-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನವರಾತ್ರಿಯ (Navaratri) 3ನೇ ದಿನದಂದು ಬೂದು ಬಣ್ಣದ ಉಡುಗೆಗಳಿಗೆ ಆದ್ಯತೆ ನೀಡಿ. ಈ ದಿನದಂದು ಮಾತೆ ಚಂದ್ರಘಂಟಾ, ಶುಭಾಂಕರಿ ಸೇರಿದಂತೆ ನಾನಾ ಹೆಸರಲ್ಲಿ ದೇವಿಯನ್ನು ಪೂಜಿಸಲಾಗುತ್ತದೆ. ಅಲ್ಲದೇ, ದೇವಿಗೆ ಪ್ರಿಯವಾದ ಬೂದು ಬಣ್ಣದ (Navaratri Colour Ideas) ಸೀರೆಯಿಂದ ಅಲಂಕರಿಸಲಾಗುತ್ತದೆ.
ಬೂದು ಬಣ್ಣದಲ್ಲೂ ಆಕರ್ಷಕವಾಗಿ ಕಾಣಿಸಿ
ಅಂದಹಾಗೆ, ಬೂದು ಬಣ್ಣದ ಸೀರೆ ಉಡುವವರು ಹಾಗೂ ಈ ಬಣ್ಣದ ಎಥ್ನಿಕ್ ಉಡುಪುಗಳನ್ನು ಧರಿಸುವವರು ತೀರಾ ಕಡಿಮೆ. ಇತರೆ ವರ್ಣಗಳಂತೆ ಈ ಕಲರ್‌ನಲ್ಲಿ ಹೆಚ್ಚು ಶೇಡ್‌ಗಳು ಲಭ್ಯವಿರುವುದಿಲ್ಲ. ಹಾಗಾಗಿ ಈ ಶೇಡ್‌ನಲ್ಲಿ ಅತ್ಯಾಕರ್ಷಕ ಔಟ್‌ಫಿಟ್‌ಗಳನ್ನು ಧರಿಸಿ ಸುಂದರವಾಗಿ ಕಾಣಿಸುವವರು ಕಡಿಮೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳಾದ ರಾಶಿ. ಅವರ ಪ್ರಕಾರ, ಬೂದು ಬಣ್ಣದ ಉಡುಪುಗಳನ್ನು ಧರಿಸುವಾಗ ಇದಕ್ಕೆ ಸೂಕ್ತ ಆಕ್ಸೆಸರೀಸ್ ಹಾಗೂ ಮೇಕಪ್ ಮಾಡಿದಾಗ ನೋಡಲು ಚೆನ್ನಾಗಿ ಕಾಣಿಸಲು ಸಾಧ್ಯವಂತೆ.
ಬೂದು ಬಣ್ಣದ ಸೀರೆಯ ಸ್ಟೈಲಿಂಗ್ ಹೀಗಿರಲಿ
ಬಾರ್ಡರ್ ಇರುವಂತಹ ಬೂದು ಬಣ್ಣದ ಸೀರೆಗೆ ವೈಟ್ ಅಥವಾ ಬ್ಲಾಕ್ ಮೆಟಲ್‌ನ ಜ್ಯುವೆಲರಿ ಸೆಟ್ ಮ್ಯಾಚ್ ಮಾಡಿ ನೋಡಿ. ಆಕ್ಸಿಡೈಸ್ಡ್ ನೆಕ್‌ಸೆಟ್, ಇಯರಿಂಗ್ಸ್, ಹಾರ, ಕಮರ್‌ಬಾಂದ್ ಮ್ಯಾಚ್ ಮಾಡಬಹುದು. ಬಾರ್ಡರ್ ಇಲ್ಲದ ಸೀರೆಗಾದಲ್ಲಿ, ಇಂಡೋ-ವೆಸ್ಟರ್ನ್ ಲುಕ್ ನೀಡಬಹುದು. ಸಿಲ್ವರ್ ಜ್ಯುವೆಲರಿ ಕೂಡ ಧರಿಸಬಹುದು. ಹಣೆಗೊಂದು ಬ್ಲ್ಯಾಕ್ ಬಿಂದಿ ಇಟ್ಟಲ್ಲಿ, ಆಕರ್ಷಕವಾಗಿ ಕಾಣಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಗ್ರೇ ಶೇಡ್‌ನ ಡಿಸೈನರ್‌ವೇರ್ಸ್
ಲೆಹೆಂಗಾ, ಗಾಗ್ರಗಳು ಬೂದು ಬಣ್ಣದಲ್ಲಿ ಬಿಡುಗಡೆಗೊಳ್ಳುವುದಿಲ್ಲ! ಕಾಣಿಸಿಕೊಂಡರೂ ಎದ್ದು ಕಾಣಿಸುವುದಿಲ್ಲ ಎಂಬ ಕಾರಣಕ್ಕೆ ಕೊಳ್ಳುವವರು ಕಡಿಮೆ. ಹಾಗಾಗಿ ಸಲ್ವಾರ್ ಕಮೀಝ್ ಅಥವಾ ಕುರ್ತಾ ಆಯ್ಕೆ ಮಾಡಿಕೊಳ್ಳಬಹುದು. ನಿಮ್ಮ ಬಳಿ ಈ ಕಲರ್‌ನ ಡ್ರೆಸ್ ಇದ್ದಲ್ಲಿ, ಅದಕ್ಕೆ ಹೊಸ ಕೊಂಚ ಸ್ಟೈಲಿಂಗ್ ಬದಲಿಸಿ, ಧರಿಸಬಹುದು. ಲುಕ್ ಬದಲಾಗುತ್ತದೆ.
ಐ ಮೇಕಪ್ ಅಂದ-ಚೆಂದ
ಈ ಕಲರ್‌ನ ಉಡುಗೆಗೆ ಮೇಕಪ್ ತಿಳಿಯಾಗಿರಬೇಕು. ಕಣ್ಣಿಗೆ ಕಾಡಿಗೆ, ರೆಪ್ಪೆಗೆ ಮಸ್ಕರಾ, ಬ್ಲ್ಯಾಕ್ ಐ ಲೈನರ್, ಹೆಚ್ಚಿಲ್ಲದ ಸ್ಮೋಕಿ ಐ ಶೆಡ್ ಲುಕ್ ಮಾಡಬಹುದು.
ಈ ಸುದ್ದಿಯನ್ನೂ ಓದಿ | Dasara Gombe Habba 2024: ಮಾರುಕಟ್ಟೆಯಲ್ಲಿ ದಸರಾ ಗೊಂಬೆಗಳ ಕಲರವ!
ಗ್ರೇ ಕಲರ್‌ನಲ್ಲಿ ಪರ್ಫೆಕ್ಟ್ ಲುಕ್ ಪಡೆಯಲು 5 ಸಿಂಪಲ್ ಟಿಪ್ಸ್
ಸೀರೆ ಉಟ್ಟಾಗ ಬ್ಲ್ಯಾಕ್ ಕಲರ್‌ನ ಆಕ್ಸೆಸರೀಸ್ ಧರಿಸಿ.
ಇಂಡೋ-ವೆಸ್ಟರ್ನ್ ಲುಕ್ ಪ್ರಯೋಗ ಮಾಡಿ.
ಅತ್ಯಾಕರ್ಷಕ ಐ ಮೇಕಪ್‌ಗೆ ಆದ್ಯತೆ ನೀಡಿ.
ಮರೆಯದೇ ಅಗಲವಾದ ಬ್ಲ್ಯಾಕ್ ಬಿಂದಿ ಹಣೆಗಿಡಿ.
ಮ್ಯಾಚಿಂಗ್ ಸೆಟ್ ಬಳೆಗಳನ್ನು ಧರಿಸಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)