ಪಾವಗಡ: ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಪಾವಗಡ ಪಟ್ಟಣದ (Pavagada News) ಶ್ರೀ ನೀಲಕಂಠೇಶ್ವರ ದೇವಸ್ಥಾನ ವಿಚಾರವಾಗಿ ದೂರುದಾರರ ಸಮ್ಮುಖದಲ್ಲಿ ಸ.ನಂ. 72/47 ರ ಸ್ಥಳ ಪರಿಶೀಲನೆ ಮಾಡಿದ್ದೇವೆ ಎಂದು ಮಧುಗಿರಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ತಿಳಿಸಿದರು.
ಪಟ್ಟಣದ ಶ್ರೀ ನೀಲಕಂಠೇಶ್ವರ ದೇವಸ್ಥಾನದ ವಿಚಾರವಾಗಿ ಬುಧವಾರ ಸ್ಥಳ ಪರಿಶೀಲನೆ ನಡೆಸಿ, ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಪಾವಗಡ ಪಟ್ಟಣದ ಶ್ರೀ ನೀಲಕಂಠೇಶ್ವರ ದೇವಸ್ಥಾನ ವಿಚಾರವಾಗಿ ದೂರಿಗೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ಮಾಡಿ, ವರದಿ ನೀಡುವಂತೆ ತಿಳಿಸಿದ ಹಿನ್ನೆಲೆಯಲ್ಲಿ ಸ.ನಂ. 72/47 ರ ಜಾಗವನ್ನು ದೂರುದಾರರ ಸಮ್ಮುಖದಲ್ಲಿ ಪರಿಶೀಲನೆ ಮಾಡಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ಸರ್ವೇ ಸ್ಕೆಚ್ ಆಗಬೇಕಿದೆ. ಸರ್ವೆ ಸ್ಕೆಚ್ ಮಾಡಿಸಿ, ವಾಸ್ತವಿಕವಾಗಿ ಏನೆಲ್ಲಾ ಇವೆ ಎಂಬುದನ್ನು ವರದಿ ನೀಡುತ್ತೇವೆ ಎಂದು ತಿಳಿಸಿದರು.
ಮಧುಗಿರಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ಅವರ ಜತೆ ಪಾವಗಡ ತಹಸೀಲ್ದಾರ್ ವರದರಾಜು, ಪಾವಗಡ ಪುರಸಭೆ ಮುಖ್ಯಾಧಿಕಾರಿ ಜಾಫರ್ ಷರೀಫ್, ಕಂದಾಯ ಇಲಾಖೆಯ ಅಧಿಕಾರಿಗಳು, ಸರ್ವೇ ಇಲಾಖೆಯ ಅಧಿಕಾರಿಗಳು ಹಾಗೂ ಇತರರು ಸ್ಥಳ ಪರಿಶೀಲನೆ ವೇಳೆ ಉಪಸ್ಥಿತರಿದ್ದರು.
ಈ ಸುದ್ದಿಯನ್ನೂ ಓದಿ | Invest Karnataka: ಕರ್ನಾಟಕದ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಎನ್‌ಎಕ್ಸ್‌ಪಿಯಿಂದ ₹8,400 ಕೋಟಿ ಹೂಡಿಕೆ
ಈ ಸಂದರ್ಭದಲ್ಲಿ ದೂರುದಾರರಾದ ವೀರ್ಲಗುಂದಿ ನರಸಿಂಹಯ್ಯ, ರಾಮಾಂಜಿನಪ್ಪ ಹಾಗೂ ಆರ್ಯ ವೈಶ್ಯ ಸಂಘದ ಮುಖಂಡರು ಉಪಸ್ಥಿತರಿದ್ದರು.