Thursday, 12th December 2024

Navaratri Styling Tips: ನವರಾತ್ರಿ 7ನೇ ದಿನಕ್ಕೆ ರಾಯಲ್‌ ಬ್ಲ್ಯೂ ಕಲರ್‌ನಲ್ಲಿ ಕಾಣಿಸಿಕೊಳ್ಳಿ!

Navaratri Styling Tips

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ನವರಾತ್ರಿಯ 7ನೇ ದಿನ ರಾಯಲ್‌ ನೀಲಿ ವರ್ಣಕ್ಕೆ ಆದ್ಯತೆ. ಈ ಬಣ್ಣದ ಎಥ್ನಿಕ್‌ವೇರ್ಸ್ (Ethnic Wears) ಹಾಗೂ ಸೀರೆಗಳು ಮಾನಿನಿಯರಿಗೆ ಅತ್ಯಾಕರ್ಷಕವಾಗಿ (Navaratri Styling Tips) ಕಾಣಿಸುತ್ತವೆ. ರಾಯಲ್‌ ಲುಕ್‌ ನೀಡುತ್ತವೆ. ದುಷ್ಟರ ದಮನ ಮಾಡುವ ದೇವಿ ಕಾಳರಾತ್ರಿಯನ್ನು ಪೂಜಿಸುವ ದಿನ ಇದಾಗಿದೆ. ಈ ಕಲರ್‌ನ ಸೀರೆಯಲ್ಲಿ ಆಕೆಯನ್ನು ಅಲಂಕರಿಸಿ ಆರಾಧಿಸುವುದು ಈ ದಿನದ ವಿಶೇಷ.

ರಾಯಲ್‌ ನೀಲಿ ಬಣ್ಣದಲ್ಲೂ ತಿಳಿ ಹಾಗೂ ಡಾರ್ಕ್‌ ಶೇಡ್‌ಗಳು ಲಭ್ಯ. ಗಾಢ ನೀಲಿ, ತಿಳಿ ನೀಲಿ ಹೀಗೆ ನಾನಾ ವರ್ಣಗಳು ಕಾಣ ಸಿಗುತ್ತವೆ. ಹಾಗಾಗಿ ಖರೀದಿಸುವಾಗ ಕೇಳಿ, ಬಣ್ಣವನ್ನು ಕಣ್ಣಿಂದ ನೋಡಿ ಆಯ್ಕೆ ಮಾಡುವುದು ಉತ್ತಮ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಚಿತ್ರಕೃಪೆ: ಪಿಕ್ಸೆಲ್‌

ರಾಯಲ್‌ ಬ್ಲ್ಯೂ ಲುಕ್‌ ಮ್ಯಾಜಿಕ್‌

ರಾಯಲ್‌ ಬ್ಲ್ಯೂ ಎಥ್ನಿಕ್‌ವೇರ್‌ಗಳು ಎಂತಹವರನ್ನು ಆಕರ್ಷಕವಾಗಿ ಬಿಂಬಿಸುತ್ತವೆ. ಆದರೆ, ಡಿಸೈನ್‌ ನೋಡಿ ಸೆಲೆಕ್ಟ್ ಮಾಡಬೇಕು ಎನ್ನುತ್ತಾರೆ ಸ್ಟೈಲಿಸ್ಟ್ ಚಂದನಾ. ಲೆಹೆಂಗಾ-ಚೋಲಿ, ಗಾಗ್ರಾ, ಶರಾರ, ಲಾಚಾ, ಅನಾರ್ಕಲಿ ಗೌನ್‌, ಚೂಡಿದಾರ್‌, ಸಲ್ವಾರ್‌, ದಾವಣಿ-ಲಂಗ, ಲಾಂಗ್‌ಸ್ಕರ್ಟ್, ಕುರ್ತಾ, ಅಂಬ್ರೆಲ್ಲಾ ಫ್ರಾಕ್‌ ಸೇರಿದಂತೆ ಲೆಕ್ಕವಿಲ್ಲದಷ್ಟು ಶೈಲಿಯವು ಈ ಕಲರ್‌ನಲ್ಲಿ ಲಭ್ಯ. ಬಾರ್ಡರ್‌, ಪ್ರಿಂಟ್ಸ್, ಎಂಬ್ರಾಯ್ಡರಿ, ಗೋಲ್ಡ್, ಸಿಲ್ವರ್‌ ಬಾರ್ಡರ್‌ನವು ಟ್ರೆಡಿಷನಲ್‌ ಲುಕ್‌ ನೀಡುತ್ತವೆ. ಈ ಬಣ್ಣದ ಡಿಸೈನರ್‌ವೇರ್‌ಗಳು ಸಿಂಪಲ್‌ ಲುಕ್ಕನ್ನು ಕೂಡ ಹೈಲೈಟ್‌ ಮಾಡುತ್ತವೆ ಎನ್ನುತ್ತಾರೆ ಫ್ಯಾಷನಿಸ್ಟಾ ಚಾಂದನಿ.

ಮನಸೆಳೆಯುವ ರಾಯಲ್‌ ಬ್ಲ್ಯೂ ಸೀರೆ

ರಾಯಲ್‌ ಬ್ಲ್ಯೂ ಸಾದಾ ಪ್ರಿಂಟ್‌ನ ಸೀರೆಗಳು ನಿಮ್ಮ ಅಂದವನ್ನು ಎತ್ತಿ ಹಿಡಿಯುತ್ತವೆ. ಮೈಸೂರ್ ಸಿಲ್ಕ್‌ ಸೀರೆ ಅಥವಾ ಯಾವುದೇ ರೇಷ್ಮೆ ಸೀರೆ ಉಟ್ಟಲ್ಲಿ, ಮುಡಿಗೆ ಮಲ್ಲಿಗೆ ಹೂವು ಮುಡಿಯಿರಿ. ನಿಮ್ಮ ಅಂದ ದುಪಟ್ಟಾಗುವುದು. ಇಂಡೋ-ವೆಸ್ಟರ್ನ್‌ ಸೀರೆ ಲುಕ್‌ಗಾದಲ್ಲಿ ಡಿಸೈನರ್‌ ಕ್ರಾಪ್‌ ಬ್ಲೌಸ್‌, ಸ್ಲಿವ್‌ಲೆಸ್‌ ಬ್ಲೌಸ್‌ ಧರಿಸಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಮೇಕಪ್‌ ಹೀಗಿರಲಿ

ಈ ಸೀರೆಯ ಕಲರ್‌ ಎದ್ದು ಕಾಣಿಸುವುದರಿಂದ ನಿಮ್ಮ ಮೇಕಪ್‌ ತಿಳಿಯಾಗಿರಲಿ. ಹಣೆಗೆ ಅಗಲವಾದ ನೀಲಿ ಬಿಂದಿ ಇಡಿ. ಇನ್ನು, ನೀವು ಶಿಫಾನ್, ಜಾರ್ಜೆಟ್‌ ಸೀರೆ ಉಡುವುದಾದಲ್ಲಿ ಆದಷ್ಟೂ ಸಿಂಪಲ್‌ ಹೇರ್‌ಸ್ಟೈಲ್‌ ಹಾಗೂ ಮ್ಯಾಚಿಂಗ್‌ ಇಯರಿಂಗ್ಸ್‌ ಧರಿಸಿ. ಗ್ರ್ಯಾಂಡ್‌ ರೇಷ್ಮೆ ಸೀರೆಯಾದಲ್ಲಿ ಅದಕ್ಕೆ ತಕ್ಕಂತೆ ಮೇಕಪ್‌ ಮಾಡಿ ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್ಸ್‌.

ಈ ಸುದ್ದಿಯನ್ನೂ ಓದಿ | Bigg Boss Kannada 11: ನವರಾತ್ರಿ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್ ಧರಿಸಿದ ಇಂಡೊ-ವೆಸ್ಟರ್ನ್ ಕುರ್ತಾ ಧೋತಿ ವಿಶೇಷತೆ ಏನು?

ಗೋಲ್ಡನ್‌ ಜ್ಯುವೆಲರಿ ಬದಲು ನೀಲಿ ಬಣ್ಣದ ಸ್ಟೇಟ್‌ಮೆಂಟ್‌ ಆಭರಣಗಳನ್ನು ಧರಿಸಿ.
ರಾಯಲ್‌ ನೀಲಿ ಸೀರೆಗೆ ಬನ್‌ ಹೇರ್‌ಸ್ಟೈಲ್‌ ಇಲ್ಲವೇ, ವೈವಿಧ್ಯಮಯ ಜಡೆ ಹೆಣೆಯಬಹುದು.
ಟ್ರೆಡಿಷನಲ್‌ ಲುಕ್‌ ನೀಲಿ ವರ್ಣದ ಡಿಸೈನರ್‌ವೇರ್‌ಗೆ ಚೆನ್ನಾಗಿ ಹೊಂದುತ್ತದೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)