ಹಾಸನ: ಇಂದು ರಾಜ್ಯಾದ್ಯಂತ ಪಿಡಿಒ ನೇಮಕಾತಿ ಪರೀಕ್ಷೆ (PDO Exam) ನಡೆಯುತ್ತಿದೆ. ಪಿಡಿಒ ನೇಮಕಾತಿ ಪರೀಕ್ಷೆ ಬರೆಯಲು ಬಂದಿದ್ದ ಪರೀಕ್ಷಾರ್ಥಿಗಳಿಗೆ (PDO exam contestants) ಪರೀಕ್ಷಾ ಕೇಂದ್ರದ ಸಿಬ್ಬಂದಿ ಶಾಕ್ ನೀಡಿದ್ದು, ಉದ್ದ ತೋಳಿನ ಅಂಗಿಗಳಿಗೆ ಕತ್ತರಿ ಹಾಕಿದರು.
ಪರೀಕ್ಷೆಗೆ ತುಂಬು ತೋಳಿನ ಬಟ್ಟೆ ಧರಿಸಿ ಬಂದಿದ್ದ ಅಭ್ಯರ್ಥಿಗಳ ಬಟ್ಟೆಯನ್ನು ಕತ್ತರಿಸಲಾಗಿದೆ. ಅರ್ಧ ತೋಳಿನವರೆಗೆ ಬಟ್ಟೆ ಕತ್ತರಿಸಿ ಸಿಬ್ಬಂದಿ ಒಳಗೆ ಬಿಟ್ಟಿದ್ದಾರೆ. ಹಾಸನದ (Hasan news) ಎವಿಕೆ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಘಟನೆ ನಡೆದಿದೆ. ಈ ವೇಳೆ ಅಧಿಕಾರಿಗಳು ಮತ್ತು ಪರೀಕ್ಷಾರ್ಥಿಗಳ ನಡುವೆ ವಾಗ್ವಾದ ನಡೆದಿದೆ.
ವಸ್ತ್ರ ಸಂಹಿತೆ ನಿಯಮ ಪಾಲಿಸದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ವಸ್ತ್ರ ಸಂಹಿತೆ ಸೇರಿ ಅಭ್ಯರ್ಥಿಗಳು ಪಾಲಿಸಬೇಕಾದ ಸೂಚನೆಗಳನ್ನು ಮೊದಲೇ ತಿಳಿಸಲಾಗಿದೆ. ನಮ್ಮ ಕರ್ತವ್ಯ ನಾವು ಮಾಡಲೇಬೇಕಿದೆ. ಪರೀಕ್ಷಾ ಸೂಚನೆಯಲ್ಲಿ ಈ ಬಗ್ಗೆ ತಿಳಿಸಲಾಗಿದೆ ಎಂದು ಪರೀಕ್ಷಾ ಕೇಂದ್ರದ ಸಿಬ್ಬಂದಿ ಹೇಳಿದ್ದಾರೆ.
ಪರೀಕ್ಷಾರ್ಥಿಗಳಿಗೆ ಈ ನಿಯಮಗಳ ಪಾಲನೆ ಕಡ್ಡಾಯ
ಪರೀಕ್ಷಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಆಗಮಿಸುವ ಮುನ್ನ ಸ್ಮಾರ್ಟ್‌ವಾಚ್, ವಿದ್ಯುತ್ ಉಪಕರಣಗಳು, ಕ್ಯಾಲ್ಕುಲೇಟರ್, ಮೊಬೈಲ್ ಫೋನ್ ತರುವುದನ್ನು ನಿಷೇಧಿಸಲಾಗಿದೆ.
ಪರೀಕ್ಷಾರ್ಥಿಗಳು ತಮ್ಮ ಗುರುತಿನ ಚೀಟಿ, ಕುಡಿಯುವ ನೀರಿನ ಬಾಟಲ್‌ಗಳಲ್ಲದೆ ಇತರೆ ವಸ್ತುಗಳು ತರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಮಹಿಳೆಯರು ಮಾಂಗಲ್ಯಸರ ಮತ್ತು ಕಾಲುಂಗುರ ಹೊರತುಪಡಿಸಿ, ಇತರ ಆಭರಣಗಳನ್ನು ಧರಿಸುವುದನ್ನು ನಿಷೇಧಿಸಿದೆ.
ಪುರುಷರು ಫುಲ್‌ಷರ್ಟ್, ಫ್ಯಾನ್ಸಿ ಪ್ಯಾಂಟ್, ಶೂ-ಸಾಕ್ಸ್‌ಗಳನ್ನು ಧರಿಸಿ ಬರುವುದನ್ನು ನಿಷೇಧಿಸಲಾಗಿದೆ.
ರೈತರಿಗೆ ಸಿಹಿ ಸುದ್ದಿ, ಅಡಮಾನ ರಹಿತ ಸಾಲದ ಮಿತಿ 1.6 ಲಕ್ಷದಿಂದ 2 ಲಕ್ಷ ರೂ.ಗೆ ಏರಿಕೆ
ನವದೆಹಲಿ: ಸಣ್ಣ ಮತ್ತು ಅತಿಸಣ್ಣ ರೈತರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಸಿಹಿ ಸುದ್ದಿ ನೀಡಿದೆ. ರೈತರಿಗೆ ನೀಡಲಾಗುವ ಅಡಮಾನ (ಮೇಲಾಧಾರ) ರಹಿತ ಸಾಲದ ಮಿತಿಯನ್ನು 1.66 ಲಕ್ಷ ರೂ.ಗಳಿಂದ 2 ಲಕ್ಷ ರೂ.ಗೆ ಹೆಚ್ಚಿಸಿದೆ.
ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆ ಪೂರ್ಣಗೊಂಡ ನಂತರ ಮಾತನಾಡಿದ ಗವರ್ನರ್ ಶಕ್ತಿಕಾಂತ ದಾಸ್, “ಕೃಷಿ ಒಳಸುರಿಗಳ ವೆಚ್ಚ ಹೆಚ್ಚಳ ಮತ್ತು ಒಟ್ಟಾರೆ ಹಣದುಬ್ಬರವನ್ನು ಗಣನೆಗೆ ತೆಗೆದುಕೊಂಡು, ಮೇಲಾಧಾರ ರಹಿತ ಕೃಷಿ ಸಾಲಗಳ ಮಿತಿಯನ್ನು 1.6 ಲಕ್ಷ ರೂ.ಗಳಿಂದ 2 ಲಕ್ಷ ರೂ.ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಇದು ಸಣ್ಣ ಮತ್ತು ಅತಿಸಣ್ಣ ರೈತರಿಗೆ ಮತ್ತಷ್ಟು ಸಾಲದ ಲಭ್ಯತೆಯನ್ನು ಒದಗಿಸುತ್ತದೆ” ಎಂದಿದ್ದಾರೆ.
ಅಡಮಾನ ರಹಿತ ಸಾಲದ ಹೆಚ್ಚಳವನ್ನು ಸೂಚಿಸಲು ಆರ್‌ಬಿಐ ಶೀಘ್ರದಲ್ಲೇ ಪ್ರತ್ಯೇಕ ಸುತ್ತೋಲೆ ಹೊರಡಿಸಲಿದೆ. ಮೇಲಾಧಾರ ರಹಿತ ವ್ಯವಹಾರ ಸಾಲ ಎಂದರೆ, ಅಲ್ಲಿ ರೈತರು ಸಾಲಗಳನ್ನು ಪಡೆಯಲು ಯಾವುದೇ ಆಸ್ತಿಯನ್ನು ಭದ್ರತೆಯಾಗಿ ಅಡವಿಡುವ ಅಗತ್ಯವಿಲ್ಲ.
ಮೇಲಾಧಾರ ರಹಿತ ಕೃಷಿ ಸಾಲಗಳ ಮಿತಿಯನ್ನು ಕೇಂದ್ರ ಬ್ಯಾಂಕ್ 2019ರಲ್ಲಿ ಪರಿಷ್ಕರಿಸಿತು. ಆಗ ಅದನ್ನು 1 ಲಕ್ಷ ರೂ.ಗಳಿಂದ 1.6 ಲಕ್ಷ ರೂ.ಗೆ ಹೆಚ್ಚಿಸಲಾಯಿತು. ಸಣ್ಣ ಮತ್ತು ಅತಿಸಣ್ಣ ರೈತರ ಆರ್ಥಿಕ ಸಂಕಷ್ಟಗಳನ್ನು ಗಮನದಲ್ಲಿಟ್ಟುಕೊಂಡು ಹಣಕಾಸು ಸೇವೆಗಳ ಇಲಾಖೆ 2019ರ ಫೆಬ್ರವರಿಯಲ್ಲಿ 3 ಲಕ್ಷ ರೂ.ವರೆಗಿನ ಕೆಸಿಸಿ / ಬೆಳೆ ಸಾಲಗಳಿಗೆ ಸಂಸ್ಕರಣೆ, ದಾಖಲಾತಿ, ತಪಾಸಣೆ ಮತ್ತು ಲೆಡ್ಜರ್ ಫೋಲಿಯೊ ಶುಲ್ಕಗಳು ಮತ್ತು ಇತರ ಎಲ್ಲಾ ಸೇವಾ ಶುಲ್ಕಗಳನ್ನು ಮನ್ನಾ ಮಾಡಿದೆ.