Sunday, 15th December 2024

ಶಾಂತಿಯುತ ಮತದಾನ: ಮಂಡ್ಯದಲ್ಲಿ ಶೇ.88.13, ರಾಮನಗರದಲ್ಲಿ ಶೇ.88.27

ಮಂಡ್ಯ/ರಾಮನಗರ: ರಾಜ್ಯದಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯ ಎರಡನೇ ಹಂತದ ಮತದಾನ ಭಾನುವಾರ ನಡೆಯಿತು. ಕೆಲವೆಡೆ ಅಹಿತಕರ ಘಟನೆ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆ ಅಭ್ಯರ್ಥಿ ಮೇಲೆಯೇ ಹಲ್ಲೆಯಂತಹ ಘಟನೆಗಳನ್ನು ಹೊರತುಪಡಿಸಿ, ಬಹುತೇಕ ಕಡೆ ಶಾಂತಿಯುತ ಮತದಾನ ನಡೆದಿರುವ ಕುರಿತು ವರದಿಯಾಗಿದೆ.

ಶೇಕಡಾವಾರು ಮತದಾನ ಫಲಿತಾಂಶದ ಕುರಿತಂತೆ, ಮಂಡ್ಯದಲ್ಲಿ ಶೇ.88.13 ಹಾಗೂ ರಾಮನಗರದಲ್ಲಿ ಶೇ.88.27 ಮತದಾನ ನಡೆದಿರುವ ಕುರಿತು ವರದಿಯಾಗಿದೆ.