Friday, 22nd November 2024

Navaratri Dandiya 2024: ನವರಾತ್ರಿ ಸೆಲೆಬ್ರೇಷನ್‌‌‌ನಲ್ಲಿ ದಾಂಡಿಯಾ ಮೇನಿಯಾ

Navaratri Dandiya 2024

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ನವರಾತ್ರಿ ಸೆಲೆಬ್ರೇಷನ್‌ನಲ್ಲಿ (Navaratri Dandiya 2024) ಇದೀಗ ದಾಂಡಿಯಾ ನೈಟ್ಸ್ ಅಥವಾ ದಾಂಡಿಯಾ ಡಾನ್ಸ್ ಕಾರ್ಯಕ್ರಮಗಳು ಎಲ್ಲಾ ವರ್ಗದ ಡ್ಯಾನ್ಸ್ ಪ್ರಿಯ ಯುವಕ-ಯುವತಿಯರನ್ನು ಸೆಳೆಯುತ್ತಿವೆ. ನವರಾತ್ರಿಯಲ್ಲಿ ಎಲ್ಲಾ ಭಾಷಿಗರನ್ನು ಒಂದೂಗೂಡಿಸುವ ದಾಂಡಿಯಾ ಕಾರ್ಯಕ್ರಮಗಳು ಕಾಲಕಳೆದಂತೆ ಜನರೇಷನ್‌ಗೆ ತಕ್ಕಂತೆ ಬದಲಾಗುತ್ತಿವೆ . ಟ್ರೆಡಿಷನಲ್‌ (Traditional) ಆಗಿದ್ದ ಈ ಡಾನ್ಸ್ ನೈಟ್‌ನಂತಹ ಇವೆಂಟ್‌ಗಳು ಇದೀಗ ನೈಟ್‌ ಕ್ಲಬ್‌ಗಳಲ್ಲೂ ಪಬ್‌ಗಳಲ್ಲೂ ಕೂಡ ಸೇರಿಕೊಂಡಿವೆ. ಜೆನ್‌ ಜಿ ಜನರೇಷನ್‌ನ ಡಿಸ್ಕೊ ಸೆಂಟರ್‌ಗಳಿಗೂ ಎಂಟ್ರಿ ನೀಡಿವೆ.

ಚಿತ್ರಕೃಪೆ: ಪಿಕ್ಸೆಲ್‌ & ಇನ್ಸ್ಟಾಗ್ರಾಮ್‌

ವೈವಿಧ್ಯಮಯ ಥೀಮ್‌ನಲ್ಲಿ ದಾಂಡಿಯಾ ನೈಟ್ಸ್

ಇಂದು ದಾಂಡಿಯಾ ಕಾರ್ಯಕ್ರಮಗಳು ನಾನಾ ಶೈಲಿಯಲ್ಲಿ ಜನಪ್ರಿಯಗೊಳ್ಳುತ್ತಿವೆ. ಬಂಗಾಳ, ಗುಜಾರಾತ್‌, ರಾಜಸ್ಥಾನ, ದಿಲ್ಲಿ ಹೀಗೆ ಅಲ್ಲಿಯವರ ಟ್ರೆಡಿಷನ್‌ಗೆ ಹೊಂದುವಂತೆ ಮಾತ್ರವಲ್ಲ, ಈ ಜನರೇಷನ್‌ ಹೈಕಳಿಗೂ ಇಷ್ಟವಾಗುವಂತಹ ಕಂಟೆಂಪರರಿ ಡ್ಯಾನ್ಸ್ ಪ್ರಕಾರದಲ್ಲಿ, ಇಂಡೋ-ವೆಸ್ಟರ್ನ್‌ ಮಿಕ್ಸ್ ಡಿಜೆ ಮ್ಯೂಸಿಕ್‌ನಲ್ಲಿ, ಡ್ಯಾನ್ಸ್ ಬರದಿದ್ದವರೂ ಹೆಜ್ಜೆ ಹಾಕುವಂತಹ ಶೈಲಿಯಲ್ಲಿ ಡಿಫರೆಂಟ್‌ ಆಗಿ ಕಾರ್ಯಕ್ರಮಗಳು ನಡೆಯುತ್ತಿವೆ.

ಫ್ಯಾಮಿಲಿ/ ಯಂಗ್‌ಸ್ಟರ್ಸ್ ದಾಂಡಿಯಾ ಇವೆಂಟ್ಸ್

ಇಡೀ ಫ್ಯಾಮಿಲಿ ಸೇರಿ ಕುಣಿದು ಕುಪ್ಪಳಿಸುವ ಟ್ರೆಡಿಷನಲ್‌ ದಾಂಡಿಯಾ ಅಥವಾ ಗರ್ಬಾ ಡ್ಯಾನ್ಸ್ ಇವೆಂಟ್‌ಗಳು ಈಗಾಗಲೇ ಆರಂಭಗೊಂಡಿದ್ದು, ಮುಂಬರುವ ವೀಕೆಂಡ್‌ವರೆಗೂ ಮುಂದುವರೆಯಲಿವೆ. ಇನ್ನು, ಇ-ಜನರೇಷನ್‌ ಹುಡುಗ-ಹುಡುಗಿಯರಿಗೆ ಪ್ರಿಯವಾಗುವಂತಹ ದಾಂಡಿಯಾ ನೈಟ್ಸ್ ಇವೆಂಟ್‌ಗಳು ಕಂಟೆಂಪರರಿ ಸ್ಟೈಲ್‌ನಲ್ಲಿ ಆಯೋಜನೆಗೊಳ್ಳುತ್ತಿವೆ. ಇಲ್ಲಿ ಟ್ರೆಡಿಷನಲ್‌ಗಿಂತ ಡ್ಯಾನ್ಸ್‌ಗೆ ಪ್ರಾಮುಖ್ಯತೆ ನೀಡಲಾಗುತ್ತದೆ ಎನ್ನುತ್ತಾರೆ ಪ್ರತಿ ವರ್ಷ ದಾಂಡಿಯಾ ಆಯೋಜನೆ ಮಾಡುವ ರಾಜ್‌ ಶರ್ಮಾ.

ಉದ್ಯಾನನಗರಿಯಲ್ಲಿ ಎಲ್ಲೆಲ್ಲಿ ನಡೆಯುತ್ತವೆ ?

ಅರಮನೆ ಮೈದಾನದಲ್ಲಿ ಮಾತ್ರವಲ್ಲ, ರೆಸಾರ್ಟ್‌ಗಳಲ್ಲಿ, ಪಂಚತಾರಾ ಹೋಟೆಲ್‌ಗಳಲ್ಲಿ, ಡಿಸ್ಕೋಥೆಕ್‌ಗಳಲ್ಲಿ, ಪಬ್‌ಗಳಲ್ಲಿ, ಪ್ರತಿ ಅಪಾರ್ಟ್‌ಮೆಂಟ್‌ಗಳ ಕ್ಲಬ್‌ಗಳಲ್ಲಿ ಹಾಗೂ ಸಮುದಾಯಗಳ ಕ್ಲಬ್‌ಗಳಲ್ಲಿ ಆಯೋಜನೆಗೊಂಡಿವೆ. ನವರಾತ್ರಿಯ ವೀಕೆಂಡ್‌ನಲ್ಲಿ ಅಥವಾ ಯಾವುದಾದರೊಂದು ದಿನ ನಡೆಯುತ್ತವೆ ಎನ್ನುತ್ತಾರೆ ದಾಂಡಿಯಾ ಪ್ರೇಮಿಗಳಾದ ನತಾಶ ಹಾಗೂ ಕ್ಷಿತಿಜಾ.

ಯುವಕ-ಯುವತಿಯರಿಗೆ ಪ್ರಿಯವಾದ ಡಿಸ್ಕೊ ದಾಂಡಿಯಾ ನೈಟ್ಸ್‌

ಡಿಜೆ ಮ್ಯೂಸಿಕ್‌ನೊಂದಿಗೆ ನಡೆಯುವ ದಾಂಡಿಯಾ ನೈಟ್ಸ್ ಇತ್ತೀಚೆಗೆ ಯಂಗ್‌ಸ್ಟರ್ಸ್ ಸೆಳೆದಿವೆ. ಡಿಸ್ಕೊ ಮಿಕ್ಸ್‌ ಬಾಲಿವುಡ್‌ ಬೀಟ್‌ಗಳನ್ನು ಹಾಕಿ ದಾಂಡಿಯಾ ಆಡುವಂತಹ ಈ ಇವೆಂಟ್‌ಗಳು ಹೆಚ್ಚು ಪಾಪುಲರ್‌ ಆಗಿವೆ.

ದಾಂಡಿಯಾ ಆನ್‌ಲೈನ್‌ ಬುಕ್ಕಿಂಗ್‌

ಅಂತರ್ಜಾಲದಲ್ಲಿ ಹುಡುಕಿದರೇ ಸಾಕು, ಸಾಲು ಸಾಲಾಗಿ ದಾಂಡಿಯಾ ನೈಟ್ಸ್ ನಡೆಯುವ ಡಿಟೇಲ್ಸ್ ಕಾಣಸಿಗುತ್ತದೆ. ಡ್ರೆಸ್‌ಕೋಡ್‌, ಸಮಯ, ಸ್ಥಳ, ಶುಲ್ಕ, ಫುಡ್‌, ರೂಲ್ಸ್ ಎಲ್ಲವನ್ನೂ ತಿಳಿದುಕೊಂಡು ತೆರಳಬಹುದು.

ಈ ಸುದ್ದಿಯನ್ನೂ ಓದಿ | Navaratri Styling Tips: ನವರಾತ್ರಿ 7ನೇ ದಿನಕ್ಕೆ ರಾಯಲ್‌ ಬ್ಲ್ಯೂ ಕಲರ್‌ನಲ್ಲಿ ಕಾಣಿಸಿಕೊಳ್ಳಿ!

ದಾಂಡಿಯಾ ಪ್ರಿಯರ ಗಮನಕ್ಕೆ…

ಆದಷ್ಟೂ ಹೆಚ್ಚು ಜನರಿರುವ ಕಾರ್ಯಕ್ರಮಗಳನ್ನೇ ಪ್ರಿಫರ್‌ ಮಾಡಿ.
ದಾಂಡಿಯಾ ಡ್ರೆಸ್‌ಕೋಡ್‌ ಫಾಲೋ ಮಾಡಿ.
ದಾಂಡಿಯಾ ಡಾನ್ಸ್‌ ಬಗ್ಗೆಯೂ ಒಂದಿಷ್ಟು ತಿಳುವಳಿಕೆ ಇರಲಿ.
ಧರಿಸುವ ಡ್ರೆಸ್‌ಕೋಡ್‌ ಲೈಟ್‌ವೈಟ್‌ ಇರಲಿ, ಇಲ್ಲವಾದಲ್ಲಿ ಡ್ಯಾನ್ಸ್ ಮಾಡಲು ಕಷ್ಟವಾದೀತು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)