Thursday, 31st October 2024

ಬೆಳುಗುಲಿ ಗ್ರಾಪಂಗೆ ಕಳಂಕಿತ ನೌಕರ ಬೇಡ: ಗ್ರಾಮಸ್ಥರಿಂದ ಪಂಚಾಯತ್ ಆಯುಕ್ತರಿಗೆ ದೂರು

ಹುಳಿಯಾರು: ಹಂದನಕೆರೆ ಹೋಬಳಿಯ ಬೆಳಗುಲಿ ಗ್ರಾಮ ಪಂಚಾಯ್ತಿಗೆ ಕಳಂಕಿತ ನೌಕರರನ್ನು ನಿಯೋಜಿಸಿದ್ದು ತಕ್ಷಣ ಇವರನ್ನು ನಮ್ಮೂರಿಂದ ವಿಮುಕ್ತಗೊಳಿಸುವಂತೆ ಗ್ರಾಮಸ್ಥರು ಪಂಚಾಯತ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಭ್ರಷ್ಟಾಚಾರದ ಆರೋಪದಡಿ ಅಮಾನತ್ತು ಮಾಡಲಾಗಿರುವ ಕಳಂಕಿತರು ಹಾಗೂ ಕರ್ತವ್ಯ ನಿರ್ವಹಿಸುವುದಕ್ಕೆ ಅಸಮರ್ಥರು ಆಗಿರುವ ಟಿ.ಎ.ಲಕ್ಷ್ಮೀಕಾಂತ್‌ ಎಂಬುವವರನ್ನು ಬೆಳಗುಲಿ ಗ್ರಾಮ ಪಂಚಾಯಿತಿಗೆ ನಿಯೋಜಿಸಲಾಗಿದೆ. ಇವರನ್ನು ವಿಮುಕ್ತ ಗೊಳಿಸಬೇಕೆಂದು ಮನವಿ ಮಾಡಲಾಗಿದ್ದರೂ ಯಾವುದೇ ರೀತಿಯ ಕ್ರಮಕೈಗೊಳ್ಳದೆ ನಿರ್ಲಕ್ಷ್ಯಿಸಲಾಗಿದೆ ಎಂದು ಪತ್ರದಲ್ಲಿ ಆರೋಪಿಸಿದ್ದರು.

ಈ ಬಗ್ಗೆ ಪಂಚಾಯತ್ ಆಯುಕ್ತರು ತುಮಕೂರು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದಿದ್ದು ಈ ಕುರಿತು ತಕ್ಷಣವೇ ಸೂಕ್ತ ಕ್ರಮಕೈಗೊಂಡು ನೆನಪೋಲೆಗೆ ಅವಕಾಶ ನೀಡದ ವರದಿಯನ್ನು ಆಯುಕ್ತಾಲಯಕ್ಕೆ ಕಳುಹಿಸಿಕೊಡುವಂತೆ ತಿಳಿಸಿದ್ದಾರೆ.