Monday, 6th January 2025

New Year Celebration: ಹೊಸ ವರ್ಷಾಚರಣೆಗೆ ‌ಹೋಗುವವರಿಗೆ ನಂದಿಬೆಟ್ಟ ಬಂದ್!

Nandi-Hills

ಚಿಕ್ಕಬಳ್ಳಾಪುರ: ಹೊಸ ವರ್ಷಾಚರಣೆಗೆ (New Year Celebration) ನಂದಿಬೆಟ್ಟಕ್ಕೆ (Nadi Hills) ಹೋಗುವವರಿಗೆ ರಾಜ್ಯ ಸರ್ಕಾರ ಶಾಕ್ ಕೊಟ್ಟಿದ್ದು, ಡಿಸೆಂಬರ್ 31ರ ಸಂಜೆ 6 ಗಂಟೆಯಿಂದ ಜನವರಿ 1ರ ಬೆಳಗ್ಗೆ 7 ಗಂಟೆಯವರೆಗೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ನಂದಿ ಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಸಂಪೂರ್ಣ ನಿಷೇಧ ಹೇರಿ ಆದೇಶ ಹೊರಡಿಸಿದೆ. ಡಿಸೆಂಬರ್ 31 ಸಂಜೆ 6 ಗಂಟೆಯಿಂದ 2025 ಜನವರಿ1ರಂದು ಬೆಳಿಗ್ಗೆ 7 ಗಂಟೆವರೆಗೂ ಸಾರ್ವಜನಿಕ ಪ್ರವೇಶ ನಿರ್ಬಂಧಿಸಿದ್ದು, ಜೊತೆಗೆ ಅತಿಥಿ ಗೃಹಗಳಿಗೆ ಪ್ರವೇಶ ಕೂಡ ನಿರ್ಬಂಧಿಸಿದೆ.

ಇದೀಗ ರಾಜಧಾನಿಯ ಜನ ಹೊಸ ವರ್ಷಕ್ಕೆ ಹೊರಗೆ ಹೋಗುವುದಕ್ಕೆ ಪ್ಲ್ಯಾನ್‌ ಮಾಡುತ್ತಿದ್ದಾರೆ. ಅದರಲ್ಲೂ ಹೆಚ್ಚಾಗಿ ನಂದಿಬೆಟ್ಟದ ಕಡೆ ಹೋಗಿ ರಾತ್ರಿ ಸಮಯ ಕಳೆಯುವುದಕ್ಕೆ ಹಾಗೂ ಹೊಸ ವರ್ಷದ ಮುಂಜಾನೆಯ ಸೂರ್ಯೋದಯವನ್ನು ಅಲ್ಲಿಂದ ನೋಡುವುದಕ್ಕೆ ಬಯಸುತ್ತಾರೆ. ಮುಂಜಾನೆ ಕೂಡ ಇಲ್ಲಿ ಸೂರ್ಯೋದಯ ವೀಕ್ಷಣೆಗೆ ಸಿಕ್ಕಾಪಟ್ಟೆ ಯುವಜನ ಮುಕುರುತ್ತಾರೆ. ಇದರಿಂದ ಇಲ್ಲಿ ಟ್ರಾಫಿಕ್‌ ಜಾಮ್‌ ಕೂಡ ಆಗುತ್ತಿದೆ.

ಆದರೆ ಈ ಬಾರಿ ಇಲ್ಲಿ ಅಂಥ ಯಾವುದೇ ಹೊಸ ವರ್ಷಾಚರಣೆಗೆ ನಂದಿಬೆಟ್ಟದಲ್ಲಿ ನಿರ್ಬಂಧ ಹೇರಲಾಗಿದೆ.ಡಿ.31 ಸಂಜೆ 6 ಗಂಟೆಯಿಂದ ಜ.1 ಬೆಳಿಗ್ಗೆ7 ಗಂಟೆವರೆಗೂ ನಿರ್ಬಂಧ ವಿಧಿಸಲಾಗಿದೆ. ಸಾರ್ವಜನಿಕರ ಪ್ರವೇಶ ಹಾಗೂ ಸಂಭ್ರಮಾಚರಣೆಗೆ ನಿರ್ಬಂಧ ವಿಧಿಸುವುದಾಗಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: KSRTC News: ಡಿ.31ರಂದು ಬಸ್‌ ಎಂದಿನಂತೆ; ರಾಜ್ಯ ಸಾರಿಗೆ ನೌಕರರ ಮುಷ್ಕರ ಮುಂದೂಡಿಕೆ