ಪಾವಗಡ : ತಾಲ್ಲೂಕಿನ ಗಡಿ ಪ್ರದೇಶದ ಗ್ರಾಮ ನಾಗೇನಹಳ್ಳಿ ತಾಂಡಕ್ಕೆ ಭೇಟಿ ನೀಡಿದ ಅಬಕಾರಿ ಉಪ ಅಯುಕ್ತ ಶೈಲಾಜಾ ಎ.ಕೋಟೆ ಭೇಟಿ ನೀಡಿದರು.
ಈ ಭಾಗದ ಜನರೊಂದಿಗೆ ಮಾತನಾಡಿ, ಕಳ್ಳಬಟ್ಟಿ ಸರಾಯಿ. ಸೇಂದಿ, ಗಾಂಜಾ ಹಾಗೂ ಅಬಕಾರಿ ಅಕ್ರಮಗಳ ಬಗ್ಗೆ ಗ್ರಾಮಸ್ಥರಿಗೆ ಅರಿವು ಮೂಡಿಸಿದರು.
ತಾವುಗಳು ಆಂಧ್ರದ್ರದ ಗಡಿಯಲ್ಲಿ ಇರುವುದರಿಂದ ಹಣದ ಆಸೆಗೆ ಯಾವುದೇ ತರಹದ ಕಾನೂನಿನ ವಿರುದ್ಧದ ಚಟುವಟಿಕೆಗಳನ್ನು ಮಾಡಬೇಡಿ. ಇಂತಹ ಯಾವುದೇ ಚಟುವಟಿಕೆ ನಡೆದರೆ ಅಂತಹ ವ್ಯೆಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.
ನಂತರ ಕೋವಿಡ್19 ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಮಾಸ್ಕ್ ವಿತರಣೆ ಮಾಡಲಾಯಿತು.
ಈ ವೇಳೆ ಮಧುಗಿರಿ ಉಪ ಅಧೀಕ್ಷರ ಸುರೇಶ್ ಆರ್., ಪಾವಗಡದ ಅಬಕಾರಿ ನಿರೀಕ್ಷಕ ಶಂಕರ್ ಎ. ಹಾಗೂ ಪಾವಗಢ ಅಬಕಾರಿ ಇನ್ಸ್ಪೆಕ್ಟರ್ ಪುರ್ತವಿ ಹಾಗೂ ಸಿಬ್ಬಂದಿ ಗಳು ಇದ್ದರು.