Sunday, 15th December 2024

ಸಡಗರದಿಂದ ರಂಜಾನ್ ಆಚರಿಸಿದ ಮುಸ್ಲಿಂ ಸಹೋದರರು

ಕೋವಿಡ್ ಕರೆಛಾಯದ ಎರಡು ವರ್ಷ ಗಳ ನಂತರ ಮತ್ತೆ ಈದ್ಗ್ ಮೈದಾನದಲ್ಲಿ ನಡೆದ ಈದುಲ್ ಪೀತರ್ ನಾಮಾಝ್

ಪಾವಗಡ : ಪಾವಗಡ ಕಳೆದ ಒಂದು ತಿಂಗಳಲ್ಲೇ ಉಪವಾಸ, ಶ್ರದ್ಧೆಯಿಂದ ಕುರಾನ್ ಪಟಿಸಿ ನಂತರ ದಾನ ಧರ್ಮದ ಮೂಲಕ ಈದುಲ್ ಪಿತರ್ ನಾಮಾಜ್ ನ್ನು ಈದ್ಗ್ ಮೈದಾನದಲ್ಲಿ ಸಾವಿರಾರು ಸಮುದಾಯದ ಸಂಯುಕದಲ್ಲಿ ಶಾಂತಿಯುತವಾಗಿ ನೆರೆವೇರಿತು.

ಇದೇ ವೇಳೆ ಈದ್ಗ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಮೋಹಿಕ ಪ್ರಾರ್ಥನೆ ನಡೆಸಿ ಪ್ರವಚನ ಮೂಲಕ ಮಾತ ನಾಡಿದ ಮುಬಾರಕ್ ಪೆಶುಮಾಮ್ ರವರು, ಹಬ್ಬ ಎಂದರೆ ಆಡಂಬರ ದಿಂದ ಅಚರಿಸುವುದಲ್ಲ ಮೊದಲು ಮನೆಯ ಸುತ್ತಮುತ್ತಲಿನ ಬಡವರ ಬಗ್ಗೆ ಹಾಗೂ ಪೋಷಕರು ಇಲ್ಲದ ಕುಟುಂಬ ಗಳ ಹಾಗೂ ನಿರ್ಗತಿಕರ ಬಗ್ಗೆ ಗಮನ ಹರಿಸಿ ಅವರಿಗೆ ಸಹಾಯ ಹಸ್ತ ಮಾಡುವುದರಿಂದ ಬರುವ ಸಂತೋಷವೇ ಆಡಂಬರದ ಹಬ್ಬದ ಅರ್ಥ ಎಂಬು ದಾಗಿ ಪ್ರಪೆಟ್ ಮಹಮದ್ ಅವರ ಇತಿಹಾಸದಲ್ಲಿ ತಿಳಿಸಿದ್ದಾರೆ.

ಪಶುಆಸ್ಪತ್ರೆ ಮುಂದೆ ಪಟ್ಟಣದ ಎಲ್ಲಾ ಸಮುದಾಯದವರು ಸೇರಿ ಅಲ್ಲಿಂದ ದೇವರನ್ನು ಸ್ಮರಿಸಿಕೊಂಡು ಈದ್ಗ್ ಮೈದಾನಕ್ಕೆ ಸೇರಿ ಅಲ್ಲಿ ಈದುಲ್ ಪಿತರ್ ಪ್ರಾರ್ಥನೆ ನಡೆಸಿ ನಂತರ ಒಬ್ಬರಿಗೊಬ್ಬರು ಹಬ್ಬದ ಶುಭಾಶಯ ಕೋರಿದರು.

ಇದೇ ವೇಳೆ ತಹಸೀಲ್ದಾರ್ ವರದರಾಜ್ ಈದ್ಗ್ ಮೈದಾನಕ್ಕೆ ತೆರಳಿ ಮುಸ್ಲಿಂ ಸಮುದಾಯಕ್ಕೆ ಶುಭಾಶಯ ಕೋರಿದರು. ಇದೇ ವೇಳೆ, ಪಾವಗಡ ಸಿಪಿಐ ಲಕ್ಮೀಕಾಂತ್ ರವರು ಸಹ ರಂಜಾನ್ ಹಬ್ಬದ ಶುಭಾಶೆಯಗಳು ಕೋರಿದರು.

ಈ ವೇಳೆ ಜಾಮೀಯ ಮಸೀದಿಯ ಹಿರಿಯರಿಂದ ತಹಸೀಲ್ದಾರ್ ವರದರಾಜ ರವರಿಗೆ ಮತ್ತು ಸಿಪಿಐ ಲಕ್ಮೀಕಾಂತ ರವರಿಗೆ ಗೌರವಿಸಿದರು. ಇದೇ ವೇಳೆ ಈದ್ಗ್ ಮೈದಾನದಲ್ಲಿ ಪ್ರಾರ್ಥನೆಗೆ ಬಂದ ಮುಸ್ಲಿಂ ಸಮುದಾಯದವರಿಗೆ ಮಂಜುಳಾ ನೇತ್ರಾಲಯವತಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.

ಮಕ್ಕಳು ಹಿರಿಯರು ಹೊಸ ಹೊಸ ಉಡುಪುಗಳನ್ನು ಧರಿಸಿ ಈದ್ಗಾ ಮೈದಾನದಲ್ಲಿ ಭಾಗವಹಿಸಿದರು. ಈ ವೇಳೆ, ಮುಸ್ಲಿಂ ಮುಖಂಡರುಗ ಫಜ್ ಸಾಬ್, ಅನ್ವರ್ ಸಾಬ್, ಆರ್.ಕೆ.ನಿಸಾರ್, ಆರ್.ಟಿ.ಖಾನ್, ಹಶ್ಮತ್, ರಿಜ್ವಾನ ಉಲ್ಲಾ, ಬಾಬು, ಫರದ್ದಿನ್, ಇಸ್ಮಾಯಿಲ್ ಸಾಬ್, ಜಬೀ ಶಬ್ಬಿರ್ ಇತರರು ಸಾವಿರಾರು ಮಂದಿ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.