Monday, 30th December 2024

ಪುರಸಭೆ ಸಾಮಾನ್ಯ ಸಭೆಯಲ್ಲಿ ಬೆರಳೆಣಿಕೆಯಷ್ಟು ಸದಸ್ಯರು ಮಾತ್ರ ಹಾಜರು

ಹರಪನಹಳ್ಳಿ: ಪಟ್ಟಣದ ಪುರಸಭೆಯಲ್ಲಿ ಆಯೋಜಿಸಲಾಗಿದ್ದ ಸಾಮಾನ್ಯ ಸಭೆಯಲ್ಲಿ ಬರೇ ಬೆರಳೆಣಿಕೆಯಷ್ಟು ಸದಸ್ಯರು ಹಾಜರಿದ್ದು, ಇನ್ನೂಳಿದ ಸದಸ್ಯರು ಗೈರು ಹಾಜರಿದ್ದು, ಇದ್ದ ಸದಸ್ಯರ ಹಾಜರಾತಿಯಲ್ಲೇ ಮಂಗಳವಾರ ಪುರಸಭೆ ಅಧ್ಯಕ್ಷ ಮಂಜುನಾಥ ಇಜಂತ್ಕರ್, ರವರ ನೇತೃತ್ವದಲ್ಲಿ ಸಾಮಾನ್ಯ ಸಭೆ ಜರುಗಿಸಿದರು.
ಪುರಸಭೆ ವ್ಯಾಪ್ತಿಯಲ್ಲಿ ನಾಗರೀಕ ಸೌಲಭ್ಯಕ್ಕಾಗಿಕಾಯ್ದಿರಿಸಿರುವ(ಸಿಎ) ಸೈಟುಗಳು ಮಾರಾಟವಾದ ದೂರು ಗಳಿದ್ದು, ಪರಿಶೀಲಿಸಿ ಪೆನ್ಸಿಂಗ್ ಹಾಕಿ ಕ್ರಮ ಕೈಗೊಳ್ಳಲು ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಸಭೆಯ ಮಧ್ಯೆ ಪ್ರಸ್ಥಾಪಿಸಿದ ಹಿರಿಯ ಸದಸ್ಯ ಎಂ.ವಿ.ಅಂಜಿನಪ್ಪ ಅವರು ಪಟ್ಟಣ ವ್ಯಾಪ್ತಿಯಲ್ಲಿ ಸಿಎ ಸೈಟುಗಳಿಗೆ ಡೋರ್ ನಂಬರು ನೀಡಿ ಮಾರಾಟ ಮಾಡಿದ್ದಾರೆ ಎಂದು ಮಾಹಿತಿಯಿದೆ, ಕೂಲಕುಂಷವಾಗಿ ಪರಿಶೀಲಿಸಿ ಸ್ಥಳ ಸಮೇತ ಪಟ್ಟಿ ಮಾಡಿ ಮಾಹಿತಿ ಕೊಡಿ ಎಂದು ಹೇಳಿದರು. ಸದಸ್ಯರಾದ ಅಬ್ದುಲ್‌ ರಹಿಮಾನ, ಟಿ.ವೆಂಕಟೇಶ, ಗೊಂಗಡಿ ನಾಗರಾಜ, ಲಾಟಿ ದಾದಾಪೀರ, ಉದ್ದಾರಗಣೇಶ ಸಹ ಬೆಂಬಲಿಸಿ ಮಾತನಾಡಿದಾಗ ಪರಿಶೀಲಿಸಿ ಪಟ್ಟಿ ಮಾಡಿ ಪೆನ್ಸಿಂಗ್ ಹಾಕಲು ತೀರ್ಮಾನಿಸಲಾಯಿತು. ಕೋವಿಡ್ ೩ನೇ ಅಲೆ ಎದುರಿಸಲು ಪಾಗಿಂಗ್‌ ಯ0ತ್ರ, ಬ್ಲಿಚೀಂಗ್ ಪೌಡರ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಖರೀದಿಸಿ ಸಕಲ ಸಿದ್ದತೆ ಮಾಡಿಕೊಳ್ಳಬೇಕು ಎಂದು ಎಂ.ವಿ.ಅಂಜಿನಪ್ಪ ಹೇಳಿದರು.

ಪಟ್ಟಣದಲ್ಲಿ ೬೫ ಕಮರ್ಷಿಯಲ್ ಸೇರಿದಂತೆ, ೪೪೨೫ ಅನಧಿಕೃತ ನಳಗಳಿವೆ, ೪೨೭ ಅನಧಿಕೃತ ನಳಗಳಿವೆ, ನಿಯಾಮಾನುಸಾರ ಅನಧೀಕೃತ ನಳಗಳನ್ನು ಸಕ್ರಮ ಗೊಳಿಸಲು ನಾಮನಿರ್ದೇಶಿತ ಸದಸ್ಯರುದ್ರಪ್ಪ ನವರ ಪ್ರಶ್ನೆಗೆ ಅಧ್ಯಕ್ಷ ಮಂಜುನಾಥ ಇಜತಂಕರ್ ಹಾಗೂ ಮುಖ್ಯಾಧಿಕಾರಿ ನಾಗರಾಜ ನಾಯ್ಕಒಪ್ಪಿಗೆ ಸೂಚಿಸಿದರು.

ಪಟ್ಟಣದಲ್ಲಿ ಪೊಲೀಸ್‌ ಇಲಾಖಾ ವತಿಯಿಂದ ವಿವಿಧಕಡೆ ಸಿಸಿ ಕ್ಯಾಮರಗಳನ್ನು ಅಳವಡಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಪುರಸಭೆ ವತಿಯಿಂದಲೂಎರಡು ವೃತ್ತಗಳಲ್ಲಿ ಸಿಸಿ ಕ್ಯಾಮರ ಅಳವಡಿಸುವಂತೆ ಎಂ.ವಿ.ಅಂಜಿನಪ್ಪ, ಅಬ್ದುಲ್‌ ರಹಿಮಾನ್, ವೆಂಕಟೇಶ, ಗೊಂಗಡಿ ನಾಗರಾಜ, ಉದ್ದಾರ ಗಣೇಶ ಒತ್ತಾಯಿಸಿದಾಗ ಸಭೆ ಒಪ್ಪಿಗೆ ನೀಡಿತು. ಪಟ್ಟಣದಲ್ಲಿ ಸಾಕಷ್ಟು ಡೋರ ನಂಬರುಗಳನ್ನು ರದ್ದು ಮಾಡಲಾಗಿದೆ. ರದ್ದಾದವುಗಳನ್ನು ಪರಿಶೀಲಿಸಿ ನಿಯಮಾನುಸಾರ ಡೋರ್ ನಂಬರು ನೀಡಿ ಎಂದು ಅಬ್ದುಲ್‌ ರಹಿಮಾನ್ ಒತ್ತಾಯಿಸಿದರು.

ಪುರಸಭೆಗೆ ಖಾತಾ ಬದಲಾವಣೆ, ಈ ಸ್ವತ್ತು ಸೇರಿದಂತೆ ಎಷ್ಟು ಅರ್ಜಿಗಳು ಬಂದಿವೆ, ಎಷ್ಟು ವಿಲೇವಾರಿ ಮಾಡಲಾಗಿದೆ ಮಾಹಿತಿ ಕೊಡಿ ಎಂದು ಎಂ.ವಿ.ಅಂಜಿನಪ್ಪ ಕೋರಿದಾಗ ಸಂಬಂಧ ಪಟ್ಟ ಅಧಿಕಾರಿಗಳಿಂದ ನಿರುತ್ತರ ಬಂದಿತು. ಮುಂದೆ ಆ ರೀತಿ ಆಗದಂತೆ ಮಾಹಿತಿ ಪುಸ್ತಕ ನಿರ್ವಹಣೆ ಮಾಡಿ ಎಂದು ಅವರು ಹೇಳಿದರು.

ಈ ಸಾಮಾನ್ಯ ಸಭೆಯಲ್ಲಿ ಬಿಜೆಪಿಯ ಅಧ್ಯಕ್ಷ ಮಂಜುನಾಥ ಇಜಂತ್ಕರ್ ಹಾಗೂ ಉಪಾಧ್ಯಕ್ಷೆ ನಿಟ್ಟೂರು ಭೀಮವ್ವರನ್ನು ಹೊರತು ಪಡಿಸಿ ಉಳಿದ ೦೮ ಜನ ಬಿಜೆಪಿ ಸದಸ್ಯರು ಹಾಗೂ ೦೪ ಜನ ಕಾಂಗ್ರೆಸ್ ಸದಸ್ಯರು ಗೈರು ಹಾಜರಿದ್ದರು. ಇದನ್ನು ಗಮನಿಸಿದರೆ ಆಡಳಿತರೂಢ ಬಿಜೆಪಿಯಲ್ಲಿ ಅಸಮಧಾನದ ಹೊಗೆಯಾಡುತ್ತಿದೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ.

ಅಧ್ಯಕ್ಷ ಮಂಜುನಾಥ ಇಜಂತಕರ್‌ ಅಧ್ಯಕ್ಷತೆ ವಹಿಸಿದ್ದರು. ಉಪಾದ್ಯಕ್ಷ ಭೀಮವ್ವ, ಮುಖ್ಯಾಧಿಕಾರಿ ನಾಗರಾಜ ನಾಯ್ಕ್, ಆರೋಗ್ಯ ನಿರೀಕ್ಷಕ ಮಂಜುನಾಥ, ಕಚೇರಿ ವ್ಯವಸ್ಥಾಪಕ ಅಶೋಕ, ಕಂದಾಯಅಧಿಕಾರಿ ಸವಿತಾ ಇತರರು ಹಾಜರಿದ್ದರು.