*ಸಂತಾನಹರಣ ಚಿಕಿತ್ಸೆ ವೇಳೆ ಮೃತಪಟ್ಟಿದ್ದ ಗೀತಾ
*ಬಾಣಂತಿ ಪ್ರಾಣದ ಜತೆ ಸರ್ಜನ್ ಚೆಲ್ಲಾಟ
*ಡಾಕ್ಟರ್ ವಿರುದ್ದ ಭುಗಿಲೆದ್ದಿದೆ ಆಕ್ರೋಶ
ಕಾರವಾರ: ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯ ನಿರ್ಲಕ್ಷ್ಯಕ್ಕೆ ಬಾಣಂತಿ ಮೃತಪಟ್ಟಿದ್ದಾರೆ.
ಆಪರೇಷನ್‌ಗೆ ಮುನ್ನ ಅನಸ್ತೇಷಿಯಾ ನೀಡಿದ ವೇಳೆ ಗೀತಾ ಅಸ್ವಸ್ಥಗೊಂಡಿದ್ದು, ಆಪರೇಷನ್ ವೇಳೆ ಹೃದಯಾಘಾತದಿಂದ ಗೀತಾ ಸಾವು ಎಂದು ಘೋಷಣೆ ಮಾಡಲಾಗಿದೆ. ಸೆ.3ರಂದು ಈ ಘಟನೆ ಸಂಭವಿಸಿದೆ.
28 ವರ್ಷದ ಗೀತಾ ಶಿವನಾಥ್ ಬಾಲಾವಣಳಿಕರ್ ಮೃತಪಟ್ಟವರು. ವೈದ್ಯರ ನಿರ್ಲಕ್ಷ್ಯದಿಂದಲೇ ಬಾಣಂತಿ ಗೀತಾ ಸಾವು ಎಂದು ಪೋಷಕರ ಆರೋಪಿಸಿದ್ದು, ಡಾ.ಶಿವಾನಂದ ಕುಡ್ತಳ್ಕರ್ ವಿರುದ್ದ ಪೋಷಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೀತಾ ಸಾವಿನ ಸುದ್ದಿ ಕೇಳುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಆಸ್ಪತ್ರೆ ಎದುರು ಗೀತಾ ಕುಟುಂಬಸ್ಥರು, ಮೀನುಗಾರರ ಭಾರೀ ಪ್ರತಿಭಟನೆಯಲ್ಲಿ ತೊಡಗಿದ್ದು, ವೈದ್ಯಾಧಿಕಾರಿ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ.