Thursday, 12th December 2024

ಸೋಂಕಿನ ಹಂಗಿಲ್ಲದ ವೃದ್ಧಾಶ್ರಮಗಳು

ವ್ಯಾಯಾಮ,ಆಟೋಟ, ಕರೋನಾ ಶಿಷ್ಟಾಚಾರ ಪಾಲನೆ

ವಿಶೇಷ ವರದಿ: ರಾಘವೇಂಧ್ರ ಕಲಾದಗಿ ಬಾಗಲಕೋಟೆ

ಜಿಲ್ಲೆಯ ವೃದ್ಧಾಶ್ರಮಗಳು ಕರೋನಾ ಸೋಂಕಿನ ಹಂಗಿಲ್ಲದೆ ಹಾಯಾಗಿ ಖುಷಿ ಖುಷಿಯಾಗಿದ್ದಾರೆ. ಇಳಿ ವಯಸ್ಸಿನ ವೃದ್ದ
ಜೀವಗಳು ಎಲ್ಲಡೆ ಕರೋನಾ ಅಬ್ಬರ ಜೋರಾಗಿ ನಗರ ಮತ್ತು ಗ್ರಾಮೀಣ ಪ್ರದೇಶ ತಲ್ಲಣಗೊಂಡು ತತ್ತರಿಸಿದ್ದಂತೂ ಸತ್ಯ.

ವೃದ್ಧರ ಸೋಂಕಿನಿಂದ ಮುಕ್ತವಾಗಿರಲು ಮನೆಯಿಂದ ಆಚೆ ಬರಬೇಡಿ ಎನ್ನುವುದು ಸರಕಾರದ ಮನವಿ. ಇಂತಹ ಪರಿಸ್ಥಿತಿಯಲ್ಲಿ
ಬಾಗಲಕೋಟೆ ಜಿಲ್ಲೆಯಲ್ಲಿರುವ ವೃದ್ಧಾಶ್ರಮಗಳು ಸೋಂಕಿನ ಹಂಗಿಲ್ಲದೇ ಎಲ್ಲರೂ ಉತ್ತಮ ಆರೋಗ್ಯ ಭಾಗ್ಯದಿಂದ ಕಾಲ
ಕಳೆಯುತ್ತಿರುವದು ಸಂತಸಕರ ಸಂಗತಿ. ಬಾಗಲಕೋಟೆ ತಾಲೂಕಿನ ನೀರಲಕೇರಿ ಸರ್ವೋದಯ ವೃದ್ದಾಶ್ರಮ ಸೇರಿದಂತೆ
ಜಿಲ್ಲೆಯಲ್ಲಿ 5 ವೃದ್ದಾಶ್ರಮಗಳಲ್ಲಿ ಹಿರಿಯ ನಾಗರಿಕರ ಸೇವಾ ಕೇಂದ್ರದಲ್ಲಿ ಹಿರಿಯ ಜೀವಿಗಳಿಗೆ ಕರೋನಾದ ಆತಂಕವು ಇಲ್ಲ
ಭಯವೂ ಇಲ್ಲದ ನೆಮ್ಮದಿ ಇವರದ್ದಾಗಿದೆ.

ಇಲ್ಲಿನ ವೃದ್ಧಾಶ್ರಮದ ವೃದ್ಧರಿಗೆ ಕಾಳಜಿ ವಹಿಸಿ ಆಶ್ರಮಗಳಿಗೆ ಸೋಂಕು ಪ್ರವೇಶಕ್ಕೆ ಕಟ್ಟೆಚ್ಚರ ವಹಿಸಿದ್ದು ಆಶ್ರಮದಲ್ಲಿರುವ
ವೃದ್ಧರು ತಮ್ಮ ಪ್ರತಿದಿನದ ಕಾರ್ಯ ಚಟುವಟಿಕೆಗಳಿಂದ ಎಲ್ಲರೂ ಕೋವಿಡ್ ನಿಂದ ಸೇಫ್ ಆಗಿದ್ದು ನಿತ್ಯ ಆಶ್ರಮದ
ವೃದ್ಧರಿಗೆ ಉತ್ತಮ ಊಟ, ಉಪಹಾರದೊಂದಿಗೆ ಬೆಳಗ್ಗೆ ವ್ಯಾಯಾಮ, ಆಟ, ಹಾಡು, ಪಾಠ ಎಲ್ಲವೂ ನಡೆಯುತ್ತಿದೆ.

ಕೈತೋಟದಲ್ಲಿ ವೃದ್ದರ ಕಾಯಕ: ಕೈತೋಟದಲ್ಲಿ ತಮ್ಮ ಕೈಲಾದ ಮಟ್ಟಿಗೆ ಕಾಯಕ ಮಾಡುತ್ತಿದ್ದು ನಮ್ಮನ್ನು ಎಲ್ಲೂ
ಹೊರಗಡೆ ಬಿಡದೆ ಕೋವಿಡ್‌ನಿಂದ ಮಹಾ ಮಾರಿಯಿಂದ ಬಚಾವ್ ಮಾಡಿದ್ದು ನಮ್ಮೆಲ್ಲರ ಸುಧೈವ ಎಂದು ವೃದ್ದರು
ಹೇಳುತ್ತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ನೀರಲಕೇರಿ ಸೇರಿದಂತೆ ಜಿಲ್ಲೆಯಲ್ಲಿ ಐದು ವೃದ್ಧಾಶ್ರಮಗಳು ಇವೆ. ನೂರಕ್ಕೂ ಅಽಕ
ಹಿರಿಯಜೀವಗಳು ಇಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

ಬಾಗಲಕೋಟೆ ಸಮೀಪದ ನೀರಲಕೇರಿ ವೃದ್ಧಾಶ್ರಮವೊಂದರಲ್ಲೆ ಸದ್ಯ 50 ಹಿರಿಯ ನಾಗರಿಕರು ಇದ್ದಾರೆ. ಕಳೆದ ಒಂದು
ವರ್ಷದಿಂದ ಕೋವಿಡ್ 1 ಹಾಗೂ 2ನೇ ಅಲೆ ಜೋರಾಗಿ ಸದ್ದು ಮಾಡುತ್ತಿರುವುದರಿಂದ ವೃದ್ಧರಿಗೆ ಸೋಂಕು ಬರದಂತೆ ಜೋಪಾನ ಮಾಡಲಾಗುತ್ತಿದೆ. ಮಾಸ್ಕ್, ಸಾಮಾಜಿಕ ಅಂತರ, ಸಾನಿಟೈಸಿಂಗ್ ಸೇರಿದಂತೆ ಎಲ್ಲ ಬಗೆಯ ಶಿಷ್ಟಾಚಾರಗಳನ್ನು ಪಾಲಿಸುತ್ತ ಬಂದಿದ್ದು ಆಶ್ರಮದ 45 ಜನರಿಗೆ ಕರೋನಾ ಲಸಿಕೆಯನ್ನು ಹಾಕಿಸಿ ಕೋವಿಡ್‌ಗೆ ಮುಂಜಾಗ್ರತಾ ಎಚ್ಚರಿಕೆ ಕ್ರಮ
ತೆಗೆದುಕೊಂಡು ವೃದ್ದರನ್ನು ಆಶ್ರಮದ ಹೊರ ಹೋಗದಂತೆ ನಿಗಾ ವಹಿಸಲಾಗಿದ್ದು, ಹೀಗಾಗಿ ಆಶ್ರಮಗಳು ಸೇಫ್ ಆಗಿ
ಆರೋಗ್ಯವನ್ನು ಕಂಡುಕೊಂಡಿದ್ದಾರೆ.

***

ವೃದ್ಧಾಶ್ರಮಗಳ ವೃದ್ದರಿಗೆ ಕೋವಿಡ್ ಲಸಿಕೆ ಹಾಕಿಸಿದ್ದು ಎಲ್ಲ ವೃದ್ದಾಶ್ರಮಗಳಿಗೆ ಎಲ್ಲ ಬಗೆಯ ಎಚ್ಚರಿಕೆಯ ಕ್ರಮಗಳನ್ನು
ಕೈಗೊಳ್ಳಲು ಸೂಚಿಸಿದ್ದು ಈವರೆಗೂ ಯಾರಿಗೂ ಕೋವಿಡ್ ಸೋಂಕು ತಗುಲಿದ ಬಗ್ಗೆ ಮಾಹಿತಿ ಇಲ್ಲಾ.

-ಸವಿತಾ ಕಾಳೆ

ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ