ಬೆಂಗಳೂರು: ಅಭಿಮಾನಿಗಳ ಕಣ್ಮಣಿ, ಕರುನಾಡ ಕಂದ ಪುನೀತ್ ರಾಜ್‌ಕುಮಾರ್ (Puneeth Rajkumar) ಇಲ್ಲದೆ 3 ವರ್ಷಗಳು ಸರಿದಿವೆ. ಆದರೆ ಕನ್ನಡಿಗರ ಹೃದಯದಲ್ಲಿ ಅಪ್ಪು ಅಜರಾಮರ ಆಗಿದ್ದಾರೆ. ಅವರ ಮೂರನೇ ವರ್ಷದ ಪುಣ್ಯಸ್ಮರಣೆ (Puneeth Death Anniversary) ಇಂದು ನಡೆಯಲಿದೆ.
ಅಪ್ಪು ಕುಟುಂಬಸ್ಥರು ಹಾಗು ದೊಡ್ಮನೆ ಅಭಿಮಾನಿಗಳು ಇದರಲ್ಲಿ ಭಾಗಿಯಾಗಲಿದ್ದಾರೆ. ರಾಜ್ಯದ ಎಲ್ಲಾ ಭಾಗಗಳಿಂದ ಅಪ್ಪು ಫ್ಯಾನ್ಸ್ ಇಂದು ಅಪ್ಪು ಸಮಾಧಿಗೆ ಆಗಮಿಸಲಿದ್ದಾರೆ. ಇಂದು ಬೆಳಗ್ಗೆ 10 ಗಂಟೆಗೆ ರಾಘವೇಂದ್ರ ರಾಜಕುಮಾರ್ ಕುಟುಂಬ ಅಪ್ಪು 3ನೇ ವರ್ಷದ ಪುಣ್ಯಸ್ಮರಣೆಯಲ್ಲಿ ಭಾಗಿಯಾಗಲಿದ್ದಾರೆ.
ಅಶ್ವಿನಿ ಪುನೀತ್ ರಾಜಕುಮಾರ್, ಶಿವಣ್ಣ ಭಾಗಿಯಾಗುವ ಸಾಧ್ಯತೆ ಇದೆ. ಕಳೆದ ಎರಡು ವರ್ಷಗಳಂತೆ ಈ ವರ್ಷವೂ ಅನ್ನಸಂತರ್ಪಣೆ, ನೇತ್ರದಾನ, ರಕ್ತದಾನ ಶಿಬಿರ ಸಹ ಆಯೋಜನೆಗೊಳ್ಳಲಿದೆ. ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ಅಭಿಮಾನಿಗಳಿಗಾಗಿ ಅನ್ನದಾನದ ವ್ಯವಸ್ಥೆ ಮಾಡಿಸಿದ್ದಾರೆ. ಇಂದು ಬೇರೆ ಬೇರೆ ಊರುಗಳಿಂದ ಬಹಳಷ್ಟು ಮಂದಿ ಅಪ್ಪು ಸಮಾಧಿ ದರ್ಶನಕ್ಕೆ ಬರಲಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ರಿಂಗ್ ರಸ್ತೆಗೆ ಡಾ.ಪುನೀತ್ ರಾಜಕುಮಾರ್ ಹೆಸರು: ಇಂದು ಕಾರ್ಯಕ್ರಮ