Sunday, 15th December 2024

ಕಾಶ್ಮೀರದಲ್ಲಿ ಪಾವಗಡ ಯೋಧನ ಸಾವು

ಹಲವಾರು ವರ್ಷಗಳಿಂದ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಟಿ.ಹಳ್ಳಿ ಗ್ರಾಮದ ಡಿ. ರಂಗಯ್ಯ ತಂದೆ ದಾಸಣ್ಣ ತಾಯಿ 

ಪಾವಗಡ: ಜಮ್ಮು ಕಾಶ್ಮೀರದಲ್ಲಿ ಭಾರತೀಯ ಯೋಧರಾಗಿ ಸೇವಾ ನಿರತರಾಗಿದ್ದ ತಾಲೂಕಿನ ಕೆ.ಟಿ.ಹಳ್ಳಿ ಗ್ರಾಮದ ಡಿ.ರಂಗಯ್ಯ (58) ಅವರು ಶುಕ್ರವಾರ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ರಂಗಯ್ಯ ಅವರು ಮೃತಪಟ್ಟ ಸುದ್ದಿ ತಿಳಿದು ತಾಲೂಕಿನಾದ್ಯಂತ ಗಣ್ಯರು ಮತ್ತು ಸಂಘಸಂಸ್ಥೆಗಳ ಪ್ರತಿನಿಧಿಗಳು ಮತ್ತು ದೇಶಪ್ರೇಮ ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಪಾವಗಡ ತಾಲೂಕಿನ ಕೆ.ಟಿ.ಹಳ್ಳಿ ಗ್ರಾಮದ ದಾಸಣ್ಣ ಅವರ ಪುತ್ರ ಡಿ.ರಂಗಯ್ಯ ಅವರು ಕಳೆದ 38 ವರ್ಷಗಳ ಬಿ.ಎಸ್.ಎಫ್ ತುಕಡಿಯಲ್ಲಿ ಹಲವಾರು ವರ್ಷಗಳಿಂದ ಭಾರತೀಯ ಸೇನೆಯ ಯೋಧರಾಗಿ ಸೇವೆ ಸಲ್ಲಿಸುತ್ತಿದ್ದು, ಆ.1ರಂದು ಮನೆಗೆ ದೂರವಾಣಿ ಕರೆ ಮಾಡಿ ನಿಮ್ಮ ತಂದೆ ಹುತಾತ್ಮರಾಗಿದ್ದಾರೆ ಎಂಬುದಾಗಿ ಇಲಾಖೆಯ ಅಧಿಕಾರಿಗಳು ತಿಳಿಸುತ್ತಾರೆ.

ಪತ್ನಿ ಹಾಗೂ ಮೂರು ಜನ ಪುತ್ರರು ಒಬ್ಬ ಮಗಳನ್ನು ಆಗಲಿದ್ದು, ತಾಲೂಕಿನ ಕೆ.ಟಿ.ಹಳ್ಳಿ ಗ್ರಾಮದ ವಾಸಿ ಡಿ.ರಂಗಯ್ಯ 1986 ರಲ್ಲಿ ಮೂದಲಿಗೆ ಸಿ.ಆರ್.ಪಿ.ಎಫ್

ನಲ್ಲಿ ಕೇಲಸಕ್ಕೆ ಸೇರಿ ನಂತರ ಕಡಿಮೆ ಸಂಬಳ ಎಂದು ಸೇನೆಗೆ ಸೇರಿಸಿಕೊಳ್ಳುತ್ತಾರೆ ನಂತರ ಹಲವು ಕಡೆ ಕರ್ತವ್ಯ ನಿರ್ವಹಿಸುತ್ತಾರೆ ನಾಗಪುರ್, ಕಾಶ್ಮೀರ,  ಕಲ್ಕತ್ತಾ, ಕೃಷ್ಣ ನಗರ, ನಾಗಲ್ಯಾಂಡ್.ಎಂ.ಹೆಚ್.ಕಚೇರಿ ಕೇಲಸ ನಂತರ ಮತ್ತೆ ಕಾಶ್ಮೀರ, ಜಮ್ಮು, ಅಕ್ನೂರ್ ಕಡೆಗಳಲ್ಲಿ ಕೆಲಸ ಮಾಡಿದ್ದಾರೆ. ಬಳಿಕ 6 ತಿಂಗಳಿ ಗೊಮ್ಮೆ ಸ್ವಗ್ರಾಮಕ್ಕೆ ಬರುತ್ತಿದ್ದರು ಎಂಬುದಾಗಿ ಮನೆಯ ಸದಸ್ಯರು ತಿಳಿಸಿದ್ದಾರೆ.

ಅದ್ದೂರಿ ಮೆರವಣಿಗೆ

ಬಿ.ಎಸ್.ಎಫ್ ಯೋಧ ಡಿ.ರಂಗಯ್ಯ ನವರ ಪಾರ್ಥಿವ ಶರೀರ ಸಂಜೆ ಬೆಂಗಳೂರಿಗೆ ಬಂದು ತಲುಪಿದೆ. ಬೆಂಗಳೂರಿನಿಂದ ಪಾವಗಡಕ್ಕೆ ಸುಮಾರು 8.00 ಗಂಟೆಗೆ ತಲುಪಿದ್ದು, ಇಂದು ರಾತ್ರಿ ಮಂದಿರದಲ್ಲಿ ಸಾರ್ವಜನಿಕರ ವೀಕ್ಷಣೆಗಾಗಿ ಇಡಲಾಗುವುದು. ನಂತರ ಸೋಮವಾರ 7:00 ಗೆ ನಿರಕ್ಷರ ಮಂದಿರದಿಂದ ಪ್ರಮುಖ ರಸ್ತೆಯ ಮೂಲಕ ಕೇಟಿ ಹಳ್ಳಿಗೆ ಅದ್ದೂರಿ ಮೆರವಣಿಗೆ ಮೂಲಕ ಅವರ ಪಾರ್ಥಿವ ಶರೀರವನ್ನು ತರಲಾಗುವುದು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಹೆಚ್ಚಿನ ಜನ ಮೆರವಣಿಗೆಯಲ್ಲಿ ಭಾಗ ವಹಿಸಬೇಕೆಂದು ಯುವಕರು ಮನವಿ ಮಾಡಿಕೊಂಡಿದ್ದಾರೆ.