ಬೆಂಗಳೂರು: ಶೀಲ ಶಂಕಿಸಿ ಸುತ್ತಿಗೆಯಿಂದ ಬಡಿದು ಪತ್ನಿಯನ್ನೇ ಪತಿ ಬರ್ಬರವಾಗಿ ಹತ್ಯೆ (Murder Case) ಮಾಡಿರುವ ಘಟನೆ ಬೆಂಗಳೂರಿನ ಹೊರವಲಯದ ಅತ್ತಿಬೆಲೆ ಸಮೀಪದ ಶುಭ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ಬಿಹಾರ ಮೂಲದ ಮಲ್ಲಿಕಾ ಖಾತೂನ್ (35) ಕೊಲೆಯಾದ ಮಹಿಳೆ. ಮೊಹಮ್ಮದ್ ಸೈಯ್ಯದ್ ಕೊಲೆಗೈದ ಪತಿ.
ಪತ್ನಿಯ ಶೀಲ ಶಂಕಿಸಿ ಪತಿ ಮೊಹಮ್ಮದ್ ಸೈಯ್ಯದ್ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ.
ಪತಿ-ಪತ್ನಿ ನಡುವೆ ಆಗಾಗ ಜಗಳವಾಗುತ್ತಿತ್ತು ಎನ್ನಲಾಗಿದೆ. ಇವರಿಗೆ ಇಬ್ಬರು ಮಕ್ಕಳು ಇದ್ದಾರೆ. ಇಂದು ಬೆಳಗ್ಗೆ ಕೂಡ ಪತ್ನಿ ಶೀಲ ಶಂಕಿಸಿ ಪತಿ ಮೊಹಮ್ಮದ್ ಜಗಳ ಮಾಡಿದ್ದಾನೆ. ದಂಪತಿ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಈ ವೇಳೆ ಪತ್ನಿಯನ್ನು ಕೊಲೆಗೈದಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸುದ್ದಿಯನ್ನೂ ಓದಿ | Veer Bal Diwas: ಸಿಖ್ ವೀರರಿಗೆ ಅವಮಾನ… ಕೇರಳ ಶಾಲೆಯ ವಿರುದ್ಧ ಭುಗಿಲೆದ್ದ ಆಕ್ರೋಶ
ರೈಲಿಗೆ ಸಿಲುಕಿ 24 ಮೇಕೆಗಳ ದಾರುಣ ಸಾವು
ನೆಲಮಂಗಲ: ರೈಲಿಗೆ ಸಿಲುಕಿ 24 ಮೇಕೆಗಳು ದಾರುಣವಾಗಿ ಮೃತಪಟ್ಟಿರುವ ಘಟನೆ ನೆಲಮಂಗಲ ತಾಲೂಕಿನ (Nelamangala News) ಚಿಕ್ಕಮಾರನಹಳ್ಳಿ ಬಳಿ ನಡೆದಿದೆ. ಚಿಕ್ಕಮಾರನಹಳ್ಳಿ ಗ್ರಾಮದ ರೈತ ವೆಂಕಟಪ್ಪ ಅವರ 24 ಮೇಕೆಗಳು ಸಾವನ್ನಪ್ಪಿವೆ. ಶುಕ್ರವಾರ ಸಂಜೆ ರೈಲೊಂದು ಹಾಸನದಿಂದ ಬೆಂಗಳೂರಿಗೆ ಇದೇ ವೇಳೆ ಮಳೆ ಬಂದಿದ್ದಕ್ಕೆ ರೈಲು ಹಳಿಯ ಮೇಲೆ ಮೇಕೆಗಳ ದಂಡು ಓಡಿ ಹೋಗಿದೆ. ಈ ವೇಳೆ ರೈಲಿಗೆ ಸಿಲುಕಿ 4 ಲಕ್ಷ ರೂ. ಮೌಲ್ಯದ 24 ಮೇಕೆಗಳು ದಾರುಣವಾಗಿ ಸಾವನ್ನಪ್ಪಿವೆ. ಮೇಕೆಗಳ ಸಾವಿನಿಂದಾಗಿ ರೈತ ವೆಂಕಟಪ್ಪ ಕಂಗಾಲಾಗಿದ್ದಾರೆ.
ಈ ಸುದ್ದಿಯನ್ನೂ ಓದಿ | Geetha Shivarajkumar: ನೀಮೋ ಸದಾ ನಮ್ಮೊಳಗಿದ್ದಾನೆ; ಮುದ್ದಿನ ಶ್ವಾನವನ್ನು ನೆನೆದು ಗೀತಾ ಶಿವರಾಜ್‌ಕುಮಾರ್ ಭಾವುಕ ಪತ್ರ
ಆನ್‌ಲೈನ್ ಗೇಮ್ ಚಟಕ್ಕೆ ಯುವಕ ಬಲಿ; 83 ಸಾವಿರ ರೂ. ಕಳೆದುಕೊಂಡು ಆತ್ಮಹತ್ಯೆ
ಮಂಗಳೂರು: ಆನ್‌ಲೈನ್ ಗೇಮ್ ಚಟಕ್ಕೆ ಯುವಕನೊಬ್ಬ ಬಲಿಯಾಗಿರುವ ಘಟನೆ (Self Harming) ಮಂಗಳೂರಿನ ಮೂಡುಶೆಡ್ಡೆ ಗ್ರಾಮದಲ್ಲಿ ನಡೆದಿದೆ. 83 ಸಾವಿರ ರೂ. ಸಾಲ ಪಡೆದು ಆನ್‌ಲೈನ್ ಗೇಮ್ ಆಡಿ ಹಣ ಕಳೆದಕೊಂಡಿದ್ದ ಯುವಕ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೂಡುಶೆಡ್ಡೆ ನಿವಾಸಿ ಸೂರ್ಯ ಶೆಟ್ಟಿ (23) ಮೃತ ಯುವಕ. ಈತ ಆನ್‌ಲೈನ್ ಗೇಮ್ ಆಡುತ್ತಿದ್ದ. ಬುಧವಾರ ತನ್ನ ಗೆಳೆಯನಿಂದ 83 ಸಾವಿರ ರೂ. ಸಾಲ ಪಡೆದು ಆನ್‌ಲೈನ್ ಆಟವಾಡಿ ಹಣ ಕಳೆದುಕೊಂಡಿದ್ದ. ಇದರಿಂದ ಮತ್ತಷ್ಟು ಚಿಂತೆಗೊಳಗಾದ ಯುವಕ ಬುಧವಾರ ರಾತ್ರಿ ಮೊಬೈಲ್ ಮನೆಯಲ್ಲಿಯೇ ಇಟ್ಟು ಮರವೂರು ಸೇತುವೆ ಸಮೀಪ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ಧಾನೆ.
ಈತ ಮೇರಿಹಿಲ್‌ನಲ್ಲಿರುವ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದು, ಕೆಲ ಸಮಯದ ಹಿಂದೆ ಆ ಉದ್ಯೋಗ ಬಿಟ್ಟು ಬೇರೆಡೆ ಕೆಲಸ ಹುಡುಕುತ್ತಿದ್ದ. ಯುವಕ ಬಿಎಸ್ಸಿ ಪದವೀಧರನಾಗಿದ್ದು, ಪ್ರತಿಭಾನ್ವಿತನಾಗಿದ್ದ. ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿಯನ್ನೂ ಓದಿ | Viral News: ಬಿಲ್ ಪಾವತಿ ವಿಳಂಬ… ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆ ಸ್ಥಗಿತ!