಬಳಕೆಯಲ್ಲಿಯೂ ಟಾಪ್ ಸ್ಥಾನದಲ್ಲಿದ್ದೇನೆ. ನಾನು ನನ್ನ ಕೆಲಸವನ್ನು ಮಾಡುತ್ತಿದೇನೆ. ನಾನು ಭ್ರಷ್ಟಚಾರಿಯಲ್ಲ. ಅದೇ ನನ್ನ ಸಾಧನೆ. ಅಂಬರೀಶ್ ಹಾಕಿಕೊಟ್ಟ ದಾರಿಯಲ್ಲಿ ಸಾಗುತ್ತಿರುವುದೇ ನನ್ನ ಸಾಧನೆ
ಎಂದು ಹೇಳಿದರು.

ಅಘಾತ ತಂದ ತಂದೆಯ ಸಾವು: ಪೋಷಕರು ಆಂಧ್ರ ಮೂಲದವರಾದರೂ ನಾನು ಹುಟ್ಟಿದ್ದು ಚೆನ್ನೈನಲ್ಲಿ. ಬೆಳೆದಿದ್ದು ಮುಂಬೈನಲ್ಲಿ. ನನ್ನ ತಂದೆ ಎಲ್.ಬಿ.ಪ್ರಸಾದ್ ಅವರು ಕಲರ್ ಲ್ಯಾಬ್ ನಲ್ಲಿ ತಜ್ಞರಾಗಿದ್ದರು. ಆದರೆ ತಂದೆಯವರು ೩೭ ವರ್ಷದಲ್ಲಿದ್ದಾಗ ಮೃತಪಟ್ಟರು. ಇದು ಇಡೀ ಕುಟುಂಬಕ್ಕೆ ಭಾರಿ ಅಘಾತವನ್ನು ನೀಡಿತ್ತು. ೭೦ರ ದಶಕದಲ್ಲಿ ನನ್ನ ತಾಯಿ ವಿಧವೆಯಾಗಿ ಐದು ಮಕ್ಕಳನ್ನು ಸಾಕಿದ್ದು ಸಣ್ಣ ಮಾತಲ್ಲ. ಅವರೇ ನನಗೆ ಮೊದಲ ರೋಲ್ ಮಾಡೆಲ್.
ಸಣ್ಣವಳಿದ್ದಾಗಿನಿಂದ ಪುಸ್ತಕವನ್ನು ಓದುತ್ತಿದ್ದೆ. ತಂದೆಯ ಸಾವಿನಿಂದ ಮುಂಬೈನಿಂದ ವಾಪಸು ಆಂಧ್ರದ ಗುಂಟೂರಿಗೆ ಬಂದೆವು. ಅಲ್ಲಿ ೧೫ ವರ್ಷದ ತನಕ ಶಿಕ್ಷಣ ಪಡೆದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಇಂಗ್ಲಿಷ್, ಹಿಂದಿಯಲ್ಲಿ ಮೊದಲ ರ‍್ಯಾಂಕ್ ಪಡೆದಿದ್ದೆ. ಓದಿನಲ್ಲಿ ಚುರುಕಾಗಿದ್ದರಿಂದ ಸಂಬಂಧಿಕರು ನನ್ನನ್ನು ಐಎಎಸ್
ಅಽಕಾರಿಯನ್ನಾಗಿ ಮಾಡಬೇಕು ಎಂದು ಆಸೆ ಕಂಡಿದ್ದರು.

ಆಕಸ್ಮಿಕವಾಗಿ ಸಿನಿಮಾ ಎಂಟ್ರಿ: ಒಂದು ರೂಪದರ್ಶಿ ಸ್ಪರ್ಧೆಯಲ್ಲಿ ಸ್ನೇಹಿತರ ಒತ್ತಡಕ್ಕೆ ಮಣಿದು ಸ್ಪಽಸಿದೆ. ಅದರ ಫೋಟೋ ನೋಡಿ, ದೂರದ ಸಂಬಂಧಿ ಹಾಗೂ ನಿರ್ಮಾಪಕರಾದ ಡಿ.ರಾಮಾನಾಯ್ಡು ಅವರು ಸಿನಿಮಾದಲ್ಲಿ ನಟಿಸುವಂತೆ ಹೇಳಿದರು. ಆದರೆ ನನಗೆ ಇಷ್ಟವಿರಲಿಲ್ಲ. ಸಂಬಂಧಿಕರು ಒಪ್ಪಲಿಲ್ಲ. ಆದರೆ ಆಕಸ್ಮಿಕ ತಿರುವಿನಿಂದ ಸಿನಿಮಾಕ್ಕೆ ಎಂಟ್ರಿ ಕೊಟ್ಟೆ ಎಂದು ನೆನಪು ಮಾಡಿಕೊಟ್ಟರು. ಮೊದಲ ಚಿತ್ರದ ಮುಹೂರ್ತದಲ್ಲಿಯೇ ತಮಿಳು, ಮಲಯಾಳಂ
ನಿರ್ಮಾಪಕರು ಬಂದು ನನಗೆ ಅವಕಾಶ ಕೊಟ್ಟರು.

ಸಿನಿಮಾದಲ್ಲಿ ನಟಿಸುವ ಮೂಲಕ ಮನೆಯ ಜವಾಬ್ದಾರಿ ಹೋರಬೇಕು ಎಂದು ನಿರ್ಧರಿಸಿದ್ದರಿಂದ ಅಲ್ಲಿಗೆ ಶಿಕ್ಷಣ ನಿಂತುಹೋಯಿತು. ಆದರೆ ಆರಂಭದಲ್ಲಿ ಸಿನಿಮಾ ನನಗೆ ಆಗಿಬರುತ್ತಿರಲಿಲ್ಲ. ಈ ಬಗ್ಗೆ ಅಂಬರೀಶ್ ತಮಾಷೆ ಮಾಡುತ್ತಿದ್ದರು. ಆರಂಭದಲ್ಲಿ ಶೂಟಿಂಗ್‌ನಲ್ಲಿ ನನ್ನ ಕೆಲಸವಾಗುತ್ತಿದ್ದಂತೆ ನಾನು ಪ್ರತ್ಯೇಕವಾಗಿರುತ್ತಿದೆ. ದುರಹಂಕಾರ ಎಂದು ಅನೇಕರು ತಿಳಿದಿದ್ದರು. ಆ ಸಮಯದಲ್ಲಿ ಅಂಬರೀಶ್ ನನಗೆ ಕೆಲವು ವಿಷಯವನ್ನು ಹೇಳಿ, ನನ್ನನ್ನು ತಿದ್ದಿದರು ಎಂದು ನೆನಪಿಸಿಕೊಂಡರು.

ಅಂಬರೀಶ್ ಇರುವ ಕಡೆ ಖುಷಿಯಿರುತ್ತಿತ್ತು. ಎಲ್ಲರಿಗೂ ಅವರಿದ್ದರೆ ಆಕರ್ಷಣೆ ಇರುತ್ತಿತ್ತು. ಅವರ ಆ ಗುಣ ನನಗೆ ಇಷ್ಟವಾಯಿತು. ಅವರ ಜತೆ 12-14 ಚಿತ್ರಗಳಲ್ಲಿ ನಟಿಸಿದೆ. ವಿವಾಹವಾದ ಬಳಿಕ ನನ್ನ ಬಳಿ ಹಲವು ಸಲಹೆಗಳನ್ನು ಕೇಳುತ್ತಿದ್ದರು. ಅವರಿದ್ದಾಗ, ಎರಡು ಬಾರಿ ಕಾಂಗ್ರೆಸ್ ಅಧ್ಯಕ್ಷೆಯಿಂದ ನನಗೆ ಚುನಾವಣೆಯಲ್ಲಿ ನಿಲ್ಲುವಂತೆ ಅವಕಾಶ ಬಂದಿತ್ತು. ಆದರೆ ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚು ಮಂದಿ ರಾಜಕೀಯದಲ್ಲಿದ್ದರೆ ಸಮಸ್ಯೆಯಾಗುತ್ತದೆ ಎಂದು ನಿರಾಕರಿಸಿದ್ದೆವು. ಕೆಟ್ಟ ರಾಜಕೀಯದ ಇನ್ನೊಂದು ಮುಖವನ್ನು ನೋಡಿ ಅಂಬರೀಶ್ ನನ್ನನ್ನು ರಾಜಕೀಯಕ್ಕೆ ತರಲಿಲ್ಲ ಎನ್ನುವುದು ಈಗ ಅರಿವಾಗುತ್ತಿದೆ.

ಅಂಬಿ ಹೋದಾಗ ಖಿನ್ನತೆಗೆ ಒಳಗಾದೆ: ಅಂಬರೀಶ್ ಅವರ ಕೊನೆಯ ಐದು ವರ್ಷಗಳು ಸುಖವಾಗಿರಲಿಲ್ಲ. ಅನಾರೋಗ್ಯ ಸಮಸ್ಯೆ, ಮುಂದೇನು ಎನ್ನುವ ಆತಂಕದಲ್ಲಿಯೇ ಜೀವಿಸುತ್ತಿದ್ದೇವು. ಕೊನೆಯ ಮೂರು ವರ್ಷ ನಾನು ಸರಿಯಾಗಿ ಮಲಗಿರಲಿಲ್ಲ. ಆದರೆ ಅಂಬರೀಶ್ ಅವರು ಮೃತರಾದ ಬಳಿಕ ನಾನು ಖಿನ್ನತೆಗೆ ಒಳಗಾದೆ. ಆದರೆ ಅವರು ಎಂದಿಗೂ ಹೊಂದಾಣಿಕೆ ಮಾಡಿಕೊಳ್ಳಲಿಲ್ಲ. ಸಿಂಹದಂತೆ ಜೀವಿಸಿ, ಹಾಗೇ ಸತ್ತರು. ಅವರು ನನ್ನ ಜತೆಗಿಲ್ಲ ಎನ್ನುವ ಆತಂಕವಿದೆ. ಅವರಿದ್ದರೆ ಎಲ್ಲವೂ ಚೆನ್ನಾಗಿರುತ್ತದೆ. ಆದರೀಗ ಅವರ ನೆನಪು ಮಾತ್ರ ಉಳಿದಿದೆ ಎಂದರು.

ಅಂಬರೀಶ್ ಅವರು ಕೊನೆಯುಸಿರು ಎಳೆದಾಗ ಮಂಡ್ಯ ಜನತೆ, ನನ್ನನ್ನು ಅವರ ಸ್ಥಾನದಲ್ಲಿ ನೋಡುತ್ತೇನೆ ಎಂದು ಕೊಂಡಿರಲಿಲ್ಲ. ಆದರೆ ಕೆಲ ಬೆಂಬಲಿಗರು ಬಂದು, ನನ್ನನ್ನು ಸ್ಪಽಸುವಂತೆ ಒತ್ತಡ ಹೇರಿದರು. ಅವರ ಪ್ರೀತಿ, ವಿಶ್ವಾಸವನ್ನು ನೋಡಿ ಆಘಾತವಾಯಿತು. ಆರಂಭದಲ್ಲಿ ರಾಜಕೀಯಕ್ಕೆ ಪ್ರವೇಶಿಸುವುದು ನನಗೆ ಹಾಗೂ ಅಭಿಷೇಕ್‌ಗೆ ಇಷ್ಟವಿರಲಿಲ್ಲ.

ಆದರೆ ಚುನಾವಣೆಗೆ ಸ್ಪಽಸುವ ಮೊದಲು ಮಂಡ್ಯ ಪ್ರವಾಸ ಮಾಡಲು ನಿರ್ಧರಿಸಿದೆ. ಆ ಅನೇಕರು ಕಾರಿನ ಹಿಂದೆ ಓಡಿಬರುತ್ತಿದ್ದರು. ಸ್ಪರ್ಧಿಸಲು ಒಪ್ಪಿಗೆ ನೀಡುವಂತೆ ಒತ್ತಡ ಹೇರಲು ಶುರುಮಾಡಿದರು. ಕೆಲವೆಡೆ ಚುನಾವಣೆಗೆ ನಿಲ್ಲದಿದ್ದರೆ ಬರಬೇಡಿ ಎಂದಲ್ಲ ಹೇಳುತ್ತಿದ್ದರು. ಮಂಡ್ಯ ಭಾಷೆಯಲ್ಲಿ ಅವರು ಹೇಳುತ್ತಿದ್ದ ಮಾತನ್ನು ಕೇಳಿ ನಾನು ನಡುಗಿ ಹೋದೆ. ಆದ್ದರಿಂದ ಅವರ ಪ್ರೀತಿಯನ್ನು ಬಿಡಲು ಸಿದ್ಧವಿರಲಿಲ್ಲ. ಆದ್ದರಿಂದ ಭಾವನಾತ್ಮಕ ನಿರ್ಧಾರ ತಗೆದುಕೊಂಡೇ ಎಂದು ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ಜೋಡೆತ್ತಿನಂತೆ ಯಶ್ ಹಾಗೂ ದರ್ಶನ್ ನಿಂತುಕೊಂಡರು. ಆದರೆ ಅಂಬರೀಶ್ ಜತೆಯಲ್ಲಿಯೇ ಇದ್ದರು, ಅವರು ಹೋದ ಬಳಿಕ ಮಾಯವಾದರು. ಚುನಾವಣಾ ಫಲಿತಾಂಶದ ದಿನವೂ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಆರಂಭದಲ್ಲಿ ಹಿನ್ನಡೆ ಅನುಭವಿಸಿದ್ದೆ. ಆದರೆ ನಂಜನಗೂಡು ದೇವಾಲಯ ದಲ್ಲಿ ಪೂಜೆ ಮಾಡಿಸುತ್ತಿರುವಾಗ ಲೀಡ್ ಬಂದಿದೆ ಎಂದು ತಿಳಿಯಿತು. ಅದು ಮೊದಲ ಸಿಹಿ ಸುದ್ದಿಯಾಗಿತ್ತು ಎಂದು ನೆನಪಿಸಿಕೊಂಡರು.

ವರ್ಷದಲ್ಲಿ ಮದುವೆ ಮುರಿಯುತ್ತದೆ ಎಂದಿದ್ದರು
ಅಂಬರೀಶ್ ಅವರನ್ನು 1984ರಲ್ಲಿ ಭೇಟಿಯಾದೆ. ಆಗ ಅವರಲ್ಲಿದ್ದ ಆಕರ್ಷಣೆಗೆ ನಾನು ಒಳಗಾದೆ. ಆರಂಭದಲ್ಲಿ ಸ್ನೇಹಿತೆಯಾಗಿ, ಬಳಿಕ ಉತ್ತಮ ಸ್ನೇಹಿತ ರಾದೆವು. ಸ್ನೇಹ ಮೀರಿದ ಸಂಬಂಧ ಎನ್ನುವುದು ತಿಳಿಯುತ್ತಿದ್ದಂತೆ ವಿವಾಹವಾಗಲು ನಿರ್ಧರಿಸಿದೆವು. ಅಂಬರೀಶ್ ಅವರ ಜೀವನ ಕ್ರಮವನ್ನು ನೋಡಿದ ಅನೇಕರು ಅವರನ್ನು ‘ಆಜನ್ಮ ಬ್ರಹ್ಮಚಾರಿ’ ಎಂದೇ ಅಂದುಕೊಂಡಿದ್ದರು. ಆದರೆ ನಾವು ಮದುವೆಯಾಗುತ್ತೇವೆ ಎಂದಾಗ ಒಬ್ಬರು ‘ಇನ್ನೊಂದು ವರ್ಷದಲ್ಲಿ ಮದುವೆ ಮುರಿಯುತ್ತದೆ’ ಎಂದಿದ್ದರು. ೨೫ ವರ್ಷದ ಕಾರ್ಯಕ್ರಮದಲ್ಲಿ ಆ ವ್ಯಕ್ತಿ ಬಂದಾಗ, ಅದನ್ನು ಕೇಳಿದ್ದೆ ಎಂದು ನೆನಪಿಸಿಕೊಂಡರು.

***

ರಾಜಕೀಯ ಗೌರವ ವೃತ್ತಿಯಾಗಿ ಉಳಿದಿಲ್ಲ. ಆದರೆ ಸಾರ್ವಜನಿಕ ಭಾಷೆ ಒಂದು ಮಿತಿಯಲ್ಲಿರಬೇಕು. ಭಾಷೆಯಲ್ಲಿರುವ ಶಕ್ತಿಯೆಂದರೆ ಪ್ರಾಮಾಣಿಕವಾಗಿ ಮಾತನಾಡಿದರೆ ಎಲ್ಲರನ್ನೂ ಒಲಿಸಿಕೊಳ್ಳಬಹುದು. ಆದರೆ ಮಾತಿನ ಮನೆಯಾಗಿದ್ದ ಸಂಸತ್ ಸಹ ಮಾತಿನಲ್ಲಿ ನಂಬಿಕೆ ಉಳಿಸಿಕೊಂಡಿಲ್ಲ.
– ಪ್ರೊ. ಕೃಷ್ಣೇಗೌಡ ವಾಗ್ಮಿ

Leave a Reply

Your email address will not be published. Required fields are marked *

error: Content is protected !!