Wednesday, 8th January 2025

New Year Celebration: ಸಿಹಿ ಸುದ್ದಿ, ನಾಳೆ ರಾತ್ರಿ 2ರವರೆಗೆ ಬಿಎಂಟಿಸಿ ಬಸ್ ಓಡಾಟ, ಮೆಟ್ರೋ ಕೂಡ ಇದೆ

Bengaluru News

ಬೆಂಗಳೂರು: ಹೊಸ ವರ್ಷಾಚರಣೆ (New Year Celebration) ಪ್ರಯುಕ್ತ ಡಿಸೆಂಬರ್ 31ರಂದು ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ (Bengaluru news) ತಡರಾತ್ರಿ 2ರವರೆಗೆ ಹೆಚ್ಚುವರಿಯಾಗಿ ಬಿಎಂಟಿಸಿ ಬಸ್ (BMTC bus) ಸಂಚಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಈ ಬಗ್ಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ದಿನಾಂಕ: 31.12.2024 ರಂದು ಹೊಸ ವರ್ಷಾಚರಣೆಯಲ್ಲಿ ಭಾಗವಹಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಎಂ.ಜಿ.ರಸ್ತೆಯಿಂದ ನಗರದ ವಿವಿಧ ಭಾಗಗಳಿಗೆ ಹೆಚ್ಚಿನ ಸಾರಿಗೆ ಸೌಲಭ್ಯ ಒದಗಿಸುವ ದೃಷ್ಟಿಯಿಂದ ರಾತ್ರಿ 11:00 ಗಂಟೆಯ ನಂತರ ತಡರಾತ್ರಿ 02:00 ಗಂಟೆಯವರೆಗೆ ಪ್ರಯಾಣಿಕರ ಸಂಚಾರದ ಒತ್ತಡಕ್ಕನುಗುಣವಾಗಿ ಕೆಳಕಂಡ ಮಾರ್ಗಗಳಲ್ಲಿ ಹೆಚ್ಚುವರಿ ಸಾರಿಗೆಗಳನ್ನು ಕಾರ್ಯಾಚರಣೆಗೊಳಿಸಲು ಕ್ರಮ ವಹಿಸಲಾಗಿದೆ ಎಂದಿದೆ.

ಈ ಕೆಳಕಂಡ ಮಾರ್ಗದಲ್ಲಿ ಹೆಚ್ಚುವರಿ ಬಿಎಂಟಿಸಿ ಬಸ್ ಸಂಚಾರ:

1 G-3 ಬ್ರಿಗೇಡ್ ರಸ್ತೆ ಎಲೆಕ್ಟ್ರಾನಿಕ್ಸ್ ಸಿಟಿ
2 G-4 ಜಿಗಣಿ
3 G-2 ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣ ಸರ್ಜಾಪುರ
4 G-6 ಕೆಂಗೇರಿ ಕೆ.ಹೆಚ್.ಬಿ. ಕ್ವಾರ್ಟ್ರ್ಸ್
5 G-7 ಜನಪ್ರಿಯ ಟೌನ್ ಶಿಪ್
6 G-8 ನೆಲಮಂಗಲ
7 G-9 ಯಲಹಂಕ ಉಪನಗರ 5ನೇ ಹಂತ
8 G-10 ಯಲಹಂಕ
9 G-11 ಬಾಗಲೂರು
10 317-G ಹೊಸಕೋಟೆ
11 SBS-13K ಚನ್ನಸಂದ್ರ
12 SBS-1K ಕಾಡುಗೋಡಿ
13 13 ಬನಶಂಕರಿ

ಅಲ್ಲದೆ, ಜನದಟ್ಟಣೆ ಇರುವ ಪ್ರಮುಖ ಬಸ್ ನಿಲ್ದಾಣ/ಜಂಕ್ಷನ್‌ಗಳಾದ ಕೆಂಪೇಗೌಡ ಬಸ್ ನಿಲ್ದಾಣ, ಕೃ.ರಾ.ಮಾರುಕಟ್ಟೆ, ಶಿವಾಜಿನಗರ, ಕೋರಮಂಗಲ, ಕಾಡುಗೋಡಿ, ಕೆಂಗೇರಿ, ಸುಮನಹಳ್ಳಿ, ಗೊರಗುಂಟೆಪಾಳ್ಯ, ಯಶವಂತಪುರ, ಯಲಹಂಕ, ಶಾಂತಿನಗರ, ಬನಶಂಕರಿ, ಹೆಬ್ಬಾಳ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್‌ಗಳಿಂದ ಪ್ರಯಾಣಿಕರ ದಟ್ಟಣೆ/ಬೇಡಿಕೆಗನುಗುಣವಾಗಿ ಸಾರಿಗೆ ಸೌಲಭ್ಯವನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದೆ.

ನಮ್ಮ ಮೆಟ್ರೋ ಕೂಡ ಹೆಚ್ಚುವರಿ ಸಂಚಾರ

ಬಿಎಂಆರ್‌ಸಿಎಲ್ (BMRCL) ಡಿಸೆಂಬರ್ 31ರಂದು ತಡರಾತ್ರಿ 2.40ರವರೆಗೆ ನಮ್ಮ ಮೆಟ್ರೋ (Namma Metro) ರೈಲು ಸಂಚಾರವನ್ನು ವಿಸ್ತರಿಸಿದೆ. ಈ ಕುರಿತಂತೆ ಮೆಟ್ರೋ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಹೊಸ ವರ್ಷದ ಸಂಭ್ರಮಾಚರಣೆಯ ಹಿನ್ನಲೆಯಲ್ಲಿ ನಮ್ಮ ಮೆಟ್ರೋ ರೈಲು ಸಂಚಾರದ ಅವಧಿಯನ್ನು ಜನವರಿ.1ರ ಮುಂಜಾನೆ 2.40ರವರೆಗೆ ವಿಸ್ತರಿಸಲಾಗಿದೆ. ಎಲ್ಲಾ ಟರ್ಮಿನಲ್‌ಗಳಿಂದ ಮಧ್ಯರಾತ್ರಿ 2 ಗಂಟೆಗೆ ಹಾಗೂ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಿಂದ 2.40ಕ್ಕೆ ಕೊನೆಯ ರೈಲು ಸಂಚರಿಸಲಿದೆ ಎಂದು ತಿಳಿಸಿದೆ.

ಡಿಸೆಂಬರ್ 31ರಂದು ರಾತ್ರಿ 11 ಗಂಟೆಯಿಂದ ಪ್ರತಿ 10 ನಿಮಿಷಕ್ಕೊಂದು ಮೆಟ್ರೋ ರೈಲು ಸಂಚರಿಸಲಿವೆ. ಹೊಸ ವರ್ಷಾಚರಣೆಗಾಗಿ ಎಂಜಿ ರಸ್ತೆಗೆ ಬರುವವರ ಸಂಖ್ಯೆ ಹೆಚ್ಚಾಗುವ ಕಾರಣ ರಾತ್ರಿ 11 ಗಂಟೆಗೆ ಎಂಜಿ ರಸ್ತೆ ಮೆಟ್ರೋ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಲಾಗುತ್ತದೆ. ಅದರ ಬದಲು ಟ್ರಿನಿಟಿ ವೃತ್ತ ಮತ್ತು ಕಬ್ಬನ್ ಉದ್ಯಾನದ ಮೆಟ್ರೋ ನಿಲ್ದಾಣಗಳಲ್ಲಿ ರೈಲು ಹತ್ತಬಹುದು ಎಂದು ಹೇಳಿದೆ.

ಇದನ್ನೂ ಓದಿ: Namma Metro: ಹೊಸ ವರ್ಷದ ಸಂಭ್ರಮಕ್ಕೆ ನಮ್ಮ ಮೆಟ್ರೋ ಸಾಥ್;‌ ಡಿ.31ರಂದು ರಾತ್ರಿ 2.40ರವರೆಗೂ ರೈಲು