Saturday, 23rd November 2024

ಪ್ರವಾದಿಗಳ ಆದರ್ಶ ಸರ್ವಕಾಲಿಕ ಪ್ರಸ್ತುತ: ಸೈಯ್ಯದ ಮೊಹಮ್ಮದ್ ತನ್ವೀರ ಹಾಶ್ಮಿ

ಕೊಲ್ಹಾರ: ಸರ್ವಧರ್ಮ ಸಮನ್ವಯತೆ ಸಾರುವುದೇ ಇಸ್ಲಾಂ ಧರ್ಮದ ತಿರುಳಾಗಿದೆ ಎಂದು ಅಂತರರಾಷ್ಟ್ರೀಯ ಧರ್ಮಗುರು ಸೈಯ್ಯದ ಮೊಹಮ್ಮದ್ ತನ್ವೀರ್ ಹಾಸ್ಮಿ ಹೇಳಿದರು.

ತಾಲೂಕಿನ ಕೂಡಗಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ರಸೂಲ್ ಏ ಆಝಮ್ ಹಾಗೂ ಗೌಸ್ ಏ ಆಝಮ್ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತ ನಾಡಿದ ಅವರು ಪ್ರವಾದಿಗಳ ಬದುಕು ಸರ್ವಕಾಲಕ್ಕೂ ಪ್ರಸ್ತುತ ಅವರ ತತ್ವಾದ ರ್ಶಗಳು ಇಹಲೋಕ ಹಾಗೂ ಪರಲೋಕದ ದಾರಿಗೆ ಮೂಲ ಮಾರ್ಗವಾಗಿದೆ ಎಂದು ಹೇಳಿದರು.

ಇಸ್ಲಾಂ ಪದದ ಅರ್ಥವೇ “ಶಾಂತಿ”ಯಾಗಿದೆ ಪ್ರವಾದಿಗಳು ಶಾಂತಿಯ ಮೂಲಕ ಜಗತ್ತಿಗೆ ಇಸ್ಲಾಂ ಧರ್ಮದ ತಿರುಳನ್ನು ಉಣ ಬಡಿಸಿದ್ದಾರೆ, ಸರ್ವರಂಗದಲ್ಲೂ ಪಾರಂಗತರಾಗಿದ್ದ ಪ್ರವಾದಿಗಳು ಸಮರ್ಥ ಆಡಳಿತಗಾರರು, ಪ್ರಾಮಾಣಿಕ ವ್ಯಾಪಾರಿಗಳು, ಚಾಣಾಕ್ಷ ಯೋಧರು, ಅತ್ಯತ್ತಮ ತತ್ವಜ್ಞಾನಿಗಳು, ಸಮಾಜ ಸುಧಾರಕರು, ಮಹಿಳಾ ವಿಮೋಚಕರು, ಉತ್ತಮ ನ್ಯಾಯಾಧೀಶರು, ಗುಲಾಮರ ರಕ್ಷಕರು ಈ ತೆರೆನಾಗಿ ಸರ್ವರಿಗೂ ಒಳಿತನ್ನು ಬಯಸುವ ಮೂಲಕ ಜನತೆಗೆ ಪರೋಪಕಾರ ಜೀವನ ಅಳವಡಿಸಿ ಕೊಳ್ಳಲು ಕರೆ ನೀಡಿದರು ಅವರ ತತ್ವಾದರ್ಶಗಳ ಜೀವನ ನಮಗೆಲ್ಲ ಇಹ ಹಾಗೂ ಪರಲೋಕಕ್ಕೆ ದಾರಿಯಾಗಿದೆ ಎಂದು ಹೇಳಿದರು.

ಡಾ.ಬಸವಲಿಂಗ ಸ್ವಾಮಿಜಿಗಳು ಮಾತನಾಡುತ್ತಾ ಭೂಮಿಯ ಮೇಲಿರುವ ಸರ್ವ ಧರ್ಮಗಳ ಸಾರ ಮಾನವನ ಕಲ್ಯಾಣದ ಪರೀಕಲ್ಪನೆಯನ್ನು ಸಾರುತ್ತವೆ ಇಸ್ಲಾಂ ಧರ್ಮವು ಕೂಡ ಶಾಂತಿಯ ಸಂದೇಶಗಳನ್ನು ನೀಡುತ್ತಾ ಪ್ರವರ್ಧ ಮಾನಕ್ಕೆ ಬಂದ ಧರ್ಮವಾಗಿದೆ ಸ್ವಾಮಿ ವಿವೇಕಾನಂದರು ಇಸ್ಲಾಮ್‌ನ ಕುರಿತು ಸಮತ್ವವನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಿದ ಧರ್ವವೆಂದರೆ ಅದು ಇಸ್ಲಾಮ್ ಧರ್ಮ ಎಂದು ಹೇಳಿದ್ದಾರೆ ಎಂದರು.

ಶಾಸಕ ಶಿವಾನಂದ ಪಾಟೀಲ್ ಮಾತನಾಡಿದರು. ಈ ಸಂದರ್ಭದಲ್ಲಿ ಮುಪ್ತಿ ಮೊಹಮ್ಮದ್ ಅಲಿ ಖಾಜಿ ಮಿಸ್ಬಾಯಿ, ಮಹೇರಾಜ ಪೀರಾ ಜಹಾಗಿರದಾರ, ಅಂಜುಮನ್ ಕಮಿಟಿ ಅಧ್ಯಕ್ಷ ಕಾಶಿಂ ಕೊಡಗಾನೂರ, ಮುಖಂಡ ಗ್ರಾ ಪಂ ಸದಸ್ಯ ಆರೀಪ ತಾಳಿಕೋಟಿ
ಅಬ್ದುಲ್ ರಜಾಕ ಕೊಳ್ಳಿ, ಜಾವೀದ ಬಿಜಾಪೂರ, ಈಶ್ವರ್ ಜಾದವ್ ಮುಂತಾದವರು ಇದ್ದರು.