-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನ್ಯೂ ಇಯರ್ ಸೀಸನ್‌ನಲ್ಲಿ (New Year Mens Partywear 2024) ನಡೆಯುವ ಪಾರ್ಟಿಯಲ್ಲಿ, ಆಯಾ ಸಂದರ್ಭಕ್ಕೆ ಹಾಗೂ ಥೀಮ್‌ಗೆ ತಕ್ಕಂತೆ ಯುವಕರು ಮೆನ್ಸ್ ವೇರ್ ಧರಿಸಬಹುದು. ಅದಕ್ಕಾಗಿ ಒಂದಿಷ್ಟು ಡ್ರೆಸ್ ಸೆನ್ಸ್ ಇರುವುದು ಅಗತ್ಯ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಆಯಾ ಪಾರ್ಟಿಗೆ ತಕ್ಕಂತಿರಲಿ ಲುಕ್
ಮೆನ್ಸ್ ಸ್ಟೈಲಿಸ್ಟ್ ಜಾನ್ ಪ್ರಕಾರ, ಯುವಕರು ಹಾಗೂ ಪುರುಷರು ಅಟೆಂಡ್ ಮಾಡುವ ಪಾರ್ಟಿಗಳಲ್ಲಿ ಅದು ಆಫೀಸ್ ಪಾರ್ಟಿಯಾಗಬಹುದು, ಡಿಸ್ಕೋ ಪಾರ್ಟಿಯಾಗಬಹುದು, ಬೀಚ್ ಪಾರ್ಟಿಯಾಗಬಹುದು, ಫಾರ್ಮಲ್ ಆಫೀಸ್ ಗೆಟ್ ಟುಗೆದರ್ ಆಗಬಹುದು, ಇಲ್ಲವೇ, ಫ್ಯಾಮಿಲಿ ಪಾರ್ಟಿಯಾಗಬಹುದು ಎಲ್ಲೆಡೆ ಆಯಾ ಪಾರ್ಟಿಗೆ ತಕ್ಕಂತೆ, ಲವಲವಿಕೆಯಾಗಿ ಕಾಣುವುದು ಮಸ್ಟ್. ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ಇನ್ನು, ನ್ಯೂ ಯಿಯರ್ ಸೀಸನ್‌ನಲ್ಲಿ ಹತ್ತಾರು ಪಾರ್ಟಿಗಳು ನಡೆಯುತ್ತವೆ. ಕೆಲವೊಮ್ಮೆ ನೀವು ಯಾವ ಪಾರ್ಟಿಗೆ ಹಠಾತ್ತನೆ ರೆಡಿಯಾಗಬೇಕಾಗಬಹುದು ಎಂಬುದು ನಿಮಗೇ ಗೊತ್ತಿರುವುದಿಲ್ಲ. ಹಾಗಾಗಿ ಯಾವ ಸಂದರ್ಭದಲ್ಲಿ, ಯಾವ ತಕ್ಷಣಕ್ಕೆ ಯಾವ ಬಗೆಯ ಲುಕ್‌ನಲ್ಲಿ ಕಾಣಿಸಬಹುದು ಹಾಗೂ ಹ್ಯಾಂಡ್ಸಮ್ ಆಗಿ ಕಾಣಿಸಬಹುದು ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು, ಪವರ್ ಫಾರ್ಮಲ್ಸ್, ಸೆಮಿ ಫಾರ್ಮಲ್ಸ್, ಫನ್ ಕ್ಯಾಷ್ಯುಯಲ್ಸ್, ಫಂಕಿ ಲುಕ್ಸ್ ಬಗ್ಗೆ ಒಂದಿಷ್ಟು ವಿವರ ನೀಡಿದ್ದಾರೆ. ಫಾಲೋ ಮಾಡಲು ಟ್ರೈ ಮಾಡಿ.
ಲುಕ್-1
ಪವರ್ ಫಾರ್ಮಲ್ಸ್
ಕಚೇರಿಯ ಪಾರ್ಟಿಯಾಗಿದ್ದಲ್ಲಿ ಅಥವಾ ನೀವು ಹೋಗುವ ಪಾರ್ಟಿಯಲ್ಲಿ ನಿಮ್ಮ ಬಾಸ್ ಅಥವಾ ಪ್ರಮುಖ ವ್ಯಕ್ತಿಗಳು ಅಥವಾ ಗಣ್ಯರು, ಭಾಗವಹಿಸುತ್ತಿದ್ದಲ್ಲಿ, ನಿಮ್ಮ ಡ್ರೆಸ್‌ಕೋಡ್ ನೀಟಾಗಿರಲಿ, ಕುಂದಿಲ್ಲದ ರೀತಿಯಲ್ಲಿರಲಿ. ನಿಮ್ಮ ಉಡುಪು ನಿಮ್ಮ ನಡೆ ನುಡಿ, ಭಾವ ಭಂಗಿ ಎಲ್ಲವೂ ಪರ್ಫೆಕ್ಟ್ ಆಗಿರಲಿ. ಅಗತ್ಯಬಿದ್ದರೆ ಡಾನ್ಸ್ ಹಾಗೂ ಗೇಮ್‌ನಲ್ಲಿ ಭಾಗವಹಿಸಲು ಕೂಡ ರೆಡಿ ಎನ್ನುವ ಹಾಗಿರಲಿ. ಈ ಲುಕ್‌ಗಾಗಿ ಅಲ್ಲಿನ ಥೀಮ್ ಹಾಗೂ ಡ್ರೆಸ್‌ಕೋಡ್ ಫಾಲೋ ಮಾಡಿ.
ಲುಕ್-2
ಕೂಲ್ ಕ್ಯಾಶುವಲ್ಸ್
ಕೂಲ್ ಕ್ಯಾಶುವಲ್ಸ್ ಎಂದಾಕ್ಷಣಾ ಇವು ತೀರಾ ಕಂಫರ್ಟಬಲ್ ಆಗಿರುತ್ತವೆ. ಹೌದು, ಬಹುತೇಕ ಡಿಸ್ಕೋ, ನೈಟ್ ಪಾರ್ಟಿ ಅಥವಾ ಬೀಚ್ ಪಾರ್ಟಿಗಳಾಗಿರುತ್ತವೆ. ಯಾವಾಗಲೂ ಫನ್‌ನಿಂದ ಕೂಡಿರುತ್ತವೆ. ಸಂಜೆ ಹೊತ್ತಾದಲ್ಲಿ ವಾತಾವರಣ ತಂಪಾಗಿರುತ್ತದೆ. ಅದರಿಂದ ಅದಕ್ಕೆ ಸೂಟಬಲ್ ಆಗಿ ಸಿಂಪಲ್, ಸ್ಟೈಲಿಷ್ ಆಗಿ ನಿಮ್ಮ ಡ್ರೆಸ್ ಇರಲಿ. ಓವರ್ ದಿ ಟಾಪ್ ಕಂಟೆಂಟ್ ಬೇಡ.
ಲುಕ್-3
ಈಸಿ ಫಾರ್ಮಲ್ಸ್
ನಿಮ್ಮ ಕಚೇರಿಯ ಸಹ ಉದ್ಯೋಗಿಗಳು ಮತ್ತು ಫ್ರೆಂಡ್ಸ್ ಜತೆ ನಡೆಯುವ ಪಾರ್ಟಿಯಲ್ಲಿ ಈಸಿ ಫಾರ್ಮಲ್ಸ್ ನೋಡಲು ಆಕರ್ಷಕವಾಗಿ ಕಾಣುತ್ತವೆ. ನಿಮ್ಮ ಸೆಮಿ ಫಾರ್ಮಲ್ ಲುಕ್ ನೀವು ಸ್ಟೈಲಿಷ್ ಒಂದೇ ಅಲ್ಲ, ತಂಪು ವಾತಾವರಣಕ್ಕೆ ಹೊಂದಿಕೊಳ್ಳುವವರು ಮತ್ತು ಫಸ್ ಫ್ರೀ ಎಂಬ ಮೆಸೇಜ್ ನೀಡುತ್ತವೆ.
ಈ ಸುದ್ದಿಯನ್ನೂ ಓದಿ | Year End Sale 2024: ಇಯರ್ ಎಂಡ್ ಸೇಲ್ ಶಾಪಿಂಗ್ ಪ್ರಿಯರಿಗೆ 5 ಸಿಂಪಲ್ ಟಿಪ್ಸ್ ಇಲ್ಲಿದೆ
ಲುಕ್ – 4
ಫಂಕಿ ಮೆನ್ಸ್ ಲುಕ್
ಈ ಲುಕ್‌ನಲ್ಲಿ ಬಿಂದಾಸ್ ಸ್ಟೈಲ್ ಸ್ಟೇಟ್‌ಮೆಂಟ್ ಇರುತ್ತದೆ. ಯಾವುದೇ ಡ್ರೆಸ್‌ಕೋಡ್ ರಿಸ್ಟ್ರಿಕ್ಷನ್ ಇರುವುದಿಲ್ಲ. ಬಮರ್ಡಾ, ಶಾರ್ಟ್ಸ್, ಜಾಗರ್ಸ್, ಕೂಲಾಗಿರುವ ಟೀ ಶರ್ಟ್ಸ್ ಸೇರಿದಂತೆ ಯಾವುದನ್ನು ಬೇಕಾದರೂ ಧರಿಸಬಹುದು. ಫಂಕಿ ಲುಕ್ ಹಾಗೂ ರೆಟ್ರೋ ಲುಕ್ ನೀಡುವ ಔಟ್‌ಫಿಟ್ ಧರಿಸಬಹುದು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)