Wednesday, 27th November 2024

ನಂದಿನಿ ಹಾಲಿನ ದರ ಶೀಘ್ರವೇ ಏರಿಕೆ ?

#nandini

ಬೆಂಗಳೂರು: ವಿದ್ಯುತ್ ದರ, ತೈಲ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ನಂದಿನಿ ಹಾಲಿನ ದರ ಶೀಘ್ರವೇ ಏರಿಕೆಯಾಗಲಿದೆ.

ರಾಜ್ಯದಲ್ಲಿ ಸದ್ಯದಲ್ಲೇ ನಂದಿನಿ ಹಾಲಿನ ದರ ಪ್ರತಿ ಲೀಟರ್ ಗೆ 5 ರೂ ಏರಿಕೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಹಾಲು ಒಕ್ಕೂಟಗಳು ಪ್ರಸ್ತಾವನೆ ಸಲ್ಲಿಸಿದೆ.

ಏ.10 ರಂದು ಈ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಭೇಟಿಯಾಗಿ ಚರ್ಚೆ ನಡೆಸಲಿವೆ. ರಾಜ್ಯ ಸರ್ಕಾರ ಕೆಎಂಎಫ್ ನಂದಿನ ಹಾಲಿನ ದರ ಏರಿಕೆ ಪ್ರಸ್ತಾವನೆಗೆ ಒಂದು ವೇಳೆ ಒಪ್ಪಿಗೆ ಸೂಚಿಸಿದರೆ, ಏ.10 ರ ನಂತರ ಹಾಲಿನ ದರ ಪರಿಷ್ಕರಣೆಯಾಗುವ ಸಾಧ್ಯತೆ ಇದೆ. ಈಗಾಗಲೇ ಕೆಎಂಎಫ್ ಹಾಲಿನ ದರ ಏರಿಕೆಗೆ ಕೆಎಂಎಫ್ ಅಸ್ತು ಎಂದಿದೆ.

ಹಾಲು ಒಕ್ಕೂಟಗಳಿಂದ ನಂದಿನ ಹಾಲಿನ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ವಿದ್ಯುತ್ ದರ ಏರಿಕೆಯಂತೆ ಹಾಲಿನ ದರ ಏರಿಕೆ ಮಾಡುವಂತೆ ಒತ್ತಾಯ ಮಾಡಲಾಗಿದೆ.