Saturday, 26th October 2024

ಡಿಸೆಂಬರ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಿ, 38ಕೆರೆಗಳಿಗೆ ನೀರು ಸಂಗ್ರಹಿಸಿ: ಶಾಸಕ ವೆಂಕಟರಮಣಪ್ಪ

ಪರಿಶೀಲನೆ ಯೋಜನೆ ಪರಿಶೀಲಿಸಿದ ಶಾಸಕ ವೆಂಕಟರಮಣಪ್ಪ !

ಪೈಪ್ ಲೈನ್ ಕಾಮಗಾರಿ ಶೀಘ್ರ ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚನೆ

ಡಿಸೆಂಬರ್ ಅಂತ್ಯಕ್ಕೆ 38ಕೆರೆಗಳಿಗೆ ಭದ್ರಾ ಮೇಲ್ದಂಡ ನೀರು

ಪಾವಗಡ : ಮಹಾತ್ವಾಕಾಂಕ್ಷೆಯ ಭದ್ರಾ ಮೇಲ್ದಂಡ ಯೋಜನೆ ಪ್ರಗತಿ ಪರಿಶೀಲಿಸಿದ ಶಾಸಕ ವೆಂಕಟರಮಣಪ್ಪ ಹಾಗೂ ಯೋಜನೆಯ ಚಳ್ಳಕೆರೆ ವಿಭಾಗದ ಸಿಇಒ ರಾಘವನ್ ಪ್ರಸಕ್ತ ಸಾಲಿನ ಡಿಸೆಂಬರ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಿ ತಾಲೂಕಿನ 38ಕೆರೆಗಳಿಗೆ ನೀರು ಸಂಗ್ರಹಿಸುವಂತೆ ಆಂದ್ರದ ಜಿವಿಪಿಆರ್ ಕಂಪನಿ ಗುತ್ತಿಗೆದಾರರಿಗೆ ಆದೇಶಿಸಿದರು.

ತಾಲೂಕಿನ 38ಕೆರೆಗಳಿಗೆ ನೀರುತುಂಬಿಸುವ ಹಿನ್ನೆಲೆ ಪಾವಗಡ ತಾಲೂಕಿನಲ್ಲಿ 600 ಕೋಟಿ ವೆಚ್ಚದ ಭದ್ರಾ ಮೇಲ್ದಂಡ ಯೋಜನೆ ಪೈಪ್ ಲೈನ್ ಕಾಮಗಾರಿ ಪ್ರಗತಿಯಲ್ಲಿದ್ದು.ಈಗಾಗಲೇ ಶೇ.80ರಷ್ಟು ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ  ತಲುಪಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಪಾವಗಡಕ್ಕೆ ಆಗಮಿಸಿದ್ದ ಭದ್ರಾಮೇಲ್ದಂಡ ಚಳ್ಳಕೆರೆ ವಿಭಾಗದ ಮುಖ್ಯ ಕಾರ್ಯಪಾಲಕ ಎಂಜಿನಿ ಯರ್ ರಾಘವನ್ ಹಾಗೂ ವಿಭಾಗದ ಅಧೀಕ್ಷಕ ಎಂಜಿನಿಯರ್ ಶಿವಪ್ರಕಾಶ್ ಹಾಗೂ ಇತರೆ ಅಧಿಕಾರಿ ತಂಡ ಶಾಸಕ ಜತೆ ತೆರಳಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪ್ರಗತಿ ಕುರಿತು ಪರಿಶೀಲನೆ ನಡೆಸಿದರು.ಯೋಜನೆ ಕಾಮಗಾರಿ ತಾಲೂಕಿನಲ್ಲಿ ವೇಗ ಪಡೆದುಕೊಂಡಿದ್ದು.

ಇನ್ನೂ ಕಾಮಗಾರಿ ತ್ವರಿತವಾಗಿ ಪೂರೈಸಿ ಶೀಘ್ರ ಕೆರೆಗಳಿಗೆ ನೀರು ಹರಿಸುವ ಮಹತ್ತರ ಉದ್ದೇಶ ಹೊಂದಲಾಗಿದೆ.ಈಹಿನ್ನೆಲೆಯಲ್ಲಿ ಪಾವಗಡಕ್ಕೆ ಆಗಮಿಸಿದ್ದ ಯೋಜನೆಯ ಅಧಿಕಾರಿಗಳ ತಂಡ ಶಾಸಕರ ಜತೆ ತೆರಳಿ ತಾಲೂಕಿನ ಕೋಟಗುಡ್ಡ ಅಚ್ಚಮ್ಮನಹಳ್ಳಿ, ನಾಗಲಾಪುರ.ಹಾಗೂ ಪಳವಳ್ಳಿ ಕೆರೆಗಳಿಗೆ ಇದೇ ವೇಳೆ ಭೇಟಿ ನೀಡಿ ಪೈಪ್ ಲೈನ್ ಕಾಮಗಾರಿ ವೀಕ್ಷಿಸಿ.ಕಾಮಗಾರಿಯ ನಕ್ಷೆ ಪರಿಶೀಲಿಸಿ ಕಾಮಗಾರಿಯ ತೊಡಕುಗಳ ಬಗ್ಗೆ ವಿವರ ಪಡೆದರು.ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ. ನಂತರ ನಡೆದ ಅಧಿಕಾರಿಗಳ ಸಭೆಯಲ್ಲಿ ಶಾಸಕ ವೆಂಕಟರಮಣಪ್ಪ ಮಾತನಾಡಿ.ತಾಲೂಕಿನಲ್ಲಿ ಈಗಾಗಲೇ ಬರ ಅವರಿಸಿದೆ.

ನೀರಿನ ಅಭಾವದಿಂದ ಕೊಳವೇಬಾವಿಗಳು ಬತ್ತಿಹೋಗಿವೆ.ನೀರಾವರಿ ಬೆಳೆಗಳು ಹಾಳಾಗಿ ರೈತರ ಪರಿಸ್ಥಿತಿ ತೀವ್ರ ಸಂಕಷ್ಟ ಕ್ಕೀಡಾಗಿದೆ. ಅಂತರ್ಜಲಬತ್ತಿಹೋಗಿದ್ದು.ರೈತರ ಸ್ಥಿತಿ ಶೋಚನೀಯವಾಗಿದೆ. ಎಕರೆಗಟ್ಟಲೆ ಬೆಳೆಬೆಳೆದು ಊರಿಗೆ ಅಣ್ಣ ನೀಡುವ ರೈತ ಇಂದು ಕೂಲಿಮಾಡಿ ಜೀವನ ಸಾಗಿಸುವ ಒಂದೊಂದಾಗಿದೆ.ಹೀಗಾಗಿ ಕಾಮಗಾರಿ ತ್ವರಿತ ಪೂರ್ಣ ಗೊಳಿಸಿ ಕೆರೆಗಳಿಗೆ ಶೀಘ್ರ ನೀರು ತುಂಬಿಸುವಂತೆ ಭದ್ರಾ ಮೇಲ್ದಂಡೆ ಯೋಜನೆ ಮತ್ತು ಗುತ್ತಿಗೆ ಕಂಪನಿ ಅಧಿಕಾರಿಗಳಿಗೆ ಒತ್ತಡವೇರಿದರು.

ಈ ಸಂಬಂಧ ಪ್ರತಿಕ್ರಿಯಿಸಿದ ಅಧಿಕಾರಿಗಳು ತಂಡ ಚಿತ್ರದುರ್ಗ ಜಿಲ್ಲೆಯ ರಾಮಶೀರ್ಥಹಳ್ಳಿ ಸಂಗ್ರಹ ಡ್ಯಾಂನಿಂದ ಪಾವಗಡ ತಾಲೂಕಿನ ಶೈಲಾಪುರ ಸಮೀಪ ನಿಗದಿಪಡಿಸಿದ್ದ ಬೃಹತ್ ಟ್ಯಾಂಕ್ಗೆ ಭದ್ರಮೇಲ್ದಂಡೆ ನೀರು ಸರಬ ರಾಜು ಮಾಡಲಾಗುತ್ತಿದ್ದು, ಇಲ್ಲಿಂದ ಪೈಪ್ ಲೈನ್ ಮೂಲಕ ತಾಲೂಕಿನ38 ಕೆರೆಗಳಿಗೆ ನೀರು ಪೂರೈಕೆ ಮಾಡಲಾಗುವುದು.

ತಾಲೂಕಿನಲ್ಲಿ ಭದ್ರಮೇಲ್ದಂಡೆ ಕಾಮಗಾರಿ ಕ್ಷೀಪ್ರಗತಿಯಲ್ಲಿ ಸಾಗುತ್ತಿದ್ದು.ಈಗಾಗಲೇ 38 ಕೆರೆಗಳ ಪೈಕಿ22 ಕೆರೆಗಳಿಗೆ ನೀರು ಪೂರೈಕೆಯ ಪೈಪ್ ಲೈನ್ ಕಾಮಗಾರಾ ಪೂರ್ಣಗೊಂಡಿದೆ.

ಜರೂರಾಗಿ ಕಾಮಗಾರಿ ಕೈಗೆತ್ತಿಕೊಳ್ಳುವ ಮೂಲಕ ಅತೀ ಶೀಘ್ರ ಉಳಿಕೆ ಕೆರೆಗಳಿಗೆ ಪೈಪ್ ಲೈನ್ ಸಂಪರ್ಕ ಅಳವಡಿಸಲಾಗುವುದಾಗಿ ತಿಳಿಸಿದರು.ಭದ್ರಮೇಲ್ದಂಡೆ ಚಳ್ಳಕೆರೆ ವಿಭಾಗದ ಅಧೀಕ್ಷಕ ಎಂಜಿನಿಯರ್ ಶಿವಪ್ರಕಾಶ್,ಕಾರ್ಯಪಾಲಕ ಎಂಜಿನಿಯರ್ ಮಧುಕುಮಾರ್, ಎಇಇ ಜನಾರ್ದನಚಾರಿ ಸಹಾಯಕ ಎಂಜಿನಿಯರ್ ಗಿರೀಶ್, ಹಾಗೂ ಜಿವಿಪಿಆರ್ ಕಂಪನಿಯ ವ್ಯವಸ್ಥಾಪಕ ಮಂಜುನಾಥಸ್ವಾಮಿ., ಯೋಜನಾಧಿಕಾರಿ ಬಾಲಕೃಷ್ಣ ಇದ್ದರು.