ಹುಬ್ಬಳ್ಳಿ: ಸನಾತನ ಹಿಂದೂ ಧರ್ಮ ಭಾರತಕ್ಕಷ್ಟೇ ಅಲ್ಲ ಜಗತ್ತಿಗೇ ಒಳಿತು ಮಾಡುತ್ತದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಪ್ರತಿಪಾದಿಸಿದರು. ರೋಣ ತಾಲೂಕಿನ ಅಬ್ಬಿಗೇರಿಯ ಶ್ರೀ ಅನ್ನದಾನೇಶ್ವರ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಿದ್ದ ಶ್ರೀಮದ್ ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಮಾತನಾಡಿದರು.
ಹಿಂದೂ ಸನಾತನ ಧರ್ಮ ಇರುವವರೆಗೂ ಜಗತ್ತಿಗೇ ಸರ್ವ ರೀತಿಯಲ್ಲೂ ಒಳಿತು ಮಾಡುತ್ತದೆ. ಹಾಗಾಗಿ ಹಿಂದೂ ಧರ್ಮ ಎಂದೆಂದಿಗೂ ಅಜರಾಮರವಾಗಿರುತ್ತದೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | PM Internship Scheme: ಪ್ರಧಾನಮಂತ್ರಿ ಇಂಟರ್ನ್ಶಿಪ್ ಯೋಜನೆಗೆ ನೀವು ಅರ್ಜಿ ಸಲ್ಲಿಸಬಹುದು; ಇಂದೇ ಶುರು
ನಮ್ಮ ಸನಾತನ ಧರ್ಮವನ್ನು ಉಳಿಸಿ, ಬೆಳೆಸಲು ಪೂಜ್ಯ ರಂಭಾಪುರಿ ಜಗದ್ಗುರುಗಳು ಕಳೆದ ಹಲವಾರು ದಶಕಗಳಿಂದ ಶ್ರಮಿಸುತ್ತಿದ್ದಾರೆ. ಇದು ನಮ್ಮೆಲ್ಲರ ಸೌಭಾಗ್ಯ ಎಂದು ಜೋಶಿ ಬಣ್ಣಿಸಿದರು.
ನಮ್ಮ ಸನಾತನ ಧರ್ಮ ಜನರನ್ನು ಸನ್ಮಾರ್ಗದ ಪಥದಲ್ಲಿ ಚಲಿಸಲು ಪ್ರೇರೇಪಿಸುತ್ತದೆ. ವಿಜಯದಶಮಿ ನಾವು ವಿಜಯವನ್ನು ಆಹ್ವಾನಿಸಿ, ಆರಾಧಿಸುವ ಹಾಗೂ ದುಷ್ಟ ಶಿಕ್ಷಣೆ ಶಿಷ್ಟ ರಕ್ಷಣೆಯ ಸಂಕೇತವಾಗಿದೆ ಎಂದು ತಿಳಿಸಿದ ಅವರು, ಮುಕ್ಕೋಟಿ ದೇವರುಗಳಲ್ಲಿ ಯಾರನ್ನಾದರೂ ಪೂಜಿಸು, ಅದಾಗದಿದ್ದಲ್ಲಿ ಕರ್ಮಯೋಗಿಯಾಗು ಎನ್ನುವ ಹಿಂದೂ ಧರ್ಮ ಸತ್ಪಥವನ್ನು ತೋರಿಸುತ್ತದೆ. ಅದೇ ನಮ್ಮ ಧರ್ಮದ ಹಿರಿಮೆ ಎಂದು ಹೇಳಿದರು.
ಇದೇ ವೇಳೆ ರುದ್ರಗಣಾಧಿಪತಿ ಶ್ರೀ ವೀರಭದ್ರ ಕೃತಿ ಬಿಡುಗಡೆ ಮಾಡಲಾಯಿತು.
ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ 1008 ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಈ ಸುದ್ದಿಯನ್ನೂ ಓದಿ | Nayab Singh Saini: ಅ.17ರಂದು ಹರಿಯಾಣ ಸಿಎಂ ಆಗಿ ನಯಾಬ್ ಸಿಂಗ್ ಸೈನಿ ಪ್ರಮಾಣ ವಚನ; ಪ್ರಧಾನಿ ಮೋದಿ ಭಾಗಿ
ಶರನ್ನವರಾತ್ರಿ ದಸರಾ ಮಹೋತ್ಸವದಲ್ಲಿ ಕವಲೇದುರ್ಗ ಭುವನಗಿರಿ ಸಂಸ್ಥಾನ ಮಠದ ಮರುಳಸಿದ್ದ ಶಿವಾಚಾರ್ಯ ಸ್ವಾಮೀಜಿ, ಗುರುಶಾಂತೇಶ್ವರ ಸ್ವಾಮೀಜಿ, ಸಂಸದ ರಾಘವೇಂದ್ರ, ಶಾಸಕ ಜಿ.ಎಸ್.ಪಾಟೀಲ್, ವಿಧಾನ ಪರಿಷತ್ ಸದಸ್ಯ ಸಂಕನೂರ, ಹಿರಿಯ ಚಿತ್ರನಟ ಕಲಾವಿದ ದೊಡ್ಡಣ್ಣ, ರಾಜು ಕೊಡಗಿ, ಸಂಕನೂರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.