Saturday, 14th December 2024

ಪಾವಗಡ ತಾಲೂಕಿನ ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

ಪಾವಗಡ: ಚಿತ್ರ ದುರ್ಗ ಸಂಸದ ಎ.ನಾರಾಯಣ ಸ್ವಾಮಿರವರಿಗೆ ಕೇಂದ್ರ ಸಚಿವರಾಗಿ ಆಯ್ಕೆ ಯಾದ ಹಿನ್ನೆಲೆಯಲ್ಲಿ ಪಾವಗಡ ತಾಲೂಕಿನ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಬ್ರಮಿಸಿದರು.

ಪಾವಗಡ ತಾಲೂಕಿನ ಬಿಜೆಪಿ ಅಧ್ಯಕ್ಷ ರವಿಶಂಕರ್ ನಾಯ್ಕ್ ಮಾತನಾಡಿ ಈ ಭಾಗದ ಬಿಜೆಪಿ ಕಾರ್ಯಕರ್ತರಿಗೆ ಇಂದು ಹಬ್ಬದ ಸಂಭ್ರಮ ಏಕೆಂದರೆ ನಮ್ಮ ಭಾಗದ ಸಂಸದರಿಗೆ ಕೇಂದ್ರ ಸಚಿವರಾಗಿ ಆಯ್ಕ್ ಯಾಗಿರುವುದ ತುಂಬ ತುಂಬಾ ಖುಷಿ ತಂದಿದೆ.
ಸಚಿವರಾಗಿ ಆಯ್ಕೆ

ಈ ಭಾಗಕ್ಕೆ ಹೆಚ್ಚಿನ ಒತ್ತು ನೀಡಿ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಿದ ಏಕೈಕ ಸಂಸದರಾಗಿದ್ದು ನಾರಾಯಣ ಸ್ವಾಮಿ ಯವರಿಗೆ ಇನ್ನೂ ಹೆಚ್ಚಿನ ಬಲ ಸಿಕಿದಂತೆ.
ಬಿಜೆಪಿಯಲ್ಲಿ ಶಿಸ್ತಿನ ಸಿಪಾಯಿಯಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಂತಹ ವ್ಯಕ್ತಿತ್ವವುಳ್ಳ ರಾದ ನಾರಾಯಣ್ ಸ್ವಾಮಿಯವರಿಗೆ ಕೇಂದ್ರ ಸರ್ಕಾರದ ಗಣ್ಯರಿಗೆ ಧನ್ಯವಾದಗಳು ಎಂದರು. ಈ ಭಾಗದಲ್ಲಿ ಶಿಕ್ಷಣ ಹಾಗೂ ಕುಡಿಯುವ ನೀರಿಗಾಗಿ ಹೆಚ್ಚಿನ ಹೂತ್ತು ನೀಡಿದ್ದಾರೆ. ಎ.ನಾರಾಯಣ್ ಸ್ವಾಮಿ ಯವರು ಪ್ರತಿಯೊಬ್ಬ ವ್ಯಕ್ತಿಗೂ ನಗುಮುಖದಿಂದ ಮಾತನಾಡಿಸು ಒಳ್ಳೆಯ ವ್ಯಕ್ತಿತ್ವ ಉಳ್ಳವರು.

ಹಿರಿಯ ಬಿಜೆಪಿ ಮುಖಂಡ ಡಾ.ವೆಂಕಟರಾಮಯ್ಯ ಮಾತನಾಡಿದರು.ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವಿ ಮಾತನಾಡಿದರು.ಬಿಜೆಪಿ ಎಸ್.ಸಿ ಮೋರ್ಚ ಶಿವಕುಮಾರ್ ಸಾಕೇಲಾ ಮಾತನಾಡಿದರು.

ಈ ವೇಳೆ ಉಪಾಧ್ಯಕ್ಷರು ಪಾಲಯ್ಯ , ಜಿಲ್ಲಾ ಉಪಾಧ್ಯಕ್ಷರು . ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ ಕೃಷ್ಣ ಮೂರ್ತಿ, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷರು ನವೀನ್ ಸೀತಾರಾಮ್ ನಾಯ್ಕ್ , ಮಂಡಲ ಕಾರ್ಯದರ್ಶಿಗಳಾದ ಶೇಖರ್ ಬಾಬು, ತಿಪ್ಪೇಸ್ವಾಮಿ, ಪ್ರಸನ್ನ, ನವೀನ್, ಕಾರ್ಯಕಾರಿಣಿ ಸದಸ್ಯರು ಶಿವಲಿಂಗಪ್ಪ, ಮಹಿಳಾ ಮೋರ್ಚಾ ಅಧ್ಯಕ್ಷರು ಸಿದ್ದಗಂಗಮ್ಮ ಪ್ರಧಾನ ಕಾರ್ಯದರ್ಶಿ ಶಾಂತಮ್ಮ, ರೈತ ಮೋರ್ಚಾ ಅಧ್ಯಕ್ಷರು ಕೋಟೆಶ್ವರ ರೆಡ್ಡಿ , ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಬಾಬು ರವರು, ಯುವ ಮೋರ್ಚಾ ಅಧ್ಯಕ್ಷರು ಮಧು ಪಾಳೇಗಾರ್, ಎಸ್.ಟಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಜಗನ್ನಾಥ್, ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹನುಮಂತ ರೆಡ್ಡಿ, ರಂಗನಾಥ್, ಮಾಧ್ಯಮ ಪ್ರಮುಖ್ ಪ್ರಸನ್ನ ಕುಮಾರ್ ವ್ಯಾಪಾರ ಪ್ರಕೋಷ್ಠ ಪ್ರಮುಖ್ ಲೋಕೇಶ್ ರಾವ್, ನಗರಧ್ಯಕ್ಷ ಗೋಲ್ಡನ್‌ ಮಂಜು, ವೇಣುಗೋಪಾಲ್, ವಾಸು, ರವಿ, ನರೇಶ್, ರಾಕೇಶ್ ಹಾಗೂ ಹಲವು ಕಾರ್ಯಕರ್ತ, ಮುಖಂಡರು ಉಪಸ್ಥಿತರಿದ್ದರು.