Thursday, 21st November 2024

MUDA Case: ಮುಡಾ ತನಿಖೆ, ಬೆಂಗಳೂರು ಸೇರಿ ರಾಜ್ಯದ 9 ಕಡೆ ಇಡಿ ಅಧಿಕಾರಿಗಳ ದಾಳಿ

ed raid

ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದದಲ್ಲಿ ನಡೆದಿರುವ ಹಗರಣಕ್ಕೆ (MUDA case, MUDA scam) ಸಂಬಂಧಿಸಿದಂತೆ ತನಿಖೆ ಮತ್ತಷ್ಟು ಚುರುಕುಗೊಂಡಿದ್ದು, ಇಂದು ಜಾರಿ ನಿರ್ದೇಶನಾಲಯದ (ED raid) ಅಧಿಕಾರಿಗಳು ಬೆಂಗಳೂರು (Bengaluru news) ಸೇರಿದಂತೆ ರಾಜ್ಯದ 9 ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ.

ಮುಡಾ ಸೈಟ್ ಅಕ್ರಮ ಪ್ರಕರಣ ಸಂಬಂಧ ಇಂದು ಇಡಿ ಅಧಿಕಾರಿಗಳು ಬೆಂಗಳೂರು ಸೇರಿದಂತೆ ರಾಜ್ಯದ 9 ಕಡೆ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದರು. ಇಡಿ ಅಧಿಕಾರಿಗಳು ಮುಂಜಾನೆಯೇ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಬಿಲ್ಡರ್ ಒಬ್ಬರ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಬೆಂಗಳೂರು, ಮೈಸೂರು ಸೇರಿದಂತೆ 9 ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಲವರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಲಾಗಿದ್ದು, ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಶಾಖೆಯಲ್ಲಿ ಕೋಟ್ಯಂತರ ನಗ- ನಗದು ಕಳವು

ದಾವಣಗೆರೆ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ನುಗ್ಗಿದ ಕಳ್ಳರ ಗುಂಪು ಬ್ಯಾಂಕ್ ನಲ್ಲಿದ್ದ ಹಣ, ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ದಾವಣಗೆರೆಯ ನ್ಯಾಮತಿ ಮುಖ್ಯರಸ್ತೆಯಲ್ಲಿ ನಡೆದಿದೆ.

ಕಳ್ಳರ ಗ್ಯಾಂಗ್ ಬ್ಯಾಂಕಿನ ಕಿಟಕಿ ಮುರಿದು ಒಳನುಗ್ಗಿದೆ. ಲಾಕರ್ ನಲ್ಲಿದ್ದ ಹಣ, ಚಿನ್ನಾಭರಣ ದರೋಡೆ ಮಾಡಿ ಪರಾರಿಯಾಗಿದ್ದಾರೆ. ಭಾನುವಾರ ತಡರಾತ್ರಿ ಈ ಘಟನೆ ನಡೆದಿದೆ. ಕೋಟ್ಯಂತರ ರೂಪಾಯಿ ಹಣ, ಚಿನ್ನಾಭರಣ ಕಳುವಾಗಿರುವ ಶಂಕೆ ವ್ಯಕ್ತವಾಗಿದ್ದು, ಘಟನಾ ಸ್ಥಳಕ್ಕೆ ಶ್ವಾನದಳ, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: MUDA scam: ಮುಡಾ ಕಚೇರಿಯಲ್ಲಿ ED ಶೋಧ ಅಂತ್ಯ: 2 ಬಾಕ್ಸ್‌ಗಳಲ್ಲಿ ದಾಖಲೆ ಹೊತ್ತೊಯ್ದ ಅಧಿಕಾರಿಗಳು