Sunday, 15th December 2024

ಕುಡಚಿ ಶಾಸಕ ಪಿ.ರಾಜೀವ ತಾಯಿ ಕರೋನಾಗೆ ಬಲಿ

ಚಿಕ್ಕೋಡಿ: ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ಅಧ್ಯಕ್ಷ, ಬಿಜೆಪಿಯ ಕುಡಚಿ ಶಾಸಕ ಪಿ.ರಾಜೀವ ಅವರ ತಾಯಿ ಶಾಂತಮ್ಮ ಪಾಂಡಪ್ಪ ಲಮಾಣಿ (72) ಅವರು ಮಹಾಮಾರಿ ಕರೋನಾಗೆ ಬಲಿಯಾಗಿದ್ದಾರೆ.

ಶಾಸಕ‌ ಪಿ.ರಾಜೀವ ಅವರ ತಾಯಿಗೆ ಇತ್ತೀಚಿಗೆ ಕರೋನಾ ಸೋಂಕು ತಗುಲಿತ್ತು. ಒಂದು ವಾರದಿಂದ ಬೆಳಗಾವಿಯ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಕೊಡಿಸ ಲಾಗುತ್ತಿತ್ತು.

ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಗುರುವಾರ ಕೊನೆಯುಸಿ ರೆಳೆದಿದ್ದಾರೆ.