Friday, 27th December 2024

Pralhad Joshi: ಕಾಂಗ್ರೆಸ್ ನಾಯಕರಿಗೆ ಸಂವಿಧಾನದ ಮೇಲೆ ಅಷ್ಟು ಗೌರವವಿದ್ದರೆ ಸಂಸತ್ ಅಧಿವೇಶನಕ್ಕೆ ಸಹಕಾರ ನೀಡಲಿ; ಜೋಶಿ ಸಲಹೆ

pralhad joshi

ನವದೆಹಲಿ: ಸಂವಿಧಾನದ ಪ್ರತಿ ಹಿಡಿದು ಹೋದ ಮಾತ್ರಕ್ಕೆ ಜನ ಕಾಂಗ್ರೆಸ್ ಪಕ್ಷವನ್ನು (Congress Party) ನಂಬಲಾರರು ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಕಾಂಗ್ರೆಸ್ ನಾಯಕರಿಗೆ ಚಾಟಿ ಬೀಸಿದರು. ದೆಹಲಿಯ ಸಂಸತ್ ಭವನದಲ್ಲಿ ಇಂದು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುಣ್ಯಸ್ಮರಣೆ ಪ್ರಯುಕ್ತ ಭಾವಚಿತ್ರಕ್ಕೆ ಗೌರವ ನಮನ ಸಲ್ಲಿಸಿ, ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಸಂವಿಧಾನದ ಪ್ರತಿ ಹಿಡಿದು ಹೋದಾಕ್ಷಣ ಜನ ಮರುಳಾಗಲ್ಲ

ಕಾಂಗ್ರೆಸ್ ಪಕ್ಷದವರು ದೇಶದ ಸಂವಿಧಾನ ಮತ್ತು ಸಂವಿಧಾನ ಶಿಲ್ಪಿಗೆ ಹೇಗೆ ಅಪಮಾನ ಮಾಡಿದ್ದಾರೆ ಎಂಬುದು ಜನಕ್ಕೆ ಗೊತ್ತಿದೆ. ಹಾಗಾಗಿ ಸಂವಿಧಾನದ ಪ್ರತಿ ಹಿಡಿದು ಹೋದಾಕ್ಷಣ ಜನ ಮರುಳಾಗಲ್ಲ ಎಂದು ಹೇಳಿದ ಅವರು, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಸಂವಿಧಾನಕ್ಕೆ ಹೇಗೆ ಅಪಮಾನ ಮಾಡಿದರು. ಅಂಬೇಡ್ಕರ್ ಅವರನ್ನು ಎಷ್ಟು ಅಪಮಾನದಿಂದ ನಡೆಸಿಕೊಂಡರು ಎಂಬುದು ಜನಕ್ಕೆ ಗೊತ್ತಿದೆ ಎಂದು ದೂರಿದರು.

ಕಾಂಗ್ರೆಸ್ ನಾಯಕರು ಹಿಂದಿನಿಂದಲೂ ಸಂವಿಧಾನ ರಚನೆಕಾರ ಡಾ. ಅಂಬೇಡ್ಕರ್ ಅವರಿಗೆ ಅಪಮಾನ ಮಾಡುತ್ತಲೇ ಬಂದಿದ್ದಾರೆ. ರಾಹುಲ್ ಗಾಂಧಿ ಈಗ ಸಂವಿಧಾನದ ಪ್ರತಿ ಹಿಡಿದು ಹೊರಟಿದ್ದಾರೆ ಎಂದು ಜೋಶಿ ಟೀಕಿಸಿದರು.

ಈ ಸುದ್ದಿಯನ್ನೂ ಓದಿ | KEA Recruitment: ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಕೆಇಎ; ವಿವರ ಇಲ್ಲಿ ನೋಡಿ

ದೇಶದ ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಜನತೆ ತಿರಸ್ಕರಿಸಿದ್ದಾರೆ

ದೇಶದ ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಜನತೆ ತಿರಸ್ಕರಿಸಿದ್ದಾರೆ ಎಂದ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರು, ಕಾಂಗ್ರೆಸ್ ನಾಯಕರಿಗೆ ಸಂವಿಧಾನದ ಮೇಲೆ ಅಷ್ಟು ಗೌರವವಿದ್ದರೆ ಸಂಸತ್ ಅಧಿವೇಶನಕ್ಕೆ ಸಹಕಾರ ನೀಡಲಿ ಮತ್ತು ಸದನವನ್ನು ಸುಗಮಗೊಳಿಸಲಿ ಎಂದು ಅವರು ತಿಳಿಸಿದರು.