Saturday, 11th January 2025

Namma Metro: ಊರಿನಿಂದ ಬರುವವರೇ ಗಮನಿಸಿ, ನಮ್ಮ ಮಟ್ರೋ ಬೆಳಗಿನ ಸಂಚಾರ ಸಮಯದಲ್ಲಿ ಬದಲಾವಣೆ

namma metro

ಬೆಂಗಳೂರು: ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಬಿಎಂಆರ್​ಸಿಎಲ್​ (BMRCL) ಹೊಸ ಅಪ್ಡೇಟ್ ನೀಡಿದೆ. ಬೆಂಗಳೂರು ನಗರದಿಂದ ವಾರಾಂತ್ಯದಲ್ಲಿ ಊರಿಗೆ ತೆರಳಿ ನಂತರ ಸೋಮವಾರ ನಗರಕ್ಕೆ (Bengaluru news) ಹಿಂದಿರುಗುವ ಪ್ರಯಾಣಿಕರ ಅನುಕೂಲಕ್ಕಾಗಿ ಮೆಟ್ರೋ ಸೇವೆ ಮುಂಜಾನೆ ಬೆಳಗ್ಗೆ 4.15ರಿಂದಲೇ ಆರಂಭವಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿ (ಬಿಎಂಆರ್‌ಸಿಎಲ್) ಪ್ರಕಟಣೆಯಲ್ಲಿ ತಿಳಿಸಿದೆ.

ಸೋಮವಾರ ಮುಂಜಾನೆ ಲಕ್ಷಾಂತರ ಸಂಖ್ಯೆಯಲ್ಲಿ ಉದ್ಯೋಗಿಗಳು ನಗರಕ್ಕೆ ಹಿಂದಿರುಗುತ್ತಾರೆ. ಸಿಟಿ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಕ್ಕೆ ಮುಂಜಾನೆ ಸಂಪರ್ಕವನ್ನು ಒದಗಿಸಬೇಕಿದೆ. ಈ ಹಿನ್ನೆಲೆಯಲ್ಲಿ, ನಮ್ಮ ಮೆಟ್ರೋ ಸಮಯದಲ್ಲಿ ಬದಲಾವಣೆಯಾಗಿದೆ. ಇನ್ನು ಮುಂದೆ ಸೋಮವಾರ ಮುಂಜಾನೆ ಬೇಗನೇ ಮೆಟ್ರೋ ಶುರುವಾಗುತ್ತದೆ. ಈ ಬದಲಾವಣೆ ಸೋಮವಾರ ಮಾತ್ರ. ಇತರ ದಿನಗಳಂದು ಇರುವುದಿಲ್ಲ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬಿಎಂಆರ್‌ಸಿಎಲ್ ಸಂಸ್ಥೆಯು ಬೆಂಗಳೂರು ನಗರದಿಂದ ವಾರಾಂತ್ಯದಲ್ಲಿ ಊರಿಗೆ ತೆರಳಿ ನಂತರ ಸೋಮವಾರ ನಗರಕ್ಕೆ ಹಿಂದಿರುಗುವ ಪ್ರಯಾಣಿಕರ ಅನುಕೂಲಕ್ಕಾಗಿ ಸಿಟಿ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಕ್ಕೆ ಮುಂಜಾನೆ ಸಂಪರ್ಕವನ್ನು ಒದಗಿಸಬೇಕಿದೆ. ಈ ಹಿನ್ನೆಲೆಯಲ್ಲಿ, ನಮ್ಮ ಮೆಟ್ರೋ ನಿಗಮವು ಪ್ರತಿ ಸೋಮವಾರ ಎಲ್ಲಾ ನಿಲ್ದಾಣಗಳಿಂದ ಮೆಟ್ರೋ ಸೇವೆಯನ್ನು 2025ರ ಜನವರಿ 13ರಿಂದ ಜಾರಿಗೆ ಬರುವಂತೆ ಬೆಳಗ್ಗೆ 4:15 ರಿಂದ ಪ್ರಾರಂಭಿಸಲಿದೆ ಎಂದಿದೆ.

ಈಗ ಮುಂಜಾನೆ 5:00 ಮೆಟ್ರೋ ಸೇವೆ ಆರಂಭವಾಗುತ್ತಿದ್ದು, ಅದನ್ನು ಸೋಮವಾರ ಮಾತ್ರ 45 ನಿಮಿಷ ಮುಂಚಿತವಾಗಿ ಆರಂಭಿಸಲಾಗುತ್ತಿದೆ. ಉಳಿದಂತೆ ವಾರದ ಉಳಿದ ಎಲ್ಲ ದಿನಗಳಂದು ಮೆಟ್ರೋ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಉಳಿದ ದಿನಗಳಲ್ಲಿ ಎಂದಿನಂತೆ ಬೆಳಗ್ಗೆ 5 ಗಂಟೆಗೆ ಮೆಟ್ರೋ ಸೇವೆ ಆರಂಭವಾಗಲಿದೆ.

ಪ್ರತಿ ಸೋಮವಾರ ಬೆಳಗ್ಗೆ ಬೆಂಗಳೂರು ನಗರಕ್ಕೆ ಬರುವ ಸಾರ್ವಜನಿಕರು 4.15ರಿಂದಲೇ ಮೆಟ್ರೋ ಸೇವೆಯನ್ನು ಪಡೆದುಕೊಳ್ಳಬಹುದು. ಮೆಟ್ರೋ ಮಾರ್ಗದ ನಾಲ್ಕು ಡಿಪೋಗಳಿಂದ ಬೆಳಗ್ಗೆಯೇ ಮೆಟ್ರೋ ಸೇವೆ ಆರಂಭವಾಗಲಿದೆ. ಸಾರ್ವಜನಿಕರು ತಮ್ಮ ಸುಗಮ ಪ್ರಯಾಣಕ್ಕಾಗಿ ಈ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಬಿಎಂಆರ್‌ಸಿಎಲ್ ಮನವಿ ಮಾಡಿದೆ. ಈ ಸಮಯ ಬದಲಾವಣೆಯಿಂದ ಪ್ರಯಾಣಿಕರಿಗೆ ಅನುಕೂಲ ಹಾಗೂ ಟ್ರಾಫಿಕ್ ದಟ್ಟಣೆ ಸಹ ಕಡಿಮೆಯಾಗಲಿದೆ.

Leave a Reply

Your email address will not be published. Required fields are marked *