ನೆಲಮಂಗಲ: ರೈಲಿಗೆ ಸಿಲುಕಿ 24 ಮೇಕೆಗಳು ದಾರುಣವಾಗಿ ಮೃತಪಟ್ಟಿರುವ ಘಟನೆ ನೆಲಮಂಗಲ ತಾಲೂಕಿನ (Nelamangala News) ಚಿಕ್ಕಮಾರನಹಳ್ಳಿ ಬಳಿ ನಡೆದಿದೆ. ಚಿಕ್ಕಮಾರನಹಳ್ಳಿ ಗ್ರಾಮದ ರೈತ ವೆಂಕಟಪ್ಪ ಅವರ 24 ಮೇಕೆಗಳು ಸಾವನ್ನಪ್ಪಿವೆ. ಶುಕ್ರವಾರ ಸಂಜೆ ರೈಲೊಂದು ಹಾಸನದಿಂದ ಬೆಂಗಳೂರಿಗೆ ಇದೇ ವೇಳೆ ಮಳೆ ಬಂದಿದ್ದಕ್ಕೆ ರೈಲು ಹಳಿಯ ಮೇಲೆ ಮೇಕೆಗಳ ದಂಡು ಓಡಿ ಹೋಗಿದೆ. ಈ ವೇಳೆ ರೈಲಿಗೆ ಸಿಲುಕಿ 4 ಲಕ್ಷ ರೂ. ಮೌಲ್ಯದ 24 ಮೇಕೆಗಳು ದಾರುಣವಾಗಿ ಸಾವನ್ನಪ್ಪಿವೆ. ಮೇಕೆಗಳ ಸಾವಿನಿಂದಾಗಿ ರೈತ ವೆಂಕಟಪ್ಪ ಕಂಗಾಲಾಗಿದ್ದಾರೆ.
ಈ ಸುದ್ದಿಯನ್ನೂ ಓದಿ | Geetha Shivarajkumar: ನೀಮೋ ಸದಾ ನಮ್ಮೊಳಗಿದ್ದಾನೆ; ಮುದ್ದಿನ ಶ್ವಾನವನ್ನು ನೆನೆದು ಗೀತಾ ಶಿವರಾಜ್‌ಕುಮಾರ್ ಭಾವುಕ ಪತ್ರ
ಖಾಸಗಿ ಬಸ್ ಅಪಘಾತ, ಚಾಲಕ ಸಾವು, ನಾಲ್ವರು ಗಂಭೀರ
ತುಮಕೂರು: ಜಿಲ್ಲೆಯಲ್ಲಿ (Tumkur news) ಖಾಸಗಿ ಬಸ್ ಅಪಘಾತಕ್ಕೀಡಾಗಿ (Road Accident) ಚಾಲಕ ಮೃತಪಟ್ಟು (driver death) ನಾಲ್ವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್ಸು ಸ್ವಾಗತ ನಾಮಫಲಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.
ತುಮಕೂರಿನ ರಾಷ್ಟ್ರೀಯ ಹೆದ್ದಾರಿ 75ರ ತಾಲ್ಲೂಕಿನ ಅಂಚೆಪಾಳ್ಯದಲ್ಲಿ ಇಂದು ಬೆಳಗಿನ ಜಾವ ರಸ್ತೆಯಲ್ಲಿನ ಸ್ವಾಗತ ನಾಮಫಲಕಕ್ಕೆ ಬಸ್ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಮಂಗಳೂರಿನ ಬಿಸಿ ರೋಡ್ ನಿವಾಸಿ ಚಾಲಕ ಮೊಹಮ್ಮದ್ ಇಬ್ರಾಹಿಂ(40) ಎಂಬವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಖಾಸಗಿ ಬಸ್ ಉಡುಪಿಯ ಸುಭಾಷ್ ನಗರದಿಂದ ಬೆಂಗಳೂರಿಗೆ ತೆರಳುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ನಾಲ್ವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದರೆ, ಇನ್ನೂ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿರುವುದಾಗಿ ತಿಳಿದು ಬಂದಿದೆ.
ಲಾರಿಗಳ ಡಿಕ್ಕಿ, ಸುಟ್ಟು ಕರಕಲು, ಚಾಲಕನಿಗೆ ಗಂಭೀರ ಗಾಯ
ಚಿಕ್ಕಬಳ್ಳಾಪುರ: ಎರಡು ಲಾರಿಗಳ ನಡುವೆ ಡಿಕ್ಕಿ ಉಂಟಾಗಿದ್ದು, ಇದರಿಂದ ಸೃಷ್ಟಿಯಾದ ಬೆಂಕಿಯಿಂದಾಗಿ ಲಾರಿಗಳು ಸುಟ್ಟು ಕರಕಲಾಗಿರುವ ಘಟನೆ ಚಿಕ್ಕಬಳ್ಳಾಪುರದ ಬಳಿ ನಡೆದಿದೆ. ಚಿಕ್ಕಬಳ್ಳಾಪುರ (Chikkaballapur news) ತಾಲ್ಲೂಕಿನ ಹುನೇಗಲ್ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಭೀಕರ ಅಪಘಾತ ಸಂಭವಿಸಿದೆ.
ಸಿಎನ್ ಜಿ ಸಿಲಿಂಡರ್ ತುಂಬಿದ್ದ ಲಾರಿಯೊಂದು ತಿರುವು ತೆಗೆದುಕೊಳ್ಳುತ್ತಿದ್ದಾಗ ಹಿಂಬದಿಯಿಂದ ಕಲ್ಲು ತುಂಬಿದ್ದ ಲಾರಿ ವೇಗವಾಗಿ ಬಂದು ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿತು. ಈ ಅಪಘಾತದಿಂದ ಸಿಎನ್ ಜಿ ಸಿಲಿಂಡರ್ ತುಂಬಿದ್ದ ಲಾರಿಗೆ ಬೆಂಕಿ ತಗುಲಿದೆ. ಬೆಂಕಿಯಿಂದಾಗಿ ಲಾರಿ ಸುಟ್ಟು ಕರಕಲಾಗಿದ್ದು, ಲಾರಿ ಚಾಲಕ ಬೆಂಕಿಯಲ್ಲಿ ಸುಟ್ಟು ಗಂಭೀರವಾಗಿ ಗಾಯಗೊಂಡಿದ್ದಾನೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಗಾಯಾಳು ಲಾರಿ ಚಾಲಕನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇದನ್ನೂ ಓದಿ: Boat Capsized: ಮುಂಬೈ ಬೋಟ್ ದುರಂತ; ಮೃತರ ಸಂಖ್ಯೆ 13ಕ್ಕೆ ಏರಿಕೆ: ಅಪಘಾತದ ವಿಡಿಯೊ ವೈರಲ್